ಯಾರದ್ದೋ ಸ್ವಪ್ರತಿಷ್ಠೆಗೆ ರಾಜ್ಯದಲ್ಲಿ ಜನ, ರೋಗಿಗಳಿಗೆ ತೊಂದ್ರೆ ಕೊಡ್ತಿದ್ದಾರೆ -ಸಚಿವ ಆರ್.ಅಶೋಕ್
ಇಡೀ ರಾಜ್ಯದ ಜನ ಈ ರೀತಿಯ ನಾಟಕವನ್ನ ನೋಡುತ್ತಿದ್ದಾರೆ. ಸ್ವಪ್ರತಿಷ್ಠೆಗೆ ರಾಜ್ಯದಲ್ಲಿ ಜನ, ರೋಗಿಗಳಿಗೆ ತೊಂದ್ರೆ ಕೊಡ್ತಿದ್ದಾರೆ ಎಂದು ಬೆಂಗಳೂರಿನಲ್ಲಿ ಕಂದಾಯ ಸಚಿವ ಆರ್.ಅಶೋಕ್ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.
ಬೆಂಗಳೂರು: ಇಡೀ ರಾಜ್ಯದ ಜನ ಈ ರೀತಿಯ ನಾಟಕವನ್ನ ನೋಡುತ್ತಿದ್ದಾರೆ. ಸ್ವಪ್ರತಿಷ್ಠೆಗೆ ರಾಜ್ಯದಲ್ಲಿ ಜನ, ರೋಗಿಗಳಿಗೆ ತೊಂದ್ರೆ ಕೊಡ್ತಿದ್ದಾರೆ ಎಂದು ಬೆಂಗಳೂರಿನಲ್ಲಿ ಕಂದಾಯ ಸಚಿವ ಆರ್.ಅಶೋಕ್ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.
SC, ST ನೌಕರರ ಸಂಘ ತಮ್ಮ ಬೆಂಬಲ ವಾಪಸ್ ಪಡೆದಿದ್ದಾರೆ. ಒಬ್ಬರ ಸ್ವಪ್ರತಿಷ್ಠಯಿಂದ ಇಷ್ಟೊಂದು ಅನಾಹುತಗಳು ಬೇಡ. ವಿಧಾನಸೌಧದಲ್ಲಿ ಮಾತಾಡುವುದು ಒಂದು, ಅಲ್ಲಿ ಹೇಳೋದೊಂದು. ನಾವು ಹೇಳಿರುವ 9 ಬೇಡಿಕೆ ಈಡೇರಿಸಲು ನಾವು ಬದ್ಧರಿದ್ದೇವೆ.
ನಾವು ನಿನ್ನೆ ಒಪ್ಪಿಕೊಂಡಿರುವುದನ್ನ ಕೊಡುವುದಕ್ಕೆ ಸಿದ್ಧರಿದ್ದೇವೆ. ಹೋರಾಟ ದಾರಿ ತಪ್ಪುತ್ತಿದೆ ಎಂದು ಕೋಡಿಹಳ್ಳಿ ಹೇಳಿದ್ದರು. ಇಲ್ಲಿ ಯಾರು ಹುಳಿ ಹಿಂಡುತ್ತಿದ್ದಾರೆಂದು ಸ್ಪಷ್ಟವಾಗಿ ತಿಳಿಯಬೇಕು. ರಾಜ್ಯವ್ಯಾಪಿ ಸಿಬ್ಬಂದಿ ಮುಷ್ಕರ ನಿಲ್ಲಿಸಿ ಕರ್ತವ್ಯಕ್ಕೆ ವಾಪಸಾಗಬೇಕು ಎಂದು ಆರ್.ಅಶೋಕ್ ಸಿಎಂ ಜೊತೆಗಿನ ಸಭೆಯ ಬಳಿಕ ಈ ರೀತಿ ಹೇಳಿದ್ರು.
ಯಾವುದೇ ಕಾರಣಕ್ಕೂ ಮುಷ್ಕರ ವಾಪಸ್ ಪಡೆಯೋವುದಿಲ್ಲ -ಕೋಡಿಹಳ್ಳಿ ಪಟ್ಟು ಏನು?
Published On - 12:56 pm, Mon, 14 December 20