ಮುಷ್ಕರ ನಿಲ್ಲಿಸೋಣ ಎಂದ ಮಲ್ಲಿಕಾರ್ಜುನ್ ಹೇಳಿಕೆ ವಿರುದ್ಧ ರೊಚ್ಚಿಗೆದ್ದ ಧರಣಿನಿರತ ಸಿಬ್ಬಂದಿ..
ಎಸ್ಸಿ, ಎಸ್ಟಿ ನೌಕರರ ಸಂಘದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ್ಗೆ ಧರಣಿನಿರತ ಸಿಬ್ಬಂದಿ ತರಾಟೆಗೆ ತೆಗೆದುಕೊಂಡಿದ್ದಾರೆ. ನೀನು ಯಾವತ್ತಾದ್ರೂ ಪ್ರತಿಭಟನೆ ಮಾಡಿದ್ದೀಯಾ? ಎಂದು ಹಿಗ್ಗಾ ಮುಗ್ಗಾ ಜಾಡಿಸಿದ್ದಾರೆ.
ಬೆಂಗಳೂರು: ಮುಖ್ಯಮಂತ್ರಿ ಜೊತೆ ಚರ್ಚೆ ಬಳಿಕ ಹೇಳಿಕೆ ಕೊಟ್ಟ ಹಿನ್ನೆಲೆಯಲ್ಲಿ ಎಸ್ಸಿ, ಎಸ್ಟಿ ನೌಕರರ ಸಂಘದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ್ಗೆ ಧರಣಿನಿರತ ಸಿಬ್ಬಂದಿ ತರಾಟೆಗೆ ತೆಗೆದುಕೊಂಡಿದ್ದಾರೆ. ನೀನು ಯಾವತ್ತಾದ್ರೂ ಪ್ರತಿಭಟನೆ ಮಾಡಿದ್ದೀಯಾ? ಎಂದು ಹಿಗ್ಗಾ ಮುಗ್ಗಾ ಜಾಡಿಸಿದ್ದಾರೆ.
ಮುಷ್ಕರ ನಿರತ ಸಿಬ್ಬಂದಿಗೂ, ನಮ್ಮ ಸಂಘಟನೆಗೂ ಸಂಬಂಧವಿಲ್ಲ: ಸಿಎಂ ಜೊತೆ ಚರ್ಚೆ ಬಳಿಕ ಮಲ್ಲಿಕಾರ್ಜುನ್, ಮುಷ್ಕರ ನಿರತ ಸಿಬ್ಬಂದಿಗೂ ನಮ್ಮ ಸಂಘಟನೆಗೂ ಸಂಬಂಧವಿಲ್ಲ. 10 ಬೇಡಿಕೆಗಳ ಪೈಕಿ ಸರ್ಕಾರ 9 ಬೇಡಿಕೆ ಈಡೇರಿಸುವ ಭರವಸೆ ನೀಡಿತ್ತು. ಕೋಡಿಹಳ್ಳಿ ಮಾತು ನಂಬಿಕೊಂಡು ಮುಷ್ಕರ ಮುಂದುವರಿಸಿದ್ದಾರೆ.
ಸಾರ್ವಜನಿಕರ ಹಿತದೃಷ್ಟಿಯಿಂದ ಮುಷ್ಕರಕ್ಕೆ ಬೆಂಬಲ ನೀಡುವುದಿಲ್ಲ. ಈ ಕ್ಷಣದಿಂದಲೇ ನಾವು ನಮ್ಮ ಬಸ್ಗಳನ್ನ ರಸ್ತೆಗೆ ಇಳಿಸಲಿದ್ದೇವೆ. ಧೈರ್ಯದಿಂದ ಬಸ್ ರಸ್ತೆಗಿಳಿಸುವಂತೆ ಪದಾಧಿಕಾರಿಗಳಿಗೆ ಮನವಿ ಮಾಡಿದ್ದೇನೆ ಎಂದು ಹೇಳಿದ್ದರು. ಇವರ ಈ ಹೇಳಿಕೆಗೆ ಧರಣಿನಿರತ ಸಿಬ್ಬಂದಿ ಆಕ್ರೋಶಗೊಂಡಿದ್ದಾರೆ.
ನೀನು ಯಾವತ್ತಾದ್ರೂ ಪ್ರತಿಭಟನೆ ಮಾಡಿದ್ದೀಯಾ? ನಮ್ಮ ಸಮಸ್ಯೆ ಯಾವತ್ತಾದ್ರೂ ಕೇಳಿದ್ದೀಯಾ. ಈಗ ಬಂದು ಮಾತನಾಡುತ್ತೀಯಾ ಎಂದು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಸಾರಿಗೆ ನೌಕರರನ್ನು ಸರ್ಕಾರಿ ನೌಕರನ್ನಾಗಿ ಮಾಡಿ ಎಂದು ಸಾರಿಗೆ ಸಿಬ್ಬಂದಿ ನಾಲ್ಕು ದಿನಗಳಿಂದ ಮುಷ್ಕರ ಮಾಡುತ್ತಿದ್ದಾರೆ. ಚಳಿ, ಗಾಳಿ ಲೆಕ್ಕಿಸದೆ ಸರ್ಕಾರಕ್ಕೆ ಮಣಿಯದೆ ಮುಷ್ಕರ ಮಾಡುತ್ತಿದ್ದಾರೆ.
ಒಂದೊಂದು ಗಂಟೆಗೆ ಒಂದೊಂದು ಹೇಳಿಕೆ ಕೊಡ್ತಿದ್ದಾರೆ -ಕೋಡಿಹಳ್ಳಿ ವಿರುದ್ಧ ಸವದಿ ಗರಂ