ಹಿಮಾಚಲ ಪ್ರದೇಶದಲ್ಲಿ ಬಸ್ ಪಲ್ಟಿ; ದೆಹಲಿ ವಿವಿಯ ಓರ್ವ ವಿದ್ಯಾರ್ಥಿನಿ ಸಾವು, 40 ಮಂದಿಗೆ ಗಾಯ
ಚಂಡೀಗಢ-ಮನಾಲಿ ರಸ್ತೆಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಜೈಪುರ ಮೂಲದ ಒಬ್ಬ ವಿದ್ಯಾರ್ಥಿ ಸಾವಿಗೀಡಾಗಿದ್ದು, ಇತರ ನಾಲ್ವರಿಗೆ ಫ್ರಾಕ್ಚರ್ ಮತ್ತು ಸಣ್ಣ ಗಾಯಗಳಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಿಲಾಸ್‌ಪುರ, ಹಿಮಾಚಲ ಪ್ರದೇಶ: ಮನಾಲಿಗೆ (Manali) ಪ್ರವಾಸಕ್ಕೆ ತೆರಳುತ್ತಿದ್ದ ದೆಹಲಿ ವಿಶ್ವವಿದ್ಯಾಲಯದ (Delhi University ) ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಖಾಸಗಿ ಬಸ್ ಶುಕ್ರವಾರ ಬಿಲಾಸ್‌ಪುರದಲ್ಲಿ ಪಲ್ಟಿಯಾಗಿದ್ದು, ಯುವತಿಯೊಬ್ಬರು ಸಾವಿಗೀಡಾಗಿದ್ದು 40 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಮಲಾ ನೆಹರು ಕಾಲೇಜಿನ 35 ಮಹಿಳಾ ವಿದ್ಯಾರ್ಥಿಗಳು ಮತ್ತು ಗುಂಪಿನ ಆರು ಸಂಯೋಜಕರು ಸೇರಿದಂತೆ ಬಸ್‌ನಲ್ಲಿ 44 ಜನರಿದ್ದರು ಎಂದು ಎಸ್‌ಡಿಎಂ ಬಿಲಾಸ್‌ಪುರ್ ಅಭಿಷೇಕ್ ಕುಮಾರ್ ಗಾರ್ಗ್ ತಿಳಿಸಿದ್ದಾರೆ.
ಚಂಡೀಗಢ-ಮನಾಲಿ ರಸ್ತೆಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಜೈಪುರ ಮೂಲದ ಒಬ್ಬ ವಿದ್ಯಾರ್ಥಿ ಸಾವಿಗೀಡಾಗಿದ್ದು, ಇತರ ನಾಲ್ವರಿಗೆ ಫ್ರಾಕ್ಚರ್ ಮತ್ತು ಸಣ್ಣ ಗಾಯಗಳಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಿಟಿಐ ಜೊತೆ ಮಾತನಾಡಿದ ಕಮಲಾ ನೆಹರೂ ಕಾಲೇಜಿನ ಪ್ರಾಂಶುಪಾಲರಾದ ಡಾ.ಕಲ್ಪನಾ ಭಕುನಿ, ಕಾಲೇಜು ಎಲ್ಲಾ ವಿದ್ಯಾರ್ಥಿಗಳ ಪೋಷಕರೊಂದಿಗೆ ಸಂಪರ್ಕದಲ್ಲಿದೆ.
ಇದನ್ನೂ ಓದಿ:Mukesh Ambani: ಮುಕೇಶ್, ನೀತಾ ಅಂಬಾನಿ ಚಾಲಕ ತಿಂಗಳಿಗೆ ಪಡೆಯುವ ವೇತನ ಎಷ್ಟು?
ನಾವು ಇನ್ನೂ ಪರಿಸ್ಥಿತಿಯನ್ನು ನಿರ್ಣಯಿಸಲು ಪ್ರಯತ್ನಿಸುತ್ತಿದ್ದೇವೆ. ಈ ಹೊತ್ತಲ್ಲಿ ಹೆಚ್ಚಿನದ್ದು ಏನನ್ನೂ ಹೇಳಲು ಆಗುವುದಿಲ್ಲ. ನಾವು ಕುಟುಂಬಗಳೊಂದಿಗೆ ಸಂಪರ್ಕದಲ್ಲಿದ್ದೇವೆ” ಎಂದು ಭಕುನಿ ಫೋನ್ ಮೂಲಕ ಹೇಳಿದರು.
ದಾರಿಹೋಕರು ಗಾಯಾಳುಗಳನ್ನು ಬಸ್‌ನಿಂದ ಹೊರತೆಗೆದು ಬಿಲಾಸ್‌ಪುರ ಪ್ರಾದೇಶಿಕ ಆಸ್ಪತ್ರೆಗೆ ಸಾಗಿಸಿದರು. ಒಬ್ಬ ಪ್ರಯಾಣಿಕರನ್ನು PGI ಚಂಡೀಗಢಕ್ಕೆ ಮತ್ತು ಇಬ್ಬರನ್ನು AIIMS ಬಿಲಾಸ್‌ಪುರಕ್ಕೆ ಸಾಗಿಸಲಾಗಿದೆ. ಪೊಲೀಸರು ಬಸ್ ಚಾಲಕನ ವಿರುದ್ಧ ಅತಿವೇಗ ಮತ್ತು ನಿರ್ಲಕ್ಷ್ಯದ ಚಾಲನೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ