ಹೆಚ್ಚು ಹೊಗೆ ಬಿಡುವ ವಾಹನಗಳು ಯುಪಿಯಿಂದ ದೆಹಲಿಗೆ ಬರುತ್ತಿದೆ, ತಕ್ಷಣವೇ ನಿಲ್ಲಿಸಿ: ಯೋಗಿಗೆ ದೆಹಲಿ ಸರ್ಕಾರ ಮನವಿ

|

Updated on: Nov 04, 2023 | 1:16 PM

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​​​ ಅವರಿಗೆ ದೆಹಲಿಯ ಪರಿಸರ ಸಚಿವ ಗೋಪಾಲ್ ರೈ ಮನವಿಯೊಂದನ್ನು ಮಾಡಿದ್ದಾರೆ. ಉತ್ತರ ಪ್ರದೇಶದಿಂದ ದೆಹಲಿಗೆ ಬರುತ್ತಿರುವ ಬಿಎಸ್ 3 ಪೆಟ್ರೋಲ್ ಮತ್ತು ಬಿಎಸ್ 4 ಡೀಸೆಲ್ ವಾಹನಗಳ ಸೇವೆಯನ್ನು ನಿಲ್ಲಿಸುವಂತೆ ಮನವಿ ಮಾಡಿದ್ದಾರೆ. ದೆಹಲಿಯಲ್ಲಿ ವಾಯುಮಾಲಿನ್ಯ ನಿಯಂತ್ರಣಕ್ಕೆ ಸಿಗುತ್ತಿಲ್ಲ. ಇದನ್ನು ತಡೆಯಲು ಎಲ್ಲ ರೀತಿಯ ಕ್ರಮಗಳನ್ನು ಅನುಸರಿಸಲಾಗಿದೆ ಎಂದು ಹೇಳಿದ್ದಾರೆ.

ಹೆಚ್ಚು ಹೊಗೆ ಬಿಡುವ ವಾಹನಗಳು ಯುಪಿಯಿಂದ ದೆಹಲಿಗೆ ಬರುತ್ತಿದೆ, ತಕ್ಷಣವೇ ನಿಲ್ಲಿಸಿ: ಯೋಗಿಗೆ ದೆಹಲಿ ಸರ್ಕಾರ ಮನವಿ
ಸಾಂದರ್ಭಿಕ ಚಿತ್ರ
Follow us on

ದೆಹಲಿ, ನ.4: ದೆಹಲಿಯಲ್ಲಿ ತೀವ್ರ ವಾಯುಮಾಲಿನ್ಯ (Delhi Pollution Delhi Air Quality) ಉಂಟಾಗಿದ್ದು, ರಾಷ್ಟ್ರ ರಾಜಧಾನಿಯ ಸರ್ಕಾರ ವಾಯುಮಾಲಿನ್ಯ ತಡೆಯಲು ಹಲವು ಕ್ರಮಗಳನ್ನು ತರುತ್ತಿದೆ. ಈಗಾಗಲೇ ದೆಹಲಿಯ ಹಲವು ಶಾಲೆಗಳಿಗೆ ರಜೆ ಘೋಷಣೆ ಮಾಡಿದೆ. ಅನಿವಾರ್ಯವಲ್ಲದ ನಿರ್ಮಾಣ ಚಟುವಟಿಕೆಗಳ ಮೇಲೆ ಮತ್ತು ದೆಹಲಿ ಗುರುಗ್ರಾಮ್, ಫರಿದಾಬಾದ್, ಗಾಜಿಯಾಬಾದ್ ಮತ್ತು ಗೌತಮ್ ಬುಧ್ ನಗರದಲ್ಲಿ ಬಿಎಸ್-3 ಪೆಟ್ರೋಲ್ ಮತ್ತು ಬಿಎಸ್-4 ಡೀಸೆಲ್ ಕಾರುಗಳ ಓಡಾಟದ ಮೇಲೆ ನಿಷೇಧ ಹೇರಿದೆ. ಇದರ ನಡುವೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​​​ ಅವರಿಗೆ ದೆಹಲಿಯ ಪರಿಸರ ಸಚಿವ ಗೋಪಾಲ್ ರೈ ಮನವಿಯೊಂದನ್ನು ಮಾಡಿದ್ದಾರೆ. ಉತ್ತರ ಪ್ರದೇಶದಿಂದ ದೆಹಲಿಗೆ ಬರುತ್ತಿರುವ ಬಿಎಸ್ 3 ಪೆಟ್ರೋಲ್ ಮತ್ತು ಬಿಎಸ್ 4 ಡೀಸೆಲ್ ವಾಹನಗಳ ಸೇವೆಯನ್ನು ನಿಲ್ಲಿಸುವಂತೆ ಮನವಿ ಮಾಡಿದ್ದಾರೆ. ದೆಹಲಿಯಲ್ಲಿ ವಾಯುಮಾಲಿನ್ಯ ನಿಯಂತ್ರಣಕ್ಕೆ ಸಿಗುತ್ತಿಲ್ಲ. ಇದನ್ನು ತಡೆಯಲು ಎಲ್ಲ ರೀತಿಯ ಕ್ರಮಗಳನ್ನು ಅನುಸರಿಸಲಾಗಿದೆ ಎಂದು ಹೇಳಿದ್ದಾರೆ.

ಆನಂದ್ ವಿಹಾರ್‌ನ ವಾಯು ಗುಣಮಟ್ಟ ಸೂಚ್ಯಂಕವು ಅಪಾಯಕಾರಿಯಾಗಿದ್ದು, ಈ ಕಾರಣಕ್ಕೆ ಆನಂದ್ ವಿಹಾರ್‌ದ ಬಸ್ ಡಿಪೋವನ್ನು ಸಚಿವ ಗೋಪಾಲ್ ರೈ ಪರಿಶೀಲಿಸಿದ್ದಾರೆ. ಈ ಸಂದರ್ಭದಲ್ಲಿ 3 ಪೆಟ್ರೋಲ್ ಮತ್ತು ಬಿಎಸ್ 4 ಡೀಸೆಲ್ ಬಸ್ಸುಗಳು ಇಲ್ಲಿಗೆ ಬಂದಿದೆ ಎಂಬುದನ್ನು ಪತ್ತೆ ಮಾಡಿದ್ದಾರೆ. ದೆಹಲಿ ಈಗಾಗಲೇ ಎಲೆಕ್ಟ್ರಿಕ್ ಬಸ್‌ಗಳು ಮತ್ತು ಸಿಎನ್‌ಜಿ ಬಸ್‌ಗಳು ಮಾತ್ರ ಓಡಾಡುವಂತೆ ಆದೇಶವನ್ನು ನೀಡಲಾಗಿದೆ. ಆದರೆ ಉತ್ತರಪಪ್ರದೇಶದಿಂದ ದೆಹಲಿಗೆ ಬಿಎಸ್ 3 ಪೆಟ್ರೋಲ್ ಮತ್ತು ಬಿಎಸ್ 4 ಡೀಸೆಲ್ ಬಸ್ಸುಗಳು ಬರುತ್ತಿದೆ ಎಂದು ಹೇಳಿದ್ದಾರೆ.

ಹೆಚ್ಚು ಹೊಗೆ ಬಿಡುವ ವಾಹನಗಳನ್ನು ಕಳುಹಿಸುವುದನ್ನು ನಿಲ್ಲಿಸುವಂತೆ ಉತ್ತರ ಪ್ರದೇಶ ಸರ್ಕಾರಕ್ಕೆ ಸಚಿವ ಗೋಪಾಲ್ ರೈ ಮನವಿ ಮಾಡಿದ್ದಾರೆ. ಈಗಾಗಲೇ ನಾವು ದೆಹಲಿಯಲ್ಲಿ ವಾಯುಮಾಲಿನ್ಯವನ್ನು ಎದುರಿಸುತ್ತಿದ್ದೇವೆ. ಪರಿಸ್ಥಿತಿಯನ್ನು ನಿಯಂತ್ರಿಸಲು BS3 ಮತ್ತು BS4 ವಾಹನಗಳನ್ನು ನಿಷೇಧಿಸಲಾಗಿದೆ. ಇದರಿಂದ ವಿಪರೀತ ಹೊಗೆ ಬರುತ್ತಿದೆ. ಹಾಗಾಗಿ ಉತ್ತರಪ್ರದೇಶದಿಂದ ಬರುತ್ತಿರುವ BS3 ಮತ್ತು BS4 ವಾಹನಗಳನ್ನು ನಿಲ್ಲಿಸುವಂತೆ ಯೋಗಿ ಅವರಲ್ಲಿ ನಾನು ಮನವಿ ಮಾಡುತ್ತೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:ವಾಯುಮಾಲಿನ್ಯ: ದೆಹಲಿಯ ಪ್ರಾಥಮಿಕ ಶಾಲೆಗಳಿಗೆ ನವೆಂಬರ್ 3,4 ರಂದು ರಜೆ

ದೆಹಲಿಯಲ್ಲಿ ಮಾಲಿನ್ಯವನ್ನು ಕಡಿಮೆ ಮಾಡಲು ದೆಹಲಿ ಸರ್ಕಾರವು ವಿವಿಧ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಆದರೆ ಇಂದು ಬೆಳಿಗ್ಗೆಯಿಂದ ಆನಂದ್ ವಿಹಾರ್ ಅತ್ಯಧಿಕ ವಾಯು ಗುಣಮಟ್ಟ ಸೂಚ್ಯಂಕ (Air Quality Index)ನ್ನು ಹೊಂದಿದ್ದೇವೆ. ಇದರಿಂದ ದೆಹಲಿಯ ಹಲವು ಭಾಗದಲ್ಲಿ ಗಾಳಿ ಮಟ್ಟ ಕಡಿಮೆಯಾಗಿದೆ. ಇದರಿಂದ ಅಲ್ಲಿನ ಜನರಲ್ಲಿ ಉಸಿರಾಟದ ತೊಂದರೆ ಹಾಗೂ ಕಣ್ಣು ನೋವಿನ ಸಮಸ್ಯೆ ಉಂಟಾಗಿದೆ.

ದೆಹಲಿಯ ಹವಮಾನ ಹಿಂದಿನ ಸ್ಥಿತಿಗೆ ಬರುವವರೆಗೆ ಬಿಎಸ್ 3 ಪೆಟ್ರೋಲ್ ಮತ್ತು ಬಿಎಸ್ 4 ಡೀಸೆಲ್ ಕಾರುಗಳ ಓಡಾಟವನ್ನು ನಿಷೇಧಿಸಲು ದೆಹಲಿ ಸರ್ಕಾರ ನಿರ್ಧರಿಸಿದೆ.ಯಾವುದೇ ವಾಹನಗಳು ದೆಹಲಿ ಬೀದಿಗಳಲ್ಲಿ ಓಡುವುದು ಕಂಡುಬಂದರೆ ಇಪ್ಪತ್ತು ಸಾವಿರ ದಂಡವನ್ನು ವಿಧಿಸಲಾಗುವುದು ಎಂದು ಸರ್ಕಾರ ಹೇಳಿದೆ. ಈ ವ್ಯವಸ್ಥೆಯನ್ನು ಹಾಗೂ ವಾಯುಮಾಲಿನ್ಯದ ಮಾಹಿತಿಯನ್ನು ತಿಳಿಸಲು ದೆಹಲಿ ಸರ್ಕಾರ ಸಮಿತಿಯನ್ನು ರಚನೆ ಮಾಡಲಾಗಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:16 pm, Sat, 4 November 23