ಕೊರೊನಾ ನಿರ್ಮೂಲನೆಗಾಗಿ ಆಂಜನೇಯನಿಗೆ ಮೊರೆ; ನಾಳೆ ನಡೆಯಲಿದೆ ಹನುಮಾನ ಚಾಲೀಸಾ ಪಠಣ, ಪ್ರಮುಖ ಸಾಧು-ಸಂತರು ಭಾಗಿ

|

Updated on: May 17, 2021 | 10:22 PM

ಈ ಬಗ್ಗೆ ಆರ್​ಎಸ್​​ಎಸ್​ನ ಪ್ರಚಾರ ಪ್ರಮುಖ್​ ಮುರಾರ್​ ಜಿ ತ್ರಿಪಾಠಿ ಮಾಹಿತಿ ನೀಡಿದ್ದಾರೆ. ಮಂಗಳವಾರ ಬೆಳಗ್ಗೆ 8.30ರಿಂದ ಹನುಮಾನ ಚಾಲೀಸಾ ಪಠಣ ಪ್ರಾರಂಭವಾಗಲಿದೆ.

ಕೊರೊನಾ ನಿರ್ಮೂಲನೆಗಾಗಿ ಆಂಜನೇಯನಿಗೆ ಮೊರೆ; ನಾಳೆ ನಡೆಯಲಿದೆ ಹನುಮಾನ ಚಾಲೀಸಾ ಪಠಣ, ಪ್ರಮುಖ ಸಾಧು-ಸಂತರು ಭಾಗಿ
ಸ್ವಾಮಿ ಆಂಜನೇಯ
Follow us on

ಪ್ರಯಾಗರಾಜ್​: ದಿನೇದಿನೆ ಹೆಚ್ಚುತ್ತಿರುವ ಕೊರೊನಾ ವೈರಸ್ ಮಣಿಸಲು ಹನುಮಾನ್ ಚಾಲೀಸಾ ಪಠಣ ಮಾಡಲು ಉತ್ತರ ಪ್ರದೇಶದ ಆರ್​ಎಸ್​ಎಸ್​ನ ಸ್ವಯಂಸೇವಕರು, ಸಾಧು-ಸಂತರು ನಿರ್ಧರಿಸಿದ್ದಾರೆ. ಅದರಂತೆ ಮಂಗಳವಾರ (ನಾಳೆ) ಉತ್ತರಪ್ರದೇಶದ ಸುಮಾರು 26 ಜಿಲ್ಲೆಗಳನ್ನೊಳಗೊಂಡ ಕಾಶಿ ಪ್ರಾಂತ್ಯದಲ್ಲಿ ಒಂದು ಲಕ್ಷಕ್ಕೂ ಅಧಿಕ ಹಿಂದು ಕುಟುಂಬಗಳು ಸೇರಿ ಹನುಮಾನ ಚಾಲೀಸಾ ಪಠಿಸಲಿದ್ದಾರೆ.

ಈ ಬಗ್ಗೆ ಆರ್​ಎಸ್​​ಎಸ್​ನ ಪ್ರಚಾರ ಪ್ರಮುಖ್​ ಮುರಾರ್​ ಜಿ ತ್ರಿಪಾಠಿ ಮಾಹಿತಿ ನೀಡಿದ್ದಾರೆ. ಮಂಗಳವಾರ ಬೆಳಗ್ಗೆ 8.30ರಿಂದ ಹನುಮಾನ ಚಾಲೀಸಾ ಪಠಣ ಪ್ರಾರಂಭವಾಗಲಿದೆ. ಹನುಮ ಭಜನೆ ಅಭಿಯಾನದಲ್ಲಿ ಸಾಧು-ಸಂತರು, ಪ್ರಮುಖ ವ್ಯಕ್ತಿಗಳು, ಉದ್ಯಮಿಗಳು, ಸಾಮಾಜಿಕ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದ್ದಾರೆ.

ಆರ್​​ಎಸ್​ಎಸ್​ನ ಕುಟುಂಬ ಪ್ರಭೋದಿನ ಚಟುವಟಿಕೆಯಡಿ ಈ ಹನುಮಾನ ಚಾಲೀಸಾ ಪಠಣಕ್ಕೆ ಕರೆ ನೀಡಲಾಗಿದೆ. ಕೊರೊನಾ ನಿರ್ಮೂಲನೆಗಾಗಿ ಪ್ರಾರ್ಥಿಸಲಾಗುವುದು. ಪ್ರಯಾಗ ಪೀಠಾಧೀಶ್ವರ ಜಗದ್ಗುರು ಸ್ವಾಮಿ ವಸುದೇವಾನಂದ ಸರಸ್ವತಿ ಸ್ವಾಮೀಜಿ, ಅಖಿಲ ಭಾರತೀಯ ಅಖಾರಾ ಪರಿಷದ್​ ಅಧ್ಯಕ್ಷ ನರೇಂದ್ರ ಗಿರಿ ಸೇರಿ ಹಲವು ಪ್ರಮುಖರು ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಹಾಗೇ, ಹನ್ನೊಂದು ಬಾರಿ ಹನುಮಾನ ಚಾಲೀಸಾ ಪಠಣ ನಡೆಯಲಿದ್ದು, ಪ್ರಾರಂಭಕ್ಕೂ ಮೊದಲು ಮತ್ತು ಪಠಣ ಮುಗಿದ ಬಳಿಕ ಐದು ಬಾರಿ ಶ್ರೀರಾಮನ ಭಜನೆ ಮಾಡಲಾಗುವುದು ಎಂದೂ ತಿಳಿಸಿದ್ದಾರೆ.

ಇದನ್ನೂ ಓದಿ: ಗಾಜಾದಲ್ಲಿ ಮುಂದುವರಿದ ಇಸ್ರೇಲ್​ ಏರ್​ಸ್ಟ್ರೈಕ್​; ಇಸ್ಲಾಮಿಕ್​ ಜಿಹಾದ್​ ಉಗ್ರಸಂಘಟನೆಯ ಉನ್ನತ ಕಮಾಂಡರ್​​ನ ಹತ್ಯೆ

Published On - 10:21 pm, Mon, 17 May 21