ಕೆಲ ದಿನಗಳ ಹಿಂದಿನ ಮಾತು. ವಾಟ್ಸಾಪ್ ಸ್ಟೇಟಸ್ಗಳಲ್ಲಿ, ಗ್ರೂಪ್ಗಳಲ್ಲಿ ಬರುವ ವಿಡಿಯೋಗಳಲ್ಲಿ, ಫೇಸ್ಬುಕ್ನಲ್ಲಿ, ಇನ್ಸ್ಟಾಗ್ರಾಂನಲ್ಲಿ….ಕೊನೆಗೆ ಟ್ವಿಟ್ಟರ್ನಲ್ಲೂ ಅದೇ ವಿಡಿಯೋ. ಆ ವಿಡಿಯೋ ಬೇರೆ ಯಾವುದೂ ಅಲ್ಲ. ಫೋಟೋಗ್ರಾಫರ್ ಓರ್ವ ವಧುವಿನ ಫೋಟೋ ತೆಗೆಯಲು ಹೋಗಿ ವರನಿಂದ ಹೊಡೆತ ತಿಂದಿದ್ದು. ಈ ವಿಡಿಯೋದ ಅಸಲಿ ಸತ್ಯ ಈಗ ಬಯಲಾಗಿದೆ.
ಈ ಘಟನೆಯನ್ನು ಒಮ್ಮೆ ಮೆಲುಕು ಹಾಕೋದಾದರೆ, ಮದುವೆ ದಿನ ಗಂಡು ಹೆಣ್ಣು ವೇದಿಕೆ ಮೇಲೆ ನಿಂತಿದ್ದರು. ವೇದಿಕೆಯನ್ನು ಹೂವಿನಿಂದ ಅಲಂಕಾರ ಮಾಡಲಾಗಿತ್ತು. ಈ ವೇಳೆ ಮದುವೆ ಹುಡುಗಿಯ ಎದುರು ಬಂದ ಫೋಟೋಗ್ರಾಫರ್ ಫೋಟೋ ಕ್ಲಿಕ್ಕಿಸಲು ಆರಂಭಿಸಿದ್ದ. ಕೆಲವೊಂದು ಹತ್ತಿರದ ಶಾಟ್ಗಳನ್ನು ತೆಗೆದರೆ, ಇನ್ನೂ ಕೆಲವು ದೂರದ ಶಾಟ್ಗಳನ್ನು ತೆಗೆಯುತ್ತಿದ್ದ. ಆದರೆ, ಹುಡುಗಿ ಪಕ್ಕ ನಿಂತ ಮದುವೆ ಗಂಡಿನ ಒಂದೇ ಒಂದು ಫೋಟೋವನ್ನು ಛಾಯಾಗ್ರಾಹಕ ತೆಗೆದಿರಲಿಲ್ಲ.
ವೇದಿಕೆಯ ಮೇಲೆ ಹುಡುಗಿ ಮಾತ್ರ ಇದ್ದಾಳೆ ಎಂಬಂತಿತ್ತು ಛಾಯಾಗ್ರಾಹಕನ ವರ್ತನೆ. ಮದುವೆ ಗಂಡು ಕೂಡ ತುಂಬಾನೇ ತಾಳ್ಮೆಯಿಂದ ಇದನ್ನು ನೋಡುತ್ತಲೇ ಇದ್ದ. ಸಮಯ ಕಳೆದಂತೆ ಹುಡುಗಿ ಸಮೀಪ ಹೋಗುತ್ತಿದ್ದದ್ದನ್ನು ನೋಡಿ ಮದುವೆ ಗಂಡಿನ ಪಿತ್ತ ನೆತ್ತಿಗೇರಿತ್ತು. ತಡ ಮಾಡದೆ, ಛಾಯಾಗ್ರಾಹಕನ ತಲೆಗೆ ಹೊಡೆದೇ ಬಿಟ್ಟ ಮದುಮಗ.
I just love this Bride ?????? pic.twitter.com/UE1qRbx4tv
— Renuka Mohan (@Ease2Ease) February 5, 2021
ಈ ಘಟನೆ ನಂತರ ಮದುವೆ ಹುಡುಗಿ ಬಿದ್ದು ಬಿದ್ದು ನಕ್ಕಿದ್ದಳು. ಅಷ್ಟೇ ಅಲ್ಲ, ಛಾಯಾಗ್ರಾಹಕನ ಮುಖದಲ್ಲಿ ಸಣ್ಣದಾದ ನಗು ಇತ್ತು. ಇದನ್ನು ನೋಡಿದ ಅನೇಕರು ಇದು ಯಾರೋ ಹೇಳಿ ಮಾಡಿಸಿದ ವಿಡಿಯೋ ಏಂದು ಹೇಳಿಕೊಂಡಿದ್ದರು. ಈ ವಿಡಿಯೋದ ಅಸಲಿ ವಿಚಾರ ಕೊನೆಗೂ ಬಯಲಾಗಿದೆ. ವಿಡಿಯೋದಲ್ಲಿದ್ದ ಹುಡುಗಿಯೇ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
Ye meri movie shoot k time ki vdo h !! ? Thank u for sharing pic.twitter.com/DaN4jONJEQ
— Anikriti Chowhan (@ChowhanAnikriti) February 6, 2021
ವಿಡಿಯೋದಲ್ಲಿರುವವರು ಛತ್ತೀಸ್ಗಢದ ನಟಿ ಅನಿಕೃತಿ ಚೌಹಾಣ್. ಇದೊಂದು ಸಿನಿಮಾದ ಶೂಟಿಂಗ್ ದೃಶ್ಯವಂತೆ. ಈ ಬಗ್ಗೆ ಬರೆದುಕೊಂಡಿರುವ ನಟಿ, ಇದು ನನ್ನ ಸಿನಿಮಾ ‘ಡಾರ್ಲಿಂಗ್ ಪ್ಯಾರ್ ಜುಕ್ತಾ ನಹಿ’ ವೀಡಿಯೊ ಎಂದು ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ: ವಧುವಿನ ಫೋಟೋ ತೆಗೆಯಹೋದ ಫೋಟೋಗ್ರಾಫರ್ ಬುರುಡೆ ಕಳಚಿ ಬೀಳುವಂತೆ ಹೊಡೆದ ಮದುಮಗ: ವಿಡಿಯೋ ವೈರಲ್