ರೈಲಿನ ಕಿಟಕಿಯಿಂದ ಹೊರಗೆ ಬಿದ್ದ ಬಾಲಕಿ, 16 ಕಿ.ಮೀ ಹುಡುಕಾಡಿ ರಕ್ಷಿಸಿದ ಪೊಲೀಸರು

|

Updated on: Oct 15, 2024 | 2:55 PM

ನೂರು ಕಿ.ಮೀ ವೇಗದಲ್ಲಿ ಚಲಿಸುತ್ತಿದ್ದ ರೈಲಿನ ಕಿಟಕಿಯಿಂದ 8 ವರ್ಷದ ಬಾಲಕಿ ಬಿದ್ದಿರುವ ಘಟನೆ ಉತ್ತರ ಪ್ರದೇಶದ ಲಲಿತ್​ಪುರದಲ್ಲಿ ನಡೆದಿದೆ. ಪೋಷಕರ ಜತೆ ಬಾಲಕಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದಳು, ಆಕೆ ಎಮರ್ಜೆನ್ಸಿ ಕಿಟಕಿ ಬಳಿ ಕುಳಿತಿದ್ದಳು ಅಲ್ಲಿಂದ ಹೊರಗೆ ಬಿದ್ದಿದ್ದಳು. ಸುಮಾರು 10 ಕಿ.ಮೀನಷ್ಟು ದೂರ ರೈಲು ಹೋದ ಬಳಿಕ ಆಕೆಯ ತಂದೆಗೆ ಮಗಳು ಸೀಟಿನಲ್ಲಿ ಇಲ್ಲಿದಿರುವುದು ಗೊತ್ತಾಗಿದೆ. ಕೂಡಲೇ ಲೋಕೊಪೈಲಟ್ ಗಮನಕ್ಕೆ ತಂದಿದ್ದು, ರೈಲನ್ನು ತಕ್ಷಣ ನಿಲ್ಲಿಸಲಾಯಿತು.

ರೈಲಿನ ಕಿಟಕಿಯಿಂದ ಹೊರಗೆ ಬಿದ್ದ ಬಾಲಕಿ, 16 ಕಿ.ಮೀ ಹುಡುಕಾಡಿ ರಕ್ಷಿಸಿದ ಪೊಲೀಸರು
ರೈಲು
Image Credit source: Indiaspend
Follow us on

ನೂರು ಕಿ.ಮೀ ವೇಗದಲ್ಲಿ ಚಲಿಸುತ್ತಿದ್ದ ರೈಲಿನ ಕಿಟಕಿಯಿಂದ 8 ವರ್ಷದ ಬಾಲಕಿ ಬಿದ್ದಿರುವ ಘಟನೆ ಉತ್ತರ ಪ್ರದೇಶದ ಲಲಿತ್​ಪುರದಲ್ಲಿ ನಡೆದಿದೆ. ಪೋಷಕರ ಜತೆ ಬಾಲಕಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದಳು, ಆಕೆ ಎಮರ್ಜೆನ್ಸಿ ಕಿಟಕಿ ಬಳಿ ಕುಳಿತಿದ್ದಳು ಅಲ್ಲಿಂದ ಹೊರಗೆ ಬಿದ್ದಿದ್ದಳು. ಸುಮಾರು 10 ಕಿ.ಮೀನಷ್ಟು ದೂರ ರೈಲು ಹೋದ ಬಳಿಕ ಆಕೆಯ ತಂದೆಗೆ ಮಗಳು ಸೀಟಿನಲ್ಲಿ ಇಲ್ಲಿದಿರುವುದು ಗೊತ್ತಾಗಿದೆ. ಕೂಡಲೇ ಲೋಕೊಪೈಲಟ್ ಗಮನಕ್ಕೆ ತಂದಿದ್ದು, ರೈಲನ್ನು ತಕ್ಷಣ ನಿಲ್ಲಿಸಲಾಯಿತು.

ಈ ಬಗ್ಗೆ ಮಾಹಿತಿ ಲಭಿಸಿದ ತಕ್ಷಣ ಲಲಿತ್‌ಪುರ ರೈಲ್ವೆ ಪೊಲೀಸ್ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸಿ ರಾತ್ರಿ ಕತ್ತಲಲ್ಲಿ ಬಾಲಕಿಯನ್ನು ಪತ್ತೆ ಹಚ್ಚಿ ಗಾಯಗೊಂಡಿದ್ದ ಬಾಲಕಿಯನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ರೈಲ್ವೆ ಪೊಲೀಸರು ಸುಮಾರು 16 ಕಿ.ಮೀನಷ್ಟು ದೂರದವರೆಗೆ ನಡೆದುಕೊಂಡೇ ಪೊದೆಗಳಲ್ಲಿ ಬಾಲಕಿಯ ಹುಡುಕಾಟ ನಡೆಸಿದ್ದರು. ತಕ್ಷಣ ಅಲ್ಲೇ ಬರುತ್ತಿದ್ದ ಗೂಡ್ಸ್​ ರೈಲು ನಿಲ್ಲಿಸಿ ಬಾಲಕಿಯನ್ನು ಅದರಲ್ಲಿ ಕರೆತರಲಾಯಿತು.

ಬಾಲಕಿಯ ಕಾಲಿಗೆ ತೀವ್ರ ಪೆಟ್ಟಾಗಿದ್ದು, ನಡೆಯಲು ಸಾಕಷ್ಟು ತೊಂದರೆಯಾಗುತ್ತಿದೆ. ಮಥುರಾ ಜಿಲ್ಲೆಯ ವ್ರಧವನ್‌ನ ರಂಗನಾಥ ದೇವಸ್ಥಾನದ ನಿವಾಸಿ ಅರವಿಂದ್ ತಿವಾರಿ ಅವರು ತಮ್ಮ ಪತ್ನಿ ಮತ್ತು 8 ವರ್ಷದ ಮಗಳೊಂದಿಗೆ ಮಧ್ಯಪ್ರದೇಶದ ಟಿಕಮ್‌ಗಢ್ ಗ್ರಾಮಕ್ಕೆ ಬಂದಿದ್ದರು.

ಮತ್ತಷ್ಟು ಓದಿ: ಉಡುಪಿ: ಚಲಿಸುತ್ತಿದ್ದ ರೈಲು ಹತ್ತುವಾಗ ಆಯತಪ್ಪಿ ಬಿದ್ದ ಮಹಿಳೆಯನ್ನು ರಕ್ಷಿಸಿದ ಮಹಿಳಾ ಸಿಬ್ಬಂದಿ, ಇಲ್ಲಿದೆ ರೋಚಕ ವಿಡಿಯೋ

ಬಾಲಕಿ ರೈಲಿನ ಕಿಟಕಿಯ ಬಳಿ ಕುಳಿತಿದ್ದು, ರೈಲಿನ ಕಿಟಕಿ ತೆರೆದಿತ್ತು. ಹಠಾತ್ ತಿರುವಿನಲ್ಲಿ ಗಾಳಿ ಬೀಸಿದ್ದರಿಂದ ಬಾಲಕಿ ಕಿಟಕಿಯಿಂದ ಹೊರಗೆ ಬಿದ್ದಿದ್ದಾಳೆ. ಹುಡುಗಿ ಪೊದೆಯಲ್ಲಿ ಎರಡು ಗಂಟೆಗಳ ಕಾಲ ಅಳುತ್ತಿದ್ದಳು.

ಬಾಲಕಿಯನ್ನು ಪೊದೆಯಿಂದ ಹೊರತೆಗೆದ ನಂತರ ರೈಲ್ವೆ ಪೊಲೀಸ್ ಸಿಬ್ಬಂದಿ ಆ ಮೂಲಕ ಹಾದು ಹೋಗುತ್ತಿದ್ದ ಗೂಡ್ಸ್ ರೈಲನ್ನು ತಡೆದಿದ್ದಾರೆ. ಬಾಲಕಿಗೆ ಮೊದಲು ಠಾಣೆಯಲ್ಲಿಯೇ ಚಿಕಿತ್ಸೆ ನೀಡಿ, ನಂತರ ಆಕೆಯನ್ನು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಅಲ್ಲಿ ಬಾಲಕಿಯ ಕಾಲಿಗೆ ಪ್ಲಾಸ್ಟರ್ ಹಾಕಲಾಗಿತ್ತು. ಅವರನ್ನು ಶನಿವಾರ ಮುಂಜಾನೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಮರುದಿನ ಡಿಸ್ಚಾರ್ಜ್ ಆದ ನಂತರ ಭಾನುವಾರ ಸಂಜೆ ಮನೆಗೆ ಮರಳಿದ್ದಾಳೆ. ಕೆಲವು ತಿಂಗಳ ಹಿಂದೆ, ಚಲಿಸುತ್ತಿರುವ ರೈಲನ್ನು ಹತ್ತಲು ಪ್ರಯತ್ನಿಸುವಾಗ ವ್ಯಕ್ತಿಯೊಬ್ಬರು ಜಾರಿಬಿದ್ದರು. ಕಾನ್ಸ್‌ಟೇಬಲ್ ಕೂಡಲೇ ಅವರನ್ನು ರಕ್ಷಿಸಿದ್ದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ