ಸಗಟು ಹಣದುಬ್ಬರ ನವೆಂಬರ್ ತಿಂಗಳಲ್ಲಿ ಗರಿಷ್ಠ; ಸಿದ್ಧ ಉತ್ಪನ್ನಗಳ ಬೆಲೆ ಹೆಚ್ಚಳ, ಆಹಾರ ಪದಾರ್ಥಗಳಲ್ಲಿ ತುಸು ಇಳಿಕೆ

2020ರ ಅಕ್ಟೋಬರ್ ತಿಂಗಳನಲ್ಲಿ ಡಬ್ಲ್ಯುಪಿಐ ಶೇ 1.48 ಆಗಿದ್ದು, ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಇದು 0.58 ಆಗಿತ್ತು. ಫೆಬ್ರುವರಿ ತಿಂಗಳಿನಲ್ಲಿ ಡಬ್ಲ್ಯುಪಿಐ ಆಧಾರಿತ ಹಣದುಬ್ಬರ ಶೇ 2.26 ಆಗಿತ್ತು. ಇದೀಗ 9 ತಿಂಗಳ ನಂತರ ಹಣದುಬ್ಬರದ ಪ್ರಮಾಣ ಗರಿಷ್ಠ ಪ್ರಮಾಣದಲ್ಲಿ ಹೆಚ್ಚಾಗಿದೆ.

ಸಗಟು ಹಣದುಬ್ಬರ ನವೆಂಬರ್ ತಿಂಗಳಲ್ಲಿ ಗರಿಷ್ಠ; ಸಿದ್ಧ ಉತ್ಪನ್ನಗಳ ಬೆಲೆ ಹೆಚ್ಚಳ, ಆಹಾರ ಪದಾರ್ಥಗಳಲ್ಲಿ ತುಸು ಇಳಿಕೆ
ಪ್ರಾತಿನಿಧಿಕ ಚಿತ್ರ
Follow us
ರಶ್ಮಿ ಕಲ್ಲಕಟ್ಟ
|

Updated on:Dec 14, 2020 | 3:09 PM

ನವದೆಹಲಿ: ಸಗಟು ಬೆಲೆ ಸೂಚ್ಯಂಕ (wholesale price index – WPI) ಆಧಾರಿತ ಹಣದುಬ್ಬರವು ಶೇ 1.55ರಷ್ಟು ಏರಿಕೆ ಆಗಿದೆ. ಸಿದ್ಧ ಉತ್ಪನ್ನಗಳು ತುಟ್ಟಿಯಾಗಿರುವ ಮತ್ತು ಆಹಾರ ಉತ್ಪನ್ನಗಳ ಬೆಲೆ ಇಳಿಕೆಯಾಗಿರುವುದನ್ನು ಇದು ಸೂಚಿಸಿದೆ.

2020ರ ಅಕ್ಟೋಬರ್ ತಿಂಗಳನಲ್ಲಿ ಡಬ್ಲ್ಯುಪಿಐ ಶೇ 1.48 ಆಗಿದ್ದು, ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಇದು 0.58 ಆಗಿತ್ತು. ಫೆಬ್ರುವರಿ ತಿಂಗಳಿನಲ್ಲಿ ಡಬ್ಲ್ಯುಪಿಐ ಆಧಾರಿತ ಹಣದುಬ್ಬರ ಶೇ 2.26 ಆಗಿತ್ತು. ಇದೀಗ 9 ತಿಂಗಳ ನಂತರ ಹಣದುಬ್ಬರದ ಪ್ರಮಾಣ ಗರಿಷ್ಠ ಪ್ರಮಾಣದಲ್ಲಿ ಹೆಚ್ಚಾಗಿದೆ.

ಅಕ್ಟೋಬರ್ ತಿಂಗಳಲ್ಲಿ ಆಹಾರದ ಹಣದುಬ್ಬರ ಶೇ 6.37 ಮತ್ತು ನವೆಂಬರ್ ತಿಂಗಳಲ್ಲಿ ಹಣದುಬ್ಬರ ದರ ಶೇ 3.94 ಆಗಿದೆ. ತರಕಾರಿ ಮತ್ತು ಆಲೂಗೆಡ್ಡೆಯ ಬೆಲೆ ಕ್ರಮವಾಗಿ ಶೇ 12.24 ಮತ್ತು ಶೇ 15.12  ಏರಿಕೆಯಾಗಿದೆ.

ನವೆಂಬರ್ ತಿಂಗಳನಲ್ಲಿ ಆಹಾರ ಉತ್ಪನ್ನಗಳಲ್ಲದ ವಸ್ತುಗಳ ಹಣದುಬ್ಬರವು ಶೇ 8.43 ಆಗಿದೆ. ಇಂಧನ ಮತ್ತು ವಿದ್ಯುತ್ ಶೇ 9.87 ಇಳಿಕೆ ಆಗಿದೆ. ಈ ತಿಂಗಳ ಆರಂಭದಲ್ಲಿ ಹಣಕಾಸು ನೀತಿ ಪ್ರಕಟಿಸಿದ ಆರ್​​ಬಿಐ ಹಣದುಬ್ಬರವು ಏರಿಕೆಯಾಗಲಿದೆ ಎಂದು ಹೇಳಿತ್ತು. ಅಕ್ಟೋಬರ್-ಡಿಸೆಂಬರ್ ತ್ರೈಮಾಸಿಕದಲ್ಲಿ ಗ್ರಾಹಕ ಬೆಲೆ ಸೂಚ್ಯಂಕದ ಆಧಾರದ ಮೇಲೆ ಚಿಲ್ಲರೆ ಹಣದುಬ್ಬರ ಶೇಕಡಾ 6.8 ರಷ್ಟು ನಿರೀಕ್ಷಿಸುವುದಾಗಿ ಆರ್​​ಬಿಐ ಹೇಳಿತ್ತು.

Published On - 3:05 pm, Mon, 14 December 20