ಕಾರ್ಮಿಕರ ಕೋರಿಕೆಯಂತೆ.. ಲಿಖಿತ ಪತ್ರ ಹಸ್ತಾಂತರಿಸಿದ BMTC ಅಧ್ಯಕ್ಷ ನಂದೀಶ್ ರೆಡ್ಡಿ
ಫ್ರೀಡಂಪಾರ್ಕ್‌ನಲ್ಲಿ ಮುಷ್ಕರ ನಿರತ ಸಾರಿಗೆ ಸಿಬ್ಬಂದಿಗೆ ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿ ಲಿಖಿತ ಭರವಸೆ ಪತ್ರವನ್ನು ಹಸ್ತಾಂತರ ಮಾಡಿದರು. ನಂತರ ಅವರು ಯಾವುದೇ ಪ್ರತಿಕ್ರಿಯೆ ನೀಡದೆ ಅಲ್ಲಿಂದ ತೆರಳಿದರು.
ಬೆಂಗಳೂರು: ಫ್ರೀಡಂಪಾರ್ಕ್‌ನಲ್ಲಿ ಮುಷ್ಕರ ನಿರತ ಸಾರಿಗೆ ಸಿಬ್ಬಂದಿಗೆ ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿ ಲಿಖಿತ ಭರವಸೆ ಪತ್ರವನ್ನು ಹಸ್ತಾಂತರ ಮಾಡಿದರು. ನಂತರ ಅವರು ಯಾವುದೇ ಪ್ರತಿಕ್ರಿಯೆ ನೀಡದೆ ಅಲ್ಲಿಂದ ತೆರಳಿದರು.
ಸಾರಿಗೆ ನೌಕರರ ಬೇಡಿಕೆಯಂತೆ ಲಿಖಿತ ಭರವಸೆ ಪತ್ರದೊಂದಿಗೆ ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿ ಆಗಮಿಸಿದರು. ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿಗೆ ಶಾಸಕ ರಾಜೂ ಗೌಡ ಮತ್ತು ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಸಾಥ್ ಕೊಟ್ಟರು.
ಇತ್ತ, ಸರ್ಕಾರದ ಲಿಖಿತ ಭರವಸೆ ಪತ್ರವನ್ನು ಪಡೆದ ಕೋಡಿಹಳ್ಳಿ ಚಂದ್ರಶೇಖರ್ ಅದನ್ನು ಪ್ರದರ್ಶಿಸಿದರು. ಫ್ರೀಡಂಪಾರ್ಕ್‌ನಲ್ಲಿ ನೆರೆದಿದ್ದ ಸಿಬ್ಬಂದಿಗೆ ತೋರಿಸಿದರು.
Published On - 1:35 pm, Mon, 14 December 20