Heatstroke: ಬಿಹಾರದಲ್ಲಿ ಬಿಸಿಲಿನ ತಾಪಕ್ಕೆ ಒಂದೇ ದಿನದಲ್ಲಿ 10 ಚುನಾವಣಾ ಸಿಬ್ಬಂದಿ ಸೇರಿ 14 ಮಂದಿ ಸಾವು

ಉತ್ತರ ಪ್ರದೇಶ ಮತ್ತು ಬಿಹಾರದ ವಿವಿಧ ಭಾಗಗಳಲ್ಲಿ ಲೋಕಸಭೆ ಚುನಾವಣೆಗೆ ನಿಯೋಜಿಸಲಾಗಿದ್ದ ಹಲವಾರು ಚುನಾವಣಾ ಸಿಬ್ಬಂದಿ ಕಳೆದ 24 ಗಂಟೆಗಳಲ್ಲಿ ತಾಪಮಾನದ ವಿಪರೀತ ಏರಿಕೆಯಿಂದಾಗಿ ಸಾವನ್ನಪ್ಪಿದ್ದಾರೆ. ಬಿಹಾರವು ಪ್ರಸ್ತುತ ವಿಪರೀತ ಶಾಖವನ್ನು ಅನುಭವಿಸುತ್ತಿದೆ, ಹಲವಾರು ಪ್ರದೇಶಗಳಲ್ಲಿ ತಾಪಮಾನವು 44 ಡಿಗ್ರಿ ಸೆಲ್ಸಿಯಸ್ ಮೀರಿದೆ. ಗುರುವಾರ, ಬಕ್ಸಾರ್‌ನಲ್ಲಿ ಗರಿಷ್ಠ ತಾಪಮಾನ 47.1 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

Heatstroke: ಬಿಹಾರದಲ್ಲಿ ಬಿಸಿಲಿನ ತಾಪಕ್ಕೆ ಒಂದೇ ದಿನದಲ್ಲಿ 10 ಚುನಾವಣಾ ಸಿಬ್ಬಂದಿ ಸೇರಿ 14 ಮಂದಿ ಸಾವು
ಬಿಸಿಲಿನ ತಾಪ

Updated on: May 31, 2024 | 8:54 PM

ಪಾಟ್ನಾ: ಬಿಹಾರದಲ್ಲಿ (Bihar) ಕಳೆದ 24 ಗಂಟೆಗಳಲ್ಲಿ 10 ಮಂದಿ ಚುನಾವಣಾ ಮತಗಟ್ಟೆ ಸಿಬ್ಬಂದಿ ಸೇರಿದಂತೆ 14 ಜನರು ಬಿಸಿಲ ತಾಪಕ್ಕೆ ಬಲಿಯಾಗಿದ್ದಾರೆ. ವಿಪತ್ತು ನಿರ್ವಹಣಾ ಇಲಾಖೆಯ ಹೇಳಿಕೆಯ ಪ್ರಕಾರ, ಈ ಸಾವುಗಳಲ್ಲಿ ಹೆಚ್ಚಿನವು ಭೋಜ್‌ಪುರದಲ್ಲಿ ಸಂಭವಿಸಿವೆ. ಅಲ್ಲಿ 5 ಚುನಾವಣಾ ಕರ್ತವ್ಯ ಅಧಿಕಾರಿಗಳು ಬಿಸಿಲ ಶಾಖದ ಹೊಡೆತದಿಂದ ಸಾವನ್ನಪ್ಪಿದ್ದಾರೆ. ಉತ್ತರ ಭಾರತದಲ್ಲಿ ಬಿಸಿಲಿನ ತಾಪ (Heatstroke)  ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು, ಹೈ ಅಲರ್ಟ್ ಘೋಷಿಸಲಾಗಿದೆ. ಬಿಹಾರದ ಬಹುತೇಕ ಸ್ಥಳಗಳಲ್ಲಿ 44 ಡಿಗ್ರಿ ತಾಪಮಾನ ದಾಖಲಾಗಿದೆ. ಬಕ್ಸಾರ್​ನಲ್ಲಿ ಗುರುವಾರ ದಾಖಲೆಯ 47.1 ಡಿಗ್ರಿ ತಾಪಮಾನ ದಾಖಲಾಗಿತ್ತು.

ರೋಹ್ಟಾಸ್‌ನಲ್ಲಿ ಮೂವರು ಚುನಾವಣಾ ಅಧಿಕಾರಿಗಳು ಮತ್ತು ಕೈಮೂರ್ ಮತ್ತು ಔರಂಗಾಬಾದ್ ಜಿಲ್ಲೆಗಳಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದಾರೆ. ರಾಜ್ಯದ ವಿವಿಧೆಡೆ ಇನ್ನೂ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ಹೇಳಿಕೆ ತಿಳಿಸಿದೆ. ಮೃತರ ಕುಟುಂಬಗಳಿಗೆ ಪರಿಹಾರ ನೀಡುವ ಪ್ರಕ್ರಿಯೆ ಆರಂಭವಾಗಿದೆ.

ಇದನ್ನೂ ಓದಿ: ಉತ್ತರ ಭಾರತದಲ್ಲಿ ಭಾರೀ ಬಿಸಿಲು; ನಾಗ್ಪುರದಲ್ಲಿ 56 ಡಿಗ್ರಿ ಸೆಲ್ಸಿಯಸ್ ತಾಪಮಾನ?

ಬಿಸಿಗಾಳಿಯಿಂದಾಗಿ ಬಿಹಾರದಲ್ಲಿ ಎಲ್ಲಾ ಶಾಲೆಗಳು, ಕೋಚಿಂಗ್ ಸಂಸ್ಥೆಗಳು ಮತ್ತು ಅಂಗನವಾಡಿ ಕೇಂದ್ರಗಳನ್ನು ಜೂನ್ 8ರವರೆಗೆ ಮುಚ್ಚಲಾಗಿದೆ.

ಒಂದೇ ದಿನದಲ್ಲಿ 14 ಮಂದಿ ಸಾವನ್ನಪ್ಪುವ ಮೂಲಕ ಬಿಸಿಗಾಳಿಯಿಂದ ಬಿಹಾರದಾದ್ಯಂತ ಇದುವರೆಗೂ ಒಟ್ಟು 24 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ರಾಜ್ಯದಲ್ಲಿ ತಾಪಮಾನ 44 ಡಿಗ್ರಿ ಸೆಲ್ಸಿಯಸ್‌ ಮೀರಿದೆ. ಬಿಹಾರದ ಔರಂಗಾಬಾದ್ ಜಿಲ್ಲೆಯ ಆಸ್ಪತ್ರೆಯಲ್ಲಿ ಕನಿಷ್ಠ 5 ಜನರು ಸಾವನ್ನಪ್ಪಿದ್ದಾರೆ. ಗುರುವಾರ ಕೈಮೂರ್ ಜಿಲ್ಲೆಯಲ್ಲಿ ಚುನಾವಣಾ ಕರ್ತವ್ಯದಲ್ಲಿದ್ದ ಕಾರ್ಮಿಕ ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದಾರೆ. ಭೋಜ್‌ಪುರದ ಅರ್ರಾದಲ್ಲಿ ಮೂರು ಸಾವುಗಳು ವರದಿಯಾಗಿವೆ. ಬಿಹಾರದ ಸಸಾರಾಮ್‌ನಲ್ಲಿನ ಮತದಾನ ಕೇಂದ್ರದಲ್ಲಿ ನಿಯೋಜಿಸಲಾದ ಹಲವಾರು ಭದ್ರತಾ ಸಿಬ್ಬಂದಿ ತೀವ್ರ ತಾಪಮಾನದಿಂದಾಗಿ ಅಸ್ವಸ್ಥರಾಗಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ