ಪೊದೆಗಪ್ಪಳಿಸಿದ ಬೆಂಜ್ ಕಾರು: ಕೂದಲೆಳೆ ಅಂತರದಲ್ಲಿ ಹಿಮಾಚಲ ಪ್ರದೇಶ ರಾಜ್ಯಪಾಲ ಬಂಡಾರು ಪಾರು

| Updated By: KUSHAL V

Updated on: Dec 14, 2020 | 5:13 PM

ಹಿಮಾಚಲ ಪ್ರದೇಶದ ರಾಜ್ಯಪಾಲ ಬಂದರು ದತ್ತಾತ್ರೇಯ ರಸ್ತೆ ಅಪಘಾತವೊಂದರಲ್ಲಿ ಪ್ರಾಣಾಪಾಯದಿಂದ ಕೂದಲೆಳೆಯಿಂದ ಪಾರಾಗಿದ್ದಾರೆ.

ಪೊದೆಗಪ್ಪಳಿಸಿದ ಬೆಂಜ್ ಕಾರು: ಕೂದಲೆಳೆ ಅಂತರದಲ್ಲಿ ಹಿಮಾಚಲ ಪ್ರದೇಶ ರಾಜ್ಯಪಾಲ ಬಂಡಾರು ಪಾರು
ಪೊದೆಗಪ್ಪಳಿಸಿದ ರಾಜ್ಯಪಾಲರ ಬೆಂಜ್​ ಕಾರು
Follow us on

ಹೈದರಾಬಾದ್: ಹಿಮಾಚಲ ಪ್ರದೇಶದ ರಾಜ್ಯಪಾಲ ಬಂಡಾರು ದತ್ತಾತ್ರೇಯ ರಸ್ತೆ ಅಪಘಾತವೊಂದರಲ್ಲಿ ಪ್ರಾಣಾಪಾಯದಿಂದ ಕೂದಲೆಳೆಯಿಂದ ಪಾರಾಗಿದ್ದಾರೆ.

ಖಾಸಗಿ ಕಾರ್ಯಕ್ರಮವೊಂದಕ್ಕೆ ತೆಲಂಗಾಣದ ಹೈದರಾಬಾದ್-ವಿಜಯವಾಡ ರಾಷ್ಟ್ರೀಯ ಹೆದ್ದಾರಿ 65ರಲ್ಲಿ ಇನ್ನೂ ಇಬ್ಬರ ಜೊತೆ ತೆರಳುತ್ತಿದ್ದ ಬಂದರು ದತ್ತಾತ್ರೇಯ ಅವರ ಮರ್ಸಿಡೀಸ್ ಬೆಂಜ್ ರಸ್ತೆ ಪಕ್ಕದ ಪೊದೆಗಳಿಗೆ ಅಪ್ಪಳಿಸಿದೆ. ಮಧ್ಯಾಹ್ನ 11.45ರ ಹೊತ್ತಿಗೆ ಹೆದ್ದಾರಿ ಪಕ್ಕದ ಕೈಥಪುರಮ್ ಗ್ರಾಮದ ಬಳಿ ಹೋಗುವಾಗ ಕಾರಿನ  ಸ್ಟೀರಿಂಗ್ ಒಮ್ಮೆಲೆ ಲಾಕ್ ಆದ ಕಾರಣ, ಕಾರು ಚಾಲಕನ ನಿಯಂತ್ರಣ ತಪ್ಪಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅದೃಷ್ಟವಶಾತ್, ಪ್ರಯಾಣಿಸುತ್ತಿದ್ದ ಕಾರಿನಲ್ಲಿದ್ದ ಯಾರಿಗೂ ಅಪಾಯ ಉಂಟಾಗಿಲ್ಲ. ಅಪಘಾತ ನಡೆದದ್ದನ್ನು ಕಂಡ ರಾಜ್ಯಪಾಲರ ಬೆಂಗಾವಲು ಪಡೆ, ತಕ್ಷಣ ರಾಜ್ಯಪಾಲರನ್ನು ಕಾಪಾಡಿದೆ ಎಂದು ಮೂಲಗಳು ತಿಳಿಸಿವೆ. ಈ ಕುರಿತು ಇನ್ನಷ್ಟೇ ಹೆಚ್ಚಿನ ತನಿಖೆ ನಡೆಸಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.