Mukesh Ambani: ಮುಕೇಶ್, ನೀತಾ ಅಂಬಾನಿ ಚಾಲಕ ತಿಂಗಳಿಗೆ ಪಡೆಯುವ ವೇತನ ಎಷ್ಟು?

ದೊಡ್ಡ ಮೊತ್ತದ ವೇತನ ಪಡೆಯುವ ಚಾಲಕನ ಕೆಲಸ ಬಹಳ ಸುಲಭ ಅಂತ ಅಂದುಕೊಂಡರೆ ತಪ್ಪಾಗಬಹುದು. ಅಂಬಾನಿಯವರ ದುಬಾರಿ ಮತ್ತು ಐಷಾರಾಮಿ ವಿಧವಿಧದ ಕಾರುಗಳನ್ನು ಚಲಾಯಿವುದರಲ್ಲಿ ಆತ ಪರಿಣಿತನಾಗಿರಬೇಕಾಗುತ್ತದೆ.

Mukesh Ambani: ಮುಕೇಶ್, ನೀತಾ ಅಂಬಾನಿ ಚಾಲಕ ತಿಂಗಳಿಗೆ ಪಡೆಯುವ ವೇತನ ಎಷ್ಟು?
ಮುಕೇಶ್ ಅಂಬಾನಿ
Follow us
Ganapathi Sharma
|

Updated on: Mar 03, 2023 | 8:44 PM

ಮುಂಬೈ: ರಿಲಯನ್ಸ್ ಮಾಲೀಕರಾದ ಮುಕೇಶ್ ಅಂಬಾನಿ (Mukesh Ambani) ಹಾಗೂ ಅವರ ಪತ್ನಿ ನೀತಾ ಅಂಬಾನಿ (Nita Ambani) ವಿಶ್ವದ ಅತ್ಯಂತ ಶ್ರೀಮಂತರಲ್ಲಿ ಪ್ರಮುಖರು. ಇಷ್ಟೇ ಅಲ್ಲ, ಅಂಬಾನಿ ಕುಟುಂಬ ವಿಶ್ವದಲ್ಲೇ ಎರಡನೇ ಅತಿ ದುಬಾರಿ ನಿವಾಸವನ್ನು ಹೊಂದಿದೆ. ಜಗತ್ತಿನ ದುಬಾರಿ ನಿವಾಸಗಳ ಪೈಕಿ ಅಂಬಾನಿಯ ನಿವಾಸ ಆಂಟಿಲಿಯಾ (Antilia) ಬಕಿಂಗ್​ಹ್ಯಾಂ ಅರಮನೆಯ ನಂತರದ ಸ್ಥಾನ ಪಡೆದಿದೆ. ಆಂಟಿಲಿಯಾದಲ್ಲಿ ನಡೆಯುವ ಚಟುವಟಿಕೆಗಳು, ಅದರ ನಿರ್ವಹಣೆಗೆ ತಗಲುವ ಕೆಲಸ ಇತ್ಯಾದಿಗಳ ಬಗ್ಗೆ ಕೇಳಿದರೆ ನಿಜಕ್ಕೂ ಅಚ್ಚರಿಯಾಗಬಹುದು. ಸುಮಾರು 600 ಸಿಬ್ಬಂದಿ ಈ ನಿವಾಸದಲ್ಲಿ ಕೆಲಸ ಮಾಡುತ್ತಾರೆ ಎಂದು ಇತ್ತೀಚೆಗೆ ವರದಿಯೊಂತು ತಿಳಿಸಿತ್ತು. ಹಾಗಿದ್ದರೆ ಇಷ್ಟೆಲ್ಲ ಐಷಾರಾಮಿ ಜೀವನ ನಡೆಸುವ ಅಂಬಾನಿಯವರ ಕಾರು ಚಾಲಕ ತಿಂಗಳಿಗೆ ಎಷ್ಟು ವೇತನ ಪಡೆಯುತ್ತಾರೆ ಎಂಬುದು ತಿಳಿದಿದೆಯೇ? ಆ ಕುರಿತು ಇಲ್ಲಿದೆ ಮಾಹಿತಿ.

ಅಂಬಾನಿಯಂಥ ಉದ್ಯಮಿಯ ಕಾರು ಚಾಲಕನಾಗುವುದೆಂದರೆ ಸುಲಭದ ಕೆಲಸವಲ್ಲ. ಕಠಿಣ ತರಬೇತಿ ಪಡೆಯುವುದರ ಜತೆಗೆ ಅನೇಕ ವಿಚಾರಗಳನ್ನು ತಿಳಿದಿರಬೇಕಾಗುತ್ತದೆ. ಉದ್ಯಮಿ ದಂಪತಿಯ ಐಷಾರಾಮಿ ಜೀವನಕ್ಕೆ ಪೂರಕವಾಗಿ ಕಾರ್ಯನಿರ್ವಹಿಸಬೇಕಿರುತ್ತದೆ. ಕಾರಿನ ಚಾಲಕನನ್ನು ನೇಮಕ ಮಾಡುವ ಜವಾಬ್ದಾರಿಯನ್ನು ಖಾಸಗಿ ಕಂಪನಿಯೊಂದಕ್ಕೆ ನೀಡಲಾಗಿದೆ. ಖಾಸಗಿ ಕಂಪನಿಯು ಗುತ್ತಿಗೆ ಆಧಾರದಲ್ಲಿ ಚಾಲಕನ ನೇಮಕ ಮಾಡುತ್ತದೆ.

ಮುಕೇಶ್ ಅಂಬಾನಿಯ ಚಾಲಕನಿಗೆ ತಿಂಗಳಿಗೆ 2 ಲಕ್ಷ ರೂ. ವೇತನ ನೀಡಲಾಗುತ್ತದೆ ಎನ್ನಲಾಗಿದೆ. ದೊಡ್ಡ ದೊಡ್ಡ ಕಂಪನಿಗಳಲ್ಲಿ ಉನ್ನತ ಹುದ್ದೆಗಳಲ್ಲಿ ಕೆಲಸ ಮಾಡುವವರಿಗೂ ದೊರೆಯ ವೇತನ ಅಂಬಾನಿ ಚಾಲಕನಿಗೆ ದೊರೆಯುತ್ತಿರುವುದು ಇದರಿಂದ ತಿಳಿದುಬಂದಿದೆ.

ಇದನ್ನೂ ಓದಿ: Post Office Savings: ಆನ್​ಲೈನ್, ಆಫ್​​ಲೈನ್​ನಲ್ಲಿ ಅಂಚೆ ಕಚೇರಿ ಉಳಿತಾಯ ಖಾತೆ ಬ್ಯಾಲೆನ್ಸ್​ ಪರಿಶೀಲಿಸಲು ಹೀಗೆ ಮಾಡಿ

ಆದರೆ, ಇಷ್ಟೊಂದು ವೇತನ ಪಡೆಯುವ ಚಾಲಕನ ಕೆಲಸ ಬಹಳ ಸುಲಭ ಅಂತ ಅಂದುಕೊಂಡರೆ ತಪ್ಪಾಗಬಹುದು. ಅಂಬಾನಿಯವರ ದುಬಾರಿ ಮತ್ತು ಐಷಾರಾಮಿ ವಿಧವಿಧದ ಕಾರುಗಳನ್ನು ಚಲಾಯಿವುದರಲ್ಲಿ ಆತ ಪರಿಣಿತನಾಗಿರಬೇಕಾಗುತ್ತದೆ.

ಆಂಟಿಲಿಯಾದಲ್ಲಿ ಕಾರ್ಯನಿರ್ವಹಿಸುವ ಕೆಲವು ಸಿಬ್ಬಂದಿಗೂ 2 ಲಕ್ಷ ರೂ.ವರೆಗೆ ವೇತನ ನೀಡಲಾಗುತ್ತದೆ ಎಂದು ಇತ್ತೀಚೆಗೆ ಕೆಲವು ಮಾಧ್ಯಮಗಳು ವರದಿ ಮಾಡಿದ್ದವು. ನಿವಾಸದ ಪ್ಲಂಬಿಂಗ್ ಕೆಲಸ ನಿರ್ವಹಿಸುವ ಸಿಬ್ಬಂದಿಗೂ ಸರಿಸುಮಾರು ಇಷ್ಟೇ ವೇತನ ನೀಡಲಾಗುತ್ತದೆ ಎನ್ನಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ