ಕರ್ನಾಟಕದ ಅರ್ಧದಷ್ಟು ಬಾಲಕಿಯರಿಗೆ ರಕ್ತಹೀನತೆ; ಏಕೆ ಹೀಗಾಯ್ತು?

ಕರ್ನಾಟಕದಲ್ಲಿ ಶೇ 49.4 ಬಾಲಕಿಯರು ರಕ್ತಹೀನತೆಯಿಂದ ಬಳಲುತ್ತಿದ್ದಾರೆ ಎಂಬ ಮಾಹಿತಿ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ-5 (ಎನ್​ಎಫ್​ಎಚ್​ಎಸ್) ವರದಿಯಲ್ಲಿ ಬಹಿರಂಗವಾಗಿದೆ.

ಕರ್ನಾಟಕದ ಅರ್ಧದಷ್ಟು ಬಾಲಕಿಯರಿಗೆ ರಕ್ತಹೀನತೆ; ಏಕೆ ಹೀಗಾಯ್ತು?
ಸಾಂದರ್ಭಿಕ ಚಿತ್ರ
preethi shettigar

| Edited By: Ghanashyam D M | ಡಿ.ಎಂ.ಘನಶ್ಯಾಮ

Dec 14, 2020 | 2:44 PM

ದೆಹಲಿ: ಕರ್ನಾಟಕದಲ್ಲಿ ಶೇ 49.4 ಬಾಲಕಿಯರು ರಕ್ತಹೀನತೆಯಿಂದ ಬಳಲುತ್ತಿದ್ದಾರೆ ಎಂಬ ಮಾಹಿತಿ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ-5 (ಎನ್​ಎಫ್​ಎಚ್​ಎಸ್) ವರದಿಯಲ್ಲಿ ಬಹಿರಂಗವಾಗಿದೆ. ಕೇಂದ್ರ ಸರ್ಕಾರ ಶನಿವಾರ ಈ ಬಗ್ಗೆ ಅಧಿಕೃತ ಮಾಹಿತಿಯನ್ನು ಬಿಡುಗಡೆ ಮಾಡಿದ್ದು, 2015-16ರ ಸಾಲಿನಲ್ಲಿ ಈ ಅಂಕಿ ಅಂಶ ಶೇ 45.3ರಷ್ಟು ಇತ್ತು ಎಂದು ತಿಳಿಸಿದೆ. ಅಂದರೆ ಕರ್ನಾಟದಲ್ಲಿ ರಕ್ತಹೀನತೆಯಿಂದ ಬಳಲುತ್ತಿರುವ ಬಾಲಕಿಯರ ಪ್ರಮಾಣ ಕಳೆದ ಐದು ವರ್ಷಗಳಲ್ಲಿ ಶೇ 4ರಷ್ಟು ಹೆಚ್ಚಾಗಿದೆ.

ಮಹಿಳೆಯರ ದೈಹಿಕ ಸಮಸ್ಯೆಗಳು ಮತ್ತು ಮಕ್ಕಳ ಆರೋಗ್ಯದ ವಿಷಯದಲ್ಲಿ ಕರ್ನಾಟಕವು ಹಲವು ಸುಧಾರಣೆಗಳನ್ನು ಜಾರಿ ಮಾಡಿದೆ. 2015-16ರ ಸಾಲಿನಲ್ಲಿ ಪ್ರತಿ 1000 ಪುರುಷರಿಗೆ 979 ಮಹಿಳೆಯರು ಇದ್ದರು. ಈಗ ಮಹಿಳೆಯರ ಸಂಖ್ಯೆ 1034ಕ್ಕೆ ಏರಿಕೆಯಾಗಿದೆ. ಇದು ಉತ್ತಮ ಬೆಳವಣಿಗೆ.

ಆದರೆ ಶಿಶುಮರಣ ಪ್ರಮಾಣ ತಗ್ಗುವ ಬದಲು, ಶೇ 3ರಷ್ಟು ಹೆಚ್ಚಾಗಿದೆ ಎಂಬ ಆತಂಕಕಾರಿ ಅಂಶವೂ ಸಮೀಕ್ಷೆಯಲ್ಲಿ ಬಹಿರಂಗಗೊಂಡಿದೆ. ಈ ಹಿಂದೆ ಶಿಶುಮರಣ ಪ್ರಮಾಣ ಶೇ 15.8 ಇತ್ತು. ಈಗ ಶೇ 18.5ಕ್ಕೆ ಏರಿಕೆಯಾಗಿದೆ. ಮಗು ಜನಿಸಿದ ಮೊದಲ ಒಂದು ಗಂಟೆಯ ಒಳಗೆ ಎದೆಹಾಲು ಕುಡಿಸುವ ಪ್ರಮಾಣ ಶೇ 56ರಿಂದ ಶೇ 49ಕ್ಕೆ ಅಂದರೆ ಶೇ 7ರಷ್ಟು ಕಡಿಮೆಯಾಗಿದೆ.

ಕಬ್ಬಿಣ ಮತ್ತು ಫೋಲಿಕ್ ಆಮ್ಲದ ಮಾತ್ರೆಗಳನ್ನು ಸೇವಿಸುವ ಗರ್ಭ ಧರಿಸಿದ ಮಹಿಳೆಯರ ಸಂಖ್ಯೆಯೂ ಕಡಿಮೆಯಾಗಿದೆ. 5 ವರ್ಷಗಳ ಹಿಂದೆ ವರದಿ ಈ ಮಹಿಳೆಯರ ಪ್ರಮಾಣ ಶೇ 32.6 ಇತ್ತು. ಆದರೆ ಇದರ ಸಂಖ್ಯೆ ಈಗ ಶೇ 26.7 ಆಗಿದೆ. ರಾಜ್ಯದ ಪುರುಷರು ಮತ್ತು ಮಹಿಳೆಯರಲ್ಲಿ ಬೊಜ್ಜಿನ ಮಟ್ಟ ಹೆಚ್ಚಾಗುತ್ತಿರುವ ಆತಂಕಕಾರಿ ಮಾಹಿತಿಯೂ ಈ ಸಮೀಕ್ಷೆಯಲ್ಲಿದೆ.

ಕೋವಿಡ್-19 ಕಾರಣದಿಂದಾಗಿ ಉಳಿದ 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶವನ್ನು ಎರಡನೇ ಹಂತದಲ್ಲಿ ಸಮೀಕ್ಷೆ ಆರಂಭಿಸಲಾಗುವುದು. ಇದು 2021ರ ಮೇ ವೇಳೆಗೆ ಇದು ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎಂದು ಆರೋಗ್ಯ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

ಎನ್​ಎಫ್​ಎಚ್​ಎಸ್​ನ 4ನೇ ಸಮೀಕ್ಷೆಗಿಂತ ತಾಯಿ ಮತ್ತು ಮಕ್ಕಳ ಆರೋಗ್ಯ ಸೂಚಕಗಳಲ್ಲಿ ಗಣನೀಯ ಸುಧಾರಣೆಯಾಗಿದೆ. ಒಟ್ಟಾರೆಯಾಗಿ ದೇಶದಾದ್ಯಂತ ಅಪೌಷ್ಟಿಕತೆಯ ಪ್ರಮಾಣ 2015-16ರಲ್ಲಿ ವರದಿಯಾದ ಪ್ರಮಾಣಕ್ಕಿಂತ ಕಡಿಮೆ ಇದೆ. ಸಮೀಕ್ಷೆ ನಡೆಸಿದ ಒಟ್ಟು 22 ರಾಜ್ಯಗಳ ಪೈಕಿ 18 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಶಿಶು ಮತ್ತು 5 ವರ್ಷಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ಮರಣ ಪ್ರಮಾಣ ಕಡಿಮೆಯಾಗಿದೆ. ಅದರಲ್ಲಿ 16 ಕೆಜಿಗಿಂತ ಕಡಿಮೆ ತೂಕ ಹೊಂದಿರುವ 5 ವರ್ಷದೊಳಗಿನ ಮಕ್ಕಳ ಶೇಕಡಾವಾರು ಪ್ರಮಾಣದಲ್ಲಿ ಹೆಚ್ಚಳ ಕಂಡುಬಂದಿದೆ ಎಂದು ಸಚಿವಾಲಯ ತಿಳಿಸಿದೆ.

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada