Kinnaur Landslide: ಹಿಮಾಚಲ ಪ್ರದೇಶದಲ್ಲಿ ಭೂಕುಸಿತ; ಸಾವನ್ನಪ್ಪಿದವರ ಸಂಖ್ಯೆ 23ಕ್ಕೆ ಏರಿಕೆ
Himachal Pradesh Landslide | ಹಿಮಾಚಲ ಪ್ರದೇಶದ ಕಿನೌರ್ನಲ್ಲಿ ಕಳೆದ ಬುಧವಾರ ಮಧ್ಯಾಹ್ನ ಈ ಭೂಕುಸಿತ ಸಂಭವಿಸಿದ್ದು, ಒಟ್ಟು 23 ಶವಗಳನ್ನು ಹೊರತೆಗೆಯಲಾಗಿದೆ.
ಕಿನೌರ್: ಹಿಮಾಚಲ ಪ್ರದೇಶದ ಕಿನೌರ್ (Kinnaur Landslide) ಪ್ರದೇಶದಲ್ಲಿ ಉಂಟಾಗಿರುವ ಭಾರೀ ಭೂಕುಸಿತದ ಸಾವಿನ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ನಿನ್ನೆ ಸಂಜೆಯಿಂದ ಮತ್ತೆ 6 ಶವಗಳನ್ನು ಹೊರಗೆ ತೆಗೆಯಲಾಗಿದ್ದು, ಮೃತಪಟ್ಟವರ ಸಂಖ್ಯೆ 23ಕ್ಕೆ ಏರಿಕೆಯಾಗಿದೆ. ದುರಂತ ನಡೆದ ಸ್ಥಳದಲ್ಲಿ ಶೋಧ ಕಾರ್ಯಾಚರಣೆ (Rescue Operation) ಮುಂದುವರೆದಿದೆ. ಇನ್ನೂ 10ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ.
ಕಳೆದ ಬುಧವಾರ ಮಧ್ಯಾಹ್ನ ಈ ಭೂಕುಸಿತ ಸಂಭವಿಸಿದ್ದು, ಒಟ್ಟು 23 ಶವಗಳನ್ನು ಹೊರತೆಗೆಯಲಾಗಿದೆ. ಇನ್ನೂ 10ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದು, ಅವರು ಬದುಕಿರುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ. ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ಕಳೆದ ಬುಧವಾರ ಇದ್ದಕ್ಕಿದ್ದಂತೆ ಗುಡ್ಡ ಹಾಗೂ ಕಲ್ಲು ಬಂಡೆಗಳು ಕುಸಿದ ಕಾರಣ ರಸ್ತೆಯಲ್ಲಿ ಸಾಗುತ್ತಿದ್ದ ಬಸ್, ಟ್ರಕ್ ಕೂಡ ಅವಶೇಷಗಳಡಿ ಸಿಲುಕಿತ್ತು. ಈ ವಾಹನಗಳಲ್ಲಿದ್ದ ಸುಮಾರು 50ಕ್ಕೂ ಹೆಚ್ಚು ಜನರು ಮಣ್ಣಿನಡಿ ಸಿಲುಕಿದ್ದರು. ಈಗಾಗಲೇ ಒಟ್ಟು 23 ಶವಗಳನ್ನು ಹೊರಗೆ ತೆಗೆಯಲಾಗಿದೆ. 10 ಜನರನ್ನು ರಕ್ಷಣೆ ಮಾಡಲಾಗಿದೆ. ಇನ್ನೂ 10ಕ್ಕೂ ಹೆಚ್ಚು ಜನರು ಸಿಲುಕಿಕೊಂಡಿದ್ದಾರೆ. ಅವರಿಗಾಗಿ ಶೋಧ ಕಾರ್ಯಾಚರಣೆ ಮುಂದುವರೆದಿದೆ.
Six more bodies recovered from site of landslide in Himachal Pradesh’s Kinnaur district, taking death toll to 23 on fourth day of rescue and search operations: Official
— Press Trust of India (@PTI_News) August 14, 2021
ಇದ್ದಕ್ಕಿದ್ದಂತೆ ಕಿನೌರ್ ಪ್ರದೇಶದಲ್ಲಿ ಮಳೆ ಕೂಡ ಸುರಿಯುತ್ತಿದ್ದು, ಕಲ್ಲು, ಮಣ್ಣಿನಡಿ ಸಿಲುಕಿರುವ ಜನರನ್ನು ಹುಡುಕುವುದು ಸವಾಲಿನ ಕೆಲಸವಾಗಿದೆ. ಎನ್ಡಿಆರ್ಎಫ್, ಐಟಿಬಿಪಿ ಸಿಬ್ಬಂದಿಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಹಿಮಾಚಲ ಪ್ರದೇಶದ ಹಲವೆಡೆ ಇನ್ನೂ ಭೂಕುಸಿತ ಉಂಟಾಗುತ್ತಿದೆ. ಭೂಕುಸಿತ ಉಂಟಾದ ಜಾಗದಲ್ಲಿ ಸುಮಾರು 5 ವಾಹನಗಳು ಸಿಲುಕಿರುವ ಸಾಧ್ಯತೆಯಿದೆ.
Visuals of shooting stones and landslide at the landslide site near Nugalsari, Kinnaur, HP at 1300 Hrs today. 10 dead bodies have been retrieved so far from the rubble. 14 people have been rescued. #kinnaurlandslide #Kinnaur pic.twitter.com/iuEfLTPY6u
— ITBP (@ITBP_official) August 11, 2021
ಕಿನೌರ್ನಲ್ಲಿ ಬುಧವಾರ ಮಧ್ಯಾಹ್ನ 12.45ಕ್ಕೆ ಈ ಭೂಕುಸಿತ ಸಂಭವಿಸಿದ್ದು, ರಸ್ತೆಯಲ್ಲಿ ಹಿಮಾಚಲ ಪ್ರದೇಶದ ಸಾರಿಗೆ ಬಸ್ ಸಂಚರಿಸುತ್ತಿದ್ದಾಗಲೇ ಭೂಕುಸಿತ ಉಂಟಾಗಿತ್ತು. ಇದರಿಂದ ಬಸ್ ಹಾಗೂ ಅದರ ಹಿಂದೆ ಮುಂದೆ ಬರುತ್ತಿದ್ದ ಕೆಲವು ವಾಹನಗಳು ಕೂಡ ಮಣ್ಣಿನಡಿ ಮುಚ್ಚಿಹೋಗಿತ್ತು. ಆ ಬಸ್ನಲ್ಲಿದ್ದ 25ಕ್ಕೂ ಹೆಚ್ಚು ಜನರು ಇನ್ನೂ ಪತ್ತೆಯಾಗಿಲ್ಲ. ಇದರ ಜೊತೆ ಟ್ರಕ್ ಹಾಗೂ ಕಾರುಗಳಲ್ಲಿದ್ದ ಜನರು ಕೂಡ ಮಣ್ಣಿನಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.
ಇದನ್ನೂ ಓದಿ: Himachal Pradesh Landslide: ಹಿಮಾಚಲ ಪ್ರದೇಶದಲ್ಲಿ ಭಾರೀ ಭೂಕುಸಿತ; ಮಣ್ಣಿನಡಿ ಸಿಲುಕಿದ 40ಕ್ಕೂ ಹೆಚ್ಚು ಜನ
(Himachal Pradesh Landslide Six more bodies recovered in Kinnaur Landslide Site death toll rises to 23)
Published On - 3:58 pm, Sat, 14 August 21