AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೀದರ್​: 25 ಜನ ಪ್ರಯಾಣಿಕರಿದ್ದ ಬಸ್​ ಮೇಲೆ ಕಲ್ಲೆಸೆತ

ಬೀದರ್​ನ ಬರಿದ್ ಶಾಯಿ ಗಾರ್ಡನ್ ಬಳಿ ಬಸ್​ ಮೇಲೆ ಕಲ್ಲು ತೂರಾಟ ನಡೆಸಿ ಕಿಡಗೇಡಿ ಯುವಕರ ಗ್ಯಾಂಗ್ ಪಾರಾರಿಯಾಗಿದ್ದಾರೆ.

ಬೀದರ್​: 25 ಜನ ಪ್ರಯಾಣಿಕರಿದ್ದ ಬಸ್​ ಮೇಲೆ ಕಲ್ಲೆಸೆತ
ಈಶಾನ್ಯ ಕರ್ನಾಟಕ ಸಾರಿಗೆ ಬಸ್​ ಮೇಲೆ ಕಲ್ಲೆಸೆತ
ಆಯೇಷಾ ಬಾನು
|

Updated on:Dec 14, 2020 | 1:32 PM

Share

ಬೀದರ್: ಮೂರು ದಿನಗಳಿಂದ ನಿಂತಲ್ಲೇ ನಿಂತಿದ್ದ ಬಸ್​ಗಳು ಇಂದು ನಿಧಾನವಾಗಿ ರಸ್ತೆಗೆ ಇಳಿಯುತ್ತಿವೆ. ಪೊಲೀಸ್ ಭದ್ರತೆಯಲ್ಲಿ ಬಸ್ ಸೇವೆ ಆರಂಭವಾಗುತ್ತಿದೆ. ಇದರ ನಡುವೆಯೇ ಬೀದರ್​ನಲ್ಲಿ ಈಶಾನ್ಯ ಕರ್ನಾಟಕ ಸಾರಿಗೆ ಬಸ್​ ಮೇಲೆ ಕಲ್ಲು ತೂರಾಟ ನಡೆದಿದೆ.

ಬೀದರ್​ನ ಬರಿದ್ ಶಾಯಿ ಗಾರ್ಡನ್ ಬಳಿ ಬಸ್​ ಮೇಲೆ ಕಲ್ಲು ತೂರಾಟ ನಡೆಸಿ ಪಾರಾರಿಯಾಗಿದ್ದಾರೆ. ಕಲಬುರ್ಗಿಯಿಂದ ಬೀದರ್​ಗೆ ಬರುತ್ತಿದ್ದ ಬಸ್​ನಲ್ಲಿ 25 ಜನ ಪ್ರಯಾಣಿಕರಿದ್ದರು. ಕಿಡಗೇಡಿ ಯುವಕರ ಗ್ಯಾಂಗ್ ಈ ಬಸ್ ಮೇಲೆ ಕಲ್ಲುತೂರಿ ಪರಾರಿಯಾಗಿದ್ದಾರೆ.

ಕಲಬುರಗಿಯಿಂದ ಪೊಲೀಸ್ ಭದ್ರತೆಯಲ್ಲಿ ಈ ಬಸ್ ಸಂಚರಿಸುತ್ತಿತ್ತು. ಬೀದರ್ ನಗರಕ್ಕೆ ಎಂಟ್ರಿಕೊಡುತ್ತಿದ್ದಂತೆ ಪೊಲೀಸ್ ಎಸ್ಕಾರ್ಟ್ ಇರಲ್ಲಿಲ್ಲ. ಇದನ್ನ ಗಮನಿಸುತ್ತಿದ್ದ ಕಿಡಗೇಡಿ ಗ್ಯಾಂಗ್ ಕಲ್ಲೆಸೆದು ಬಸ್ ಗಾಜು ಹೊಡೆದು ಹಾಕಿದ್ದಾರೆ.

ರಾಜ್ಯದಲ್ಲಿ ಸಾರಿಗೆ ನೌಕರರ ಮುಷ್ಕರ ಮುಗಿಯಿತಾ? ಎಲ್ಲೆಲ್ಲಿ ಬಸ್​ ಸಂಚಾರ ಪ್ರಾರಂಭವಾಗಿದೆ? ಇಲ್ಲಿದೆ ಮಾಹಿತಿ

Published On - 1:31 pm, Mon, 14 December 20