
ದೆಹಲಿ, ಮಾ.27: ದೆಹಲಿ ಮದ್ಯ ನೀತಿಗೆ (Delhi Liquor Policy) ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರ ಪಾತ್ರವಿದೆ ಎಂದು ಇಡಿ ಅವರನ್ನು ಬಂಧಿಸಿದೆ. ಇದೀಗ ಈ ಬಂಧನವನ್ನು ವಿರೋಧಿಸಿ ಎಎಪಿ ಹೈಕೋರ್ಟ್ ಮುಂದೆ ಪ್ರತಿಭಟನೆ ನಡೆಸುತ್ತಿದೆ. ಕೋರ್ಟ್ ಮುಂದೆ ಪ್ರತಿಭಟನೆ ನಡೆಸದಂತೆ ಹೈಕೋರ್ಟ್ ಎಎಪಿ ಎಚ್ಚರಿಕೆ ನೀಡಬೇಕು ಎಂದು ವಕೀಲ ವೈಭವ್ ಸಿಂಗ್ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆದಿದ್ದಾರೆ.
ನಗರದಾದ್ಯಂತ ನ್ಯಾಯಾಲಯದ ಆವರಣದಲ್ಲಿ ಎಎಪಿ ಕಾನೂನು ಘಟಕದ ಪ್ರತಿಭಟನೆಗೆ ಕರೆ ನೀಡಿದ್ದನ್ನು ವಿರೋಧಿಸಿ ವಕೀಲ ವೈಭವ್ ಸಿಂಗ್ ಸಲ್ಲಿಸಿದ ಪತ್ರದ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಿಚಾರಣೆ ನಡೆಸಿದೆ. ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನಮೋಹನ್ ಮತ್ತು ನ್ಯಾಯಮೂರ್ತಿ ಮನ್ಮೀತ್ ಪ್ರೀತಮ್ ಸಿಂಗ್ ಅರೋರಾ ಅವರ ಮುಂದೆ ಈ ಅರ್ಜಿಯನ್ನು ಸಿಂಗ್ ಪ್ರಸ್ತಾಪಿಸಿದರು ಮತ್ತು ಆಮ್ ಆದ್ಮಿ ಪಕ್ಷ ಮಾಧ್ಯಮ ಚಾನೆಲ್‌ಗಳು ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಗಳ ಮೂಲಕ ಬೃಹತ್ ಪ್ರತಿಭಟನೆಗೆ ಕರೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ದೆಹಲಿಯ ಎಲ್ಲಾ ಜಿಲ್ಲಾ ನ್ಯಾಯಾಲಯಗಳಾದ್ಯಂತ ಪ್ರತಿಭಟನೆ ನಡೆಸಲಾಗುತ್ತಿದೆ.
Advocate Vaibhav Singh has written to the Chief Justice of Delhi High Court against the call for protest in Delhi Courts by the legal cell of Aam Aadmi Party over ED arrest of CM Arvind Kejriwal
” A protest cannot be called in the court. It violates the right to fair litigation… pic.twitter.com/9KcT9eP9Et
— ANI (@ANI) March 27, 2024
ನ್ಯಾಯಾಲಯದ ಆವರಣದಲ್ಲಿ ಪ್ರತಿಭಟನೆ ಮಾಡುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ ಹಾಗೂ ರಾಜಕೀಯ ಉದ್ದೇಶಗಳಿಗಾಗಿ ನ್ಯಾಯಾಲಯದ ಆವರಣದಲ್ಲಿ ಪ್ರತಿಭಟನೆಗೆ ಹೋಗಬಾರದು ಎಂದು ವಕೀಲ ವೈಭವ್ ಸಿಂಗ್ ಅರ್ಜಿಯಲ್ಲಿ ತಿಳಿಸಿದ್ದಾರೆ. ಈ ವಿಚಾರಣೆಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನಮೋಹನ್ ಗುರುವಾರ (ಮಾ.28)ಕ್ಕೆ ನಡೆಸಲಾಗುವುದು ಎಂದು ಹೇಳಿದರು.
ಇದನ್ನೂ ಓದಿ: ಸಹಾನುಭೂತಿ ಪಡೆಯಲು ಕೇಜ್ರಿವಾಲ್ ನಡೆಸಿದ ಪ್ರಯತ್ನಗಳು ಯಶಸ್ವಿಯಾಗುವುದಿಲ್ಲ: ಮನ್ಸುಖ್ ಮಾಂಡವಿಯಾ
ಇದನ್ನು ಗಂಭೀರವಾಗಿ ತೆಗೆದುಕೊಳ್ಳಲಾಗುವುದು, ಈ ಬಗ್ಗೆ ಪೀಠಿ ಸರಿಯಾದ ಕ್ರಮವನ್ನು ತೆಗೆದುಕೊಳ್ಳುತ್ತದೆ. ಹಾಗೂ ಇದನ್ನು ಯಾರಿದಲ್ಲೂ ತಡೆಯಲು ಸಾಧ್ಯವಿಲ್ಲ ಎಂದು ಹೇಳಿದೆ. ಎಲ್ಲರಿಗೂ ತಮ್ಮ ಹಕ್ಕನ್ನು ಪ್ರತಿಪಾದಿಸುವ ಅಧಿಕಾರ ಇದೆ ಎಂದು ಹೇಳಿದೆ. ಯಾರ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವ ಅಧಿಕಾರ ಇಲ್ಲ, ಒಂದು ವೇಳೆ ಕಾನೂನು ಕ್ರಮ ತೆಗೆದುಕೊಳ್ಳವ ಪರಿಸ್ಥಿತಿ ಬಂದರೆ ಖಂಡಿತ ಅದನ್ನು ಮಾಡಲಾಗುವುದು ಎಂದು ಕೋರ್ಟ್ ಹೇಳಿದೆ
ನ್ಯಾಯಾಲಯದ ಆವರಣದಲ್ಲಿ ಪ್ರತಿಭಟನೆಗೆ ಕರೆ ನೀಡುವುದರಿಂದ ನ್ಯಾಯಾಲಯದ ಕಲಾಪಕ್ಕೆ ಅಡ್ಡಿಯಾಗುತ್ತದೆ, ಸಾರ್ವಜನಿಕರಿಗೆ ತೊಂದರೆ ಆಗುತ್ತದೆ. ವೃತ್ತಿಪರ ನೈತಿಕತೆಯ ತತ್ವಗಳನ್ನು ಉಲ್ಲಂಘಿಸುತ್ತದೆ ಎಂದು ವೈಭವ್ ಸಿಂಗ್ ಹೇಳಿದ್ದಾರೆ. ಇದು ಕಾನೂನು ಹಾಗೂ ಸುಪ್ರೀಂ ಕೋರ್ಟಿನ ನಿರ್ದೇಶನಗಳನ್ನು ಉಲ್ಲಂಘನೆ ಮಾಡಿದಂತೆ ಆಗುತ್ತದೆ ಎಂದು ಹೇಳಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ