Tajinder Bagga ತಜೀಂದರ್ ಬಗ್ಗಾರನ್ನು ಹರ್ಯಾಣದಲ್ಲೇ ಇರಿಸಬೇಕೆಂಬ ಪಂಜಾಬ್ ಸರ್ಕಾರದ ಮನವಿ ತಿರಸ್ಕರಿಸಿದ ಹೈಕೋರ್ಟ್

| Updated By: ರಶ್ಮಿ ಕಲ್ಲಕಟ್ಟ

Updated on: May 06, 2022 | 5:48 PM

ದೆಹಲಿ ಪೊಲೀಸರು ಬಗ್ಗಾನನ್ನು ಕಸ್ಟಡಿಗೆ ತೆಗೆದುಕೊಂಡ ನಂತರ, ಪಂಜಾಬ್ ಪೊಲೀಸರು ಹೈಕೋರ್ಟ್ ಮೆಟ್ಟಿಲೇರಿದ್ದರು. ಆದಾಗ್ಯೂ ಹರ್ಯಾಣ ಪೊಲೀಸರ ಮಧ್ಯಪ್ರವೇಶವನ್ನು 'ಕಾನೂನಿನ ಉಲ್ಲಂಘನೆ' ಎಂದು ಬಣ್ಣಿಸಿದ ಅಡ್ವೊಕೇಟ್...

Tajinder Bagga ತಜೀಂದರ್ ಬಗ್ಗಾರನ್ನು ಹರ್ಯಾಣದಲ್ಲೇ ಇರಿಸಬೇಕೆಂಬ ಪಂಜಾಬ್ ಸರ್ಕಾರದ ಮನವಿ ತಿರಸ್ಕರಿಸಿದ ಹೈಕೋರ್ಟ್
ತಜೀಂದರ್ ಬಗ್ಗಾ
Follow us on

ದೆಹಲಿ: ಬಿಜೆಪಿ ನಾಯಕ ತಜೀಂದರ್ ಪಾಲ್ ಸಿಂಗ್ ಬಗ್ಗಾ (Tajinder Bagga) ಅವರನ್ನು ಹರ್ಯಾಣದಲ್ಲಿ(Haryana) ಇರಿಸಬೇಕೆಂಬ ಪಂಜಾಬ್ ಸರ್ಕಾರದ ಮನವಿಯನ್ನು ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ಶುಕ್ರವಾರ ತಿರಸ್ಕರಿಸಿದೆ. ದೆಹಲಿ ಪೊಲೀಸರು (Delhi Police) ಬಗ್ಗಾರನ್ನು ಕಸ್ಟಡಿಗೆ ತೆಗೆದುಕೊಂಡ ನಂತರ, ಪಂಜಾಬ್ ಪೊಲೀಸರು ಹೈಕೋರ್ಟ್ ಮೆಟ್ಟಿಲೇರಿದ್ದರು. ಆದಾಗ್ಯೂ ಹರ್ಯಾಣ ಪೊಲೀಸರ ಮಧ್ಯಪ್ರವೇಶವನ್ನು ‘ಕಾನೂನಿನ ಉಲ್ಲಂಘನೆ’ ಎಂದು ಬಣ್ಣಿಸಿದ ಅಡ್ವೊಕೇಟ್ ಜನರಲ್ ಅನ್ಮೋಲ್ ರತ್ತನ್ ಸಿಧು, ಎಲ್ಲವೂ ಕಾರ್ಯವಿಧಾನದ ಪ್ರಕಾರ ನಡೆಯುತ್ತಿದೆ. ಆದರೆ ಹರ್ಯಾಣ ಪೊಲೀಸರು ಪ್ರಕ್ರಿಯೆಯನ್ನು ವಿಳಂಬಗೊಳಿಸಿದ್ದಾರೆ ಎಂದು ವಾದಿಸಿದರು. ದೆಹಲಿ ಪೊಲೀಸರನ್ನು ಬಗ್ಗಾರೊಂದಿಗೆ ಹರ್ಯಾಣದ ಗಡಿ ದಾಟಲು ಬಿಡದಂತೆ ಪಂಜಾಬ್ ಸರ್ಕಾರವು ನ್ಯಾಯಾಲಯಕ್ಕೆ ಮನವಿ ಮಾಡಿದೆ. ಬಗ್ಗಾ ಬಂಧನದ ನಂತರ ಪಂಜಾಬ್ ಪೊಲೀಸ್ ತಂಡವು ಸರಿಯಾದ ಕಾರ್ಯವಿಧಾನವನ್ನು ಅನುಸರಿಸುತ್ತಿಲ್ಲ ಎಂದು ದೆಹಲಿ ಪೊಲೀಸರು ಆರೋಪಿಸಿ ನಂತರ ಬಗ್ಗಾ ಅವರನ್ನು ಹರ್ಯಾಣ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು. ನಾವು ಬಗ್ಗಾ ಮತ್ತು ಪಂಜಾಬ್ ಪೊಲೀಸ್ ತಂಡವನ್ನು ಥಾನೇಸರ್ ಪೊಲೀಸ್ ಠಾಣೆ, ಕುರುಕ್ಷೇತ್ರಕ್ಕೆ ಕರೆತಂದಿದ್ದೇವೆ. ನಾವು ಪಂಜಾಬ್ ಪೊಲೀಸರನ್ನು ಪ್ರಶ್ನಿಸಿದ್ದೇವೆ. ದೆಹಲಿ ಪೊಲೀಸರ ತಂಡ ಪೊಲೀಸ್ ಠಾಣೆಗೆ ತಲುಪಿದ್ದು, ಪಂಜಾಬ್ ಎಡಿಜಿಪಿ ಶರದ್ ಸತ್ಯ ಚೌಹಾಣ್ ಕೂಡ ಕುರುಕ್ಷೇತ್ರಕ್ಕೆ ಆಗಮಿಸುವ ನಿರೀಕ್ಷೆಯಿದೆ ಎಂದು ಹರ್ಯಾಣದ ಪೊಲೀಸ್ ಅಧಿಕಾರಿಯೊಬ್ಬರು ಹೇಳಿರುವುದಾಗಿ ಇಂಡಿಯನ್ ಎಕ್ಸ್‌ಪ್ರೆಸ್‌ ವರದಿ ಮಾಡಿದೆ.

ಹಿರಿಯ ಪೊಲೀಸ್ ಅಧೀಕ್ಷಕ, ಎಸ್‌ಎಎಸ್ ನಗರ ಮೊಹಾಲಿ ಅವರು ಕುರುಕ್ಷೇತ್ರದಲ್ಲಿರುವ ತಮ್ಮ ಸಹವರ್ತಿಗೆ ಪತ್ರ ಬರೆದಿದ್ದು ಪಂಜಾಬ್ ಪೊಲೀಸ್ ತಂಡ ಮತ್ತು ಆರೋಪಿ ಬಗ್ಗಾ ಅವರನ್ನು ಬಿಡುಗಡೆ ಮಾಡುವಂತೆ ಮನವಿ ಮಾಡಿದರು, ಆದ್ದರಿಂದ ಅವರನ್ನು ಕಾನೂನು ಪ್ರಕಾರ ಸಕಾಲದಲ್ಲಿ ನ್ಯಾಯಾಲಯದ ಮುಂದೆ ಹಾಜರುಪಡಿಸಬಹುದು. ಹರ್ಯಾಣದಲ್ಲಿ ತಂಡವನ್ನು ತಡೆದು ನಿಲ್ಲಿಸಿರುವುದು “ಅಕ್ರಮ ಬಂಧನ ಮತ್ತು ಅಪರಾಧ ನ್ಯಾಯ ವ್ಯವಸ್ಥೆಯ ಆಡಳಿತದಲ್ಲಿ ಹಸ್ತಕ್ಷೇಪಕ್ಕೆ ಸಮಾನವಾಗಿದೆ” ಎಂದು ಎಸ್‌ಎಸ್‌ಪಿ ಹೇಳಿದ್ದಾರೆ.

ದೆಹಲಿ ಪೊಲೀಸರು ಪಂಜಾಬ್ ಪೊಲೀಸರ ವಿರುದ್ಧ “ಅಪಹರಣ” ಮತ್ತು “ದಾಳಿ” ಗಾಗಿ ಎಫ್ಐಆರ್ ದಾಖಲಿಸಿದ್ದಾರೆ. ಪ್ರಚೋದನಕಾರಿ ಹೇಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ಬೆಳಗ್ಗೆ ಪಂಜಾಬ್ ಪೊಲೀಸರು ಪಶ್ಚಿಮ ದೆಹಲಿಯ ಅವರ ನಿವಾಸದಿಂದ ಬಗ್ಗಾ ಅವರನ್ನು ಕರೆದೊಯ್ದಿದ್ದಾರೆ. ಬಗ್ಗಾ ಅವರ ತಾಯಿ ಇಂಡಿಯನ್ ಎಕ್ಸ್‌ಪ್ರೆಸ್‌ನೊಂದಿಗೆ ಮಾತನಾಡುತ್ತಾ, ಬಂಧನಕ್ಕೂ ಮುನ್ನ ತನ್ನ ಮಗನಿಗೆ ಸಿರೋಪಾವನ್ನು ಕಟ್ಟಲು ಪೊಲೀಸರು ಅನುಮತಿಸಲಿಲ್ಲ. ಘಟನೆಯ ವೀಡಿಯೊವನ್ನು ತೆಗೆದುಕೊಳ್ಳಲು ಪ್ರಯತ್ನಿಸುತ್ತಿರುವಾಗ ಅವನ ತಂದೆಯ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ
ತಜೀಂದರ್ ಸಿಂಗ್ ಬಗ್ಗಾ ಬಂಧನ ವಿವಾದ: ಬಿಜೆಪಿಯ ಕಪಿಲ್ ಮಿಶ್ರಾಗೆ ಬೆದರಿಕೆ ಹಾಕಿದ ಆಪ್ ವಕ್ತಾರ
ದೆಹಲಿಗೆ ಬಂದು ಬಿಜೆಪಿ ನಾಯಕನನ್ನು ಬಂಧಿಸಿ ಕರೆದುಕೊಂಡು ಹೋದ ಪಂಜಾಬ್ ಪೊಲೀಸ್​; ದೆಹಲಿ ಪೊಲೀಸರಿಂದ ಕಿಡ್ನಾಪ್​ ಕೇಸ್​ ದಾಖಲು

ಬಗ್ಗಾ ಅಪಹರಣದ ಮಾಹಿತಿಯ ಮೇರೆಗೆ ಕಾರ್ಯನಿರ್ವಹಿಸಲಾಗಿದೆ: ಹರ್ಯಾಣ ಗೃಹ ಸಚಿವ

ಹರ್ಯಾಣದ ಗೃಹ ಸಚಿವ ಅನಿಲ್ ವಿಜ್, “ಇಂದು ಬೆಳಿಗ್ಗೆ, ದೆಹಲಿಯಿಂದ ಬೊಲೆರೋ ವಾಹನದಲ್ಲಿ ತೇಜಿಂದರ್ ಬಗ್ಗಾ ಅವರನ್ನು ಅಪಹರಿಸಲಾಗಿದೆ ಎಂದು ನಮಗೆ ದೆಹಲಿ ಪೊಲೀಸರಿಂದ ಮಾಹಿತಿ ಬಂದಿತ್ತು. ಅವರನ್ನು ಅಕ್ರಮವಾಗಿ ಕರೆದೊಯ್ಯಲಾಗುತ್ತಿದೆ ಎಂದು ನಮಗೆ ತಿಳಿಸಲಾಯಿತು. ನಮಗೆ ದೆಹಲಿ ಪೊಲೀಸರಿಂದ ಯಾವುದೇ ಸೂಚನೆಗಳು ಬಂದರೂ , ನಾವು ಅದನ್ನು ಪಾಲಿಸಿದ್ದೇವೆ. ಯಾವುದೇ ನಿದರ್ಶನವಿದ್ದರೆ, ದೆಹಲಿಯಲ್ಲೂ ಎಫ್‌ಐಆರ್ ದಾಖಲಿಸಬಹುದಿತ್ತು. ಪಂಜಾಬ್‌ನಲ್ಲಿ ಬಗ್ಗಾ ಮೇಲೆ ಏಕೆ ಎಫ್‌ಐಆರ್ ದಾಖಲಾಗಿದೆ. ಪಂಜಾಬ್‌ನಲ್ಲಿ ಆಮ್ ಆದ್ಮಿ ಪಕ್ಷದ ಯಾವುದಾದರೂ ಚಿತ್ರಹಿಂಸೆ ನೀಡುವ ಮನೆ ಇದೆಯೇ? ದೆಹಲಿ ಪೊಲೀಸರು ಈಗ ತನಿಖೆ ನಡೆಸಲಿದ್ದಾರೆ ಈ ವಿಷಯ ಮತ್ತು ನಿಜವೇನಿದ್ದರೂ ಅದು ಹೊರಬರುತ್ತದೆ ಎಂದು ಹೇಳಿದ್ದಾರೆ.

ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ

Published On - 5:25 pm, Fri, 6 May 22