ಹೈದರಾಬಾದ್ ಮತ್ತು ತೆಲಂಗಾಣದ ಮೇಡ್ಚಲ್-ಮಲ್ಕಾಜಗಿರಿ ಮತ್ತು ರಂಗಾರೆಡ್ಡಿ ಜಿಲ್ಲೆಗಳಲ್ಲಿ ನಿನ್ನೆಯಿಂದ ವಿಪರೀತ ಮಳೆ (Heavy Rainfall)ಯಾಗುತ್ತಿದೆ. ನಿನ್ನೆ ಸಂಜೆ ಸುರಿದ ಭರ್ಜರಿ ಮಳೆಗೆ ರಸ್ತೆಗಳಲ್ಲೆಲ್ಲ ನೀರು ತುಂಬಿದೆ. ಮನೆಗಳು, ವಿವಿಧ ಕಚೇರಿಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ. ಧಾರಾಕಾರವಾಗಿ ಸುರಿದ ಮಳೆಯಿಂದ ಚರಂಡಿಗಳೆಲ್ಲ ತುಂಬಿ ಹರಿದಿದೆ. ಇದರಿಂದಾಗಿ ಇಬ್ಬರು ಚರಂಡಿಯ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಅವರನ್ನು ಹುಡುಕುವ ಕಾರ್ಯ ನಡೆಯುತ್ತಿದೆ ಎಂದು ಎಸಿಪಿ ಕೆ.ಪುರುಶೋತ್ತಮ್ ತಿಳಿಸಿದ್ದಾರೆ. ಹಾಗೇ, ಓಲ್ಡ್ ಸಿಟಿ ಏರಿಯಾದಲ್ಲಿ ನಿಲ್ಲಿಸಿದ್ದ ಟೆಂಪೋ ಟ್ರಕ್ವೊಂದು ಕೊಚ್ಚಿಕೊಂಡು ಹೋಗಿದೆ. ಇಲ್ಲಿನ ರೆಸ್ಟೋರೆಂಟ್ವೊಂದರಲ್ಲಿ ಕೂಡ ನೀರು ತುಂಬಿದೆ.
ವಿಪರೀತ ಮಳೆಯಿಂದಾಗಿ ಹೈದರಾಬಾದ್ನಲ್ಲಿ ವಾಹನ ಮತ್ತು ಜನಸಂಚಾರ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ಜನರು ಸಾಧ್ಯವಾದಷ್ಟು ಮನೆಯಲ್ಲೇ ಇರಬೇಕು. ಮಳೆ ಅಧಿಕವಾಗಿ, ಹೊರಗೆಲ್ಲ ಅಸ್ತವ್ಯಸ್ತವಾಗಿದ್ದು, ಮನೆಯಿಂದ ಹೊರಬರಬೇಡಿ ಎಂದು ಗ್ರೇಟರ್ ಹೈದರಾಬಾದ್ನ ಮುನ್ಸಿಪಲ್ ಕಾರ್ಪೋರೇಶನ್ನ ಜಾರಿ, ಜಾಗರೂಕತೆ ಮತ್ತು ವಿಪತ್ತು (EVDM)ವಿಭಾಗ ಎಚ್ಚರಿಕೆ ನೀಡಿದೆ. ಸದ್ಯ ರಂಗಾರೆಡ್ಡಿ, ಮೇಡ್ಚಲ್-ಮಲ್ಕಾಜಗಿರಿ, ಜುಬಿಲಿ ಹಿಲ್ಸ್, ಅಂಬರ್‌ಪೇಟೆ, ನಾಂಪಲ್ಲಿ, ಹಳೆಯ ಮಲಕಪೇಟೆ, ಯಾಕುತ್ಪೂರ, ಎಲ್‌ಬಿ ನಗರ ಮತ್ತು ವನಸ್ಥಾಲಿಪುರಗಳಲ್ಲಿ ಭಾರೀ ಮಳೆಯಾಗಿದೆ. ಹೈದರಾಬಾದ್ನಲ್ಲಿ ಇಂದು ಕೂಡ ಅತ್ಯಧಿಕ ಮಳೆ ಮುಂದುವರಿಯುವ ಸಾಧ್ಯತೆ ಇದೆ.
#WATCH | Telangana: Lanes, roads submerged following incessant rainfall in Hyderabad. Visuals from the Old city. (08.10) pic.twitter.com/5XCGtsmIwt
— ANI (@ANI) October 8, 2021
#WATCH | Telangana: Rainwater entered a restaurant in Old City after incessant rains lashed Hyderabad, yesterday pic.twitter.com/ACLKd1Vb19
— ANI (@ANI) October 9, 2021
ಇದನ್ನೂ ಓದಿ: ನಿರ್ಮಾಪಕ ಇಮ್ತಿಯಾಜ್ ಖತ್ರಿ ಮನೆ ಮೇಲೆ ಎನ್ಸಿಬಿ ದಾಳಿ; ಬಾಲಿವುಡ್ ಸೆಲೆಬ್ರಿಟಿಗಳಿಗೆ ನಡುಕ ಶುರು