ದೆಹಲಿ ಆಗಸ್ಟ್ 14: ಹಿಮಾಚಲ ಪ್ರದೇಶದಲ್ಲಿ (Himachal Pradesh) ಮಳೆ ಹಾನಿ ಮುಂದುವರಿದಿದ್ದು ಕಳೆದ 24 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ಸಂಭವಿಸಿದ ದುರಂತದಲ್ಲಿ, ಹಠಾತ್ ಪ್ರವಾಹಕ್ಕೆ (flash floods) ಸಿಲುಕಿ ಏಳು ಜನರು ಸಾವಿಗೀಡಾಗಿದ್ದಾರೆ ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು (Sukhvinder Singh Sukhu) ಹೇಳಿದ್ದಾರೆ. ಮಂಡಿ ಜಿಲ್ಲೆಯ ಸಂಬಾಲ್ ಗ್ರಾಮದಿಂದ ವಿಡಿಯೊವೊಂದನ್ನು ಹಂಚಿಕೊಂಡ ಅವರು, ಈ ಭಯಾನಕ ಪರಿಸ್ಥಿತಿಯನ್ನು ಪರಿಹರಿಸಲು ಸಕ್ರಿಯ ರಕ್ಷಣಾ, ಹುಡುಕಾಟ ಮತ್ತು ಪರಿಹಾರ ಕಾರ್ಯಾಚರಣೆಗಳು ಪ್ರಸ್ತುತ ಪ್ರಗತಿಯಲ್ಲಿವೆ ಎಂದು ಹೇಳಿದರು. ಗುಡ್ಡಗಾಡು ರಾಜ್ಯದಲ್ಲಿ ನಿರಂತರ ಮಳೆಯಿಂದಾಗಿ ಕಳೆದ ಎರಡು ದಿನಗಳಲ್ಲಿ ಇಲ್ಲಿವರೆಗೆ 41 ಜನರು ಸಾವಿಗೀಡಾಗಿದ್ದಾರೆಯ
ಸಂಭಾಲ್, ಪಾಂಡೋಹ್ ಜಿಲ್ಲೆಯ ಮಂಡಿಯಲ್ಲಿ ದುರಂತ ಸಂಭವಿಸಿದ್ದು ಸೋಮವಾರ ಏಳು ವ್ಯಕ್ತಿಗಳು ಹಠಾತ್ ಪ್ರವಾಹದಿಂದ ಕೊಚ್ಚಿ ಹೋಗಿದ್ದಾರೆ.
ಈ ಭೀಕರ ಪರಿಸ್ಥಿತಿಯನ್ನು ಪರಿಹರಿಸಲು ಸಕ್ರಿಯ ರಕ್ಷಣಾ, ಹುಡುಕಾಟ ಮತ್ತು ಪರಿಹಾರ ಕಾರ್ಯಾಚರಣೆಗಳು ಪ್ರಸ್ತುತ ಪ್ರಗತಿಯಲ್ಲಿವೆ ಎಂದು ಸಿಎಂ ಟ್ವೀಟ್ ಮಾಡಿದ್ದಾರೆ. ಕೆಳಕ್ಕೆ ಧುಮ್ಮಿಕ್ಕುತ್ತಿರುವ ನೀರು ಕಾಣಿಸುತ್ತಿದ್ದು, ವ್ಯಕ್ತಿಯೊಬ್ಬರು “ಓ ದೇವರೇ” ಎಂದು ಪದೇ ಪದೇ ಹೇಳುವುದನ್ನು ವಿಡಿಯೊದಲ್ಲಿ ಕೇಳಿಸಿಕೊಳ್ಳಬಹುದು.
Disturbing visuals have emerged from Sambhal, Pandoh – District Mandi, where, as reported, seven individuals have been swept away by flash floods today.
Active rescue, search, and relief operations are currently in progress to address this dreadful situation. pic.twitter.com/OLgZGgXNlF
— Sukhvinder Singh Sukhu (@SukhuSukhvinder) August 14, 2023
ಭಾರೀ ಮಳೆಗೆ ಎರಡು ಪ್ರತ್ಯೇಕ ಘಟನೆಗಳಲ್ಲಿ16 ಮಂದಿ ಸಾವಿಗೀಡಾಗಿದ್ದರು. ಕಳೆದ ರಾತ್ರಿ ಸೋಲನ್ ಜಿಲ್ಲೆಯಲ್ಲಿ ಸಂಭವಿಸಿದ ಮೇಘಸ್ಫೋಟದ ನಂತರ ಏಳು ಜನರು ಸಾವಿಗೀಡಾಗಿದ್ದು, ಶಿಮ್ಲಾ ನಗರದ ಸಮ್ಮರ್ ಹಿಲ್ ಪ್ರದೇಶದ ಶಿವ ದೇವಾಲಯದಲ್ಲಿ ಭೂಕುಸಿತದಲ್ಲಿ ಒಂಬತ್ತು ಜನರು ಪ್ರಾಣ ಕಳೆದುಕೊಂಡಿದ್ದಾರೆ.
VIDEO | Himachal Pradesh CM @SukhuSukhvinder visited Shiv Temple in Summerhill, Shimla to take stock of the situation in the aftermath of a tragic landslide. pic.twitter.com/6Hv69KU6gf
— Press Trust of India (@PTI_News) August 14, 2023
ಮಳೆ ಪೀಡಿತ ಹಿಮಾಚಲ ಪ್ರದೇಶದಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ತಂಡಗಳು ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ. ಪ್ರವಾಹದಿಂದಾಗಿ ಜೀವಹಾನಿ “ಅತ್ಯಂತ ದುಃಖಕರ” ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಜನರು ಮನೆಯೊಳಗೆ ಇರುವಂತೆ ಮತ್ತು ಚರಂಡಿ ಅಥವಾ ನದಿಗಳ ಬಳಿ ಹೋಗುವುದು ಬೇಡ ಎಂದು ಹೇಳಿದ್ದಾರೆ. ಎನ್ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು ಭೂಕುಸಿತ ಪೀಡಿತ ಪ್ರದೇಶಗಳಿಂದ ದೂರ ಹೋಗುವಂತೆ ಜನರಲ್ಲಿ ಹೇಳಿದ್ದು, ಈ ಬಿಕ್ಕಟ್ಟಿನ ಸಂದರ್ಭದಲ್ಲಿ ರಾಜ್ಯಕ್ಕೆ ಭೇಟಿ ನೀಡದಂತೆ ಪ್ರವಾಸಿಗರಲ್ಲಿ ವಿನಂತಿಸಿದ್ದಾರೆ.
ಶಿಮ್ಲಾ ನಗರದಲ್ಲಿ ಸಂಭವಿಸಿದ ಎರಡು ಭೂಕುಸಿತಗಳಲ್ಲಿ 15 ರಿಂದ 20 ಮಂದಿ ಸಮಾಧಿಯಾಗಿರುವ ಶಂಕೆ ಇದೆ ಎಂದು ಶಿಮ್ಲಾದ ಡೆಪ್ಯುಟಿ ಕಮಿಷನರ್ ಆದಿತ್ಯ ನೇಗಿ ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ. ಇನ್ನೊಂದು ಸೈಟ್ ಫಾಗ್ಲಿ ಪ್ರದೇಶದಲ್ಲಿದೆ, ಅಲ್ಲಿ ಹಲವಾರು ಮನೆಗಳು ಮಣ್ಣು ಮತ್ತು ಕೆಸರುಗಳ ಅಡಿಯಲ್ಲಿ ಹೂತುಹೋಗಿವೆ.
ಸೋಲನ್‌ನ ಕಂದಘಾಟ್ ಉಪವಿಭಾಗದ ಮಾಮ್ಲಿಗ್ ಗ್ರಾಮದಲ್ಲಿ ಮೇಘಸ್ಫೋಟದ ನಂತರ ಆರು ಜನರನ್ನು ರಕ್ಷಿಸಲಾಗಿದೆ. ಎರಡು ಮನೆಗಳು ಮತ್ತು ಒಂದು ದನದ ಕೊಟ್ಟಿಗೆ ಕೊಚ್ಚಿಹೋಗಿದೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ. ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರದ ಪ್ರಕಾರ, ವಿಪತ್ತಿನ ಕಾರಣ ರಾಜ್ಯದಲ್ಲಿ 752 ರಸ್ತೆಗಳನ್ನು ಮುಚ್ಚಲಾಗಿದೆ. ಹಿಮಾಚಲ ಪ್ರದೇಶ ಮತ್ತು ನೆರೆಯ ಉತ್ತರಾಖಂಡದಲ್ಲಿ ಭಾರೀ ಮಳೆಯಾಗುತ್ತಿದ್ದು, ಹೊಸ ಪಾಶ್ಚಾತ್ಯ ಪ್ರಕ್ಷುಬ್ಧತೆಯ ಕಾರಣ ಎಂದು ಭಾರತೀಯ ಹವಾಮಾನ ಇಲಾಖೆ ಇಂದು ತಿಳಿಸಿದೆ.
ಇದನ್ನೂ ಓದಿ: ಪ್ರಾಣ ಕಳೆದುಕೊಳ್ಳಬೇಡಿ, ನೀಟ್ ರದ್ದು ಮಾಡಲಾಗುವುದು: ವಿದ್ಯಾರ್ಥಿಗಳಿಗೆ ಭರವಸೆ ನೀಡಿದ ತಮಿಳುನಾಡು ಸಿಎಂ ಸ್ಟಾಲಿನ್
ಮಾನ್ಸೂನ್ ಟ್ರೊ ಸ್ಥಳವು ಹಿಮಾಲಯದ ತಪ್ಪಲಿನಲ್ಲಿದೆ. ಆದ್ದರಿಂದ ನೈಋತ್ಯ ಅರೇಬಿಯನ್ ಸಮುದ್ರದ ಮಾನ್ಸೂನ್ ಮಾರುತಗಳು ಹಿಮಾಲಯದ ತಪ್ಪಲಿಗೆ ಅಪ್ಪಳಿಸುತ್ತಿವೆ ಎಂದು ಎಂದು ಹವಾಮಾನ ಇಲಾಖೆ ತಿಳಿಸಿದೆ.
ಹಿಮಾಚಲ ಪ್ರದೇಶವು ಪ್ರವಾಹ ಮತ್ತು ಭೂಕುಸಿತದಿಂದಾಗಿ ದೇಶದಲ್ಲೇ ಅತಿ ಹೆಚ್ಚು ಹಾನಿಗೊಳಗಾದ ರಾಜ್ಯವಾಗಿದ್ದು, ಮುಂಗಾರು ಮಳೆಯ ವಿನಾಶಕಾರಿ ಪರಿಣಾಮದಿಂದಾಗಿ ₹ 7020.28 ಕೋಟಿ ನಷ್ಟವುಂಟಾಗಿದೆ ಎಂದು ಅಧಿಕಾರಿಗಳು ಭಾನುವಾರ ಹೇಳಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:05 pm, Mon, 14 August 23