ಗಾಜಾದಲ್ಲಿ ಮುಂದುವರಿದ ಇಸ್ರೇಲ್​ ಏರ್​ಸ್ಟ್ರೈಕ್​; ಇಸ್ಲಾಮಿಕ್​ ಜಿಹಾದ್​ ಉಗ್ರಸಂಘಟನೆಯ ಉನ್ನತ ಕಮಾಂಡರ್​​ನ ಹತ್ಯೆ

ಗಾಜಾದಲ್ಲಿ ಇಸ್ರೇಲ್ ಸೈನ್ಯದ ದಾಳಿಯ ಚಿತ್ರಣಗಳು ಸ್ಪಷ್ಟವಾಗಿ ಕಾಣುತ್ತಿದೆ. ಇಂದು ಮೂರಂತಸ್ತಿನ ಕಟ್ಟಡವನ್ನು ನೆಲಸಮ ಮಾಡಲಾಗಿದೆ. ಆದರೆ ಯಾವುದೇ ಕಟ್ಟಡದ ಮೇಲೆ ಏರ್​ಸ್ಟ್ರೈಕ್ ಮಾಡುವುದಕ್ಕೂ ಮೊದಲು ಅಲ್ಲಿನ ನಿವಾಸಿಗಳಿಗೆ 10 ನಿಮಿಷ ಮೊದಲೇ ಇಸ್ರೇಲ್ ಸೈನ್ಯ ಮಾಹಿತಿ ನೀಡುತ್ತಿದೆ.

ಗಾಜಾದಲ್ಲಿ ಮುಂದುವರಿದ ಇಸ್ರೇಲ್​ ಏರ್​ಸ್ಟ್ರೈಕ್​; ಇಸ್ಲಾಮಿಕ್​ ಜಿಹಾದ್​ ಉಗ್ರಸಂಘಟನೆಯ ಉನ್ನತ ಕಮಾಂಡರ್​​ನ ಹತ್ಯೆ
ಇಸ್ರೇಲ್​ ಏರ್​ಸ್ಟ್ರೈಕ್​ನಿಂದಾದ ಹಾನಿಯ ಚಿತ್ರಣ

ಇಸ್ರೇಲ್​ ಸೈನ್ಯ ಗಾಜಾದ ಮೇಲಿನ ವೈಮಾನಿಕ ದಾಳಿಯನ್ನು ಮುಂದುವರಿಸಿದೆ. ಇಂದು ಮುಂಜಾನೆ ನಡೆಸಿದ ಏರ್​ಸ್ಟ್ರೈಕ್​​ನಲ್ಲಿ, ಹಮಾಸ್ ಉಗ್ರಸಂಘಟನೆಗೆ ಸೇರಿದ 15 ಕಿಮೀ ಉದ್ದದ ಸುರಂಗ ಮತ್ತು ಸಂಘಟನೆಯ ಕಮಾಂಡರ್​​ಗಳ 9 ಮನೆಯನ್ನು ಧ್ವಂಸ ಮಾಡಿದ್ದಾಗಿ ಹೇಳಿಕೆ ಬಿಡುಗಡೆ ಮಾಡಿದೆ. ಗಾಜಾದ ಹಮಾಸ್​ ಮತ್ತು ಇಸ್ರೇಲ್​ ಸೈನ್ಯದ ನಡುವೆ ಯುದ್ಧ ಸದೃಶ ದಾಳಿ-ಪ್ರತಿದಾಳಿ ಶುರುವಾಗಿ ವಾರವೇ ಕಳೆದಿದೆ. ಹಮಾಸ್​ ಇಸ್ರೇಲ್ ಮೇಲೆ ನಡೆಸಿದ್ದ ರಾಕೆಟ್​ ದಾಳಿಗೆ ಪ್ರತಿಯಾಗಿ, ಇಸ್ರೇಲ್ ಸೈನ್ಯ ಗಾಜಾದಲ್ಲಿ ನಿರಂತರವಾಗಿ ವೈಮಾನಿಕ ದಾಳಿ ನಡೆಸುತ್ತಿದೆ. ಇಷ್ಟುದಿನಗಳಲ್ಲಿ ಇಂದು ಮುಂಜಾನೆ ನಡೆದ ದಾಳಿ ತುಂಬ ಭಯಂಕರವಾಗಿತ್ತು ಎಂದು ಗಾಜಾ ನಿವಾಸಿಗಳು ಹೇಳಿದ್ದಾರೆ.

ಹಾಗೇ ಇಂದಿನ ಏರ್​ಸ್ಟ್ರೈಕ್​​ನಲ್ಲಿ ಗಾಜಾದ ಇಸ್ಲಾಮಿಕ್​ ಜಿಹಾದ್​ ಉಗ್ರಸಂಘಟನೆಯ ಉನ್ನತ ಕಮಾಂಡರ್​ ಒಬ್ಬನನ್ನು ಕೊಲ್ಲಲಾಗಿದೆ ಎಂದೂ ಇಸ್ರೇಲ್​ ಸೈನ್ಯ ತಿಳಿಸಿದೆ. ಈ ಕಮಾಂಡರ್ ಹೆಸರು ಹುಸೇನ್​ ಅಬು ಹರ್ಬೀದ್​ ಎಂದಾಗಿದ್ದು, ಇಸ್ಲಾಮಿಕ್​ ಜಿಹಾದ್​ನ ಉತ್ತರ ವಿಭಾಗದ ಕಮಾಂಡರ್ ಆಗಿದ್ದ. ಇಸ್ರೇಲ್​ ನಾಗರಿಕರ ಮೇಲೆ ನಡೆದ ಹಲವು ಕ್ಷಿಪಣಿ ದಾಳಿಯ ಹಿಂದಿನ ಮಾಸ್ಟರ್​ ಮೈಂಡ್ ಆಗಿದ್ದ. ಸುಮಾರು 15 ವರ್ಷಗಳಿಂದ ಆ ಸಂಘಟನೆಯ ಕಮಾಂಡರ್ ಆಗಿದ್ದ ಎಂದು ಇಸ್ರೇಲಿ ಸೈನ್ಯ ತಿಳಿಸಿದೆ. ಹಾಗೇ, ಇದಕ್ಕೆ ಸಂಬಂಧಪಟ್ಟ ವಿಡಿಯೋ ಫೂಟೇಜ್​ ಕೂಡ ಬಿಡುಗಡೆ ಮಾಡಿದೆ.

ಇನ್ನಳಿದಂತೆ ಗಾಜಾದಲ್ಲಿ ಇಸ್ರೇಲ್ ಸೈನ್ಯದ ದಾಳಿಯ ಚಿತ್ರಣಗಳು ಸ್ಪಷ್ಟವಾಗಿ ಕಾಣುತ್ತಿದೆ. ಇಂದು ಮೂರಂತಸ್ತಿನ ಕಟ್ಟಡವನ್ನು ನೆಲಸಮ ಮಾಡಲಾಗಿದೆ. ಆದರೆ ಯಾವುದೇ ಕಟ್ಟಡದ ಮೇಲೆ ಏರ್​ಸ್ಟ್ರೈಕ್ ಮಾಡುವುದಕ್ಕೂ ಮೊದಲು ಅಲ್ಲಿನ ನಿವಾಸಿಗಳಿಗೆ 10 ನಿಮಿಷ ಮೊದಲೇ ಇಸ್ರೇಲ್ ಸೈನ್ಯ ಮಾಹಿತಿ ನೀಡುತ್ತಿದೆ. ಅಂದರೆ ಅದು ಕೇವಲ ಹಮಾಸ್ ಉಗ್ರರನ್ನು ಮಾತ್ರ ಟಾರ್ಗೆಟ್ ಮಾಡುತ್ತಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ನಿನ್ನೆ, ಅಲ್​ ಜಜೀರಾ ಸೇರಿ ಕೆಲವು ಅಂತಾರಾಷ್ಟ್ರೀಯ ಮಾಧ್ಯಮಗಳು ಇದ್ದ ಕಟ್ಟಡವನ್ನು ಇಸ್ರೇಲ್​ ಸೈನ್ಯ ನೆಲಸಮ ಮಾಡಿತ್ತು.

ಇದನ್ನೂ ಓದಿ: ಕೊರೊನಾ ಸೋಂಕಿನಿಂದ ಪಾರಾಗಲು ಸೀಮೆಎಣ್ಣೆ ಕುಡಿದು ಮೃತಪಟ್ಟ ವ್ಯಕ್ತಿ; ಸತ್ತ ಮೇಲೆ ವರದಿಯೂ ನೆಗೆಟಿವ್ ಬಂತು..

Cyclone Tauktae: ತೌಕ್ತೆ ಅಬ್ಬರಕ್ಕೆ ಮಹಾರಾಷ್ಟ್ರದಲ್ಲಿ 6 ಮಂದಿ ಸಾವು; ಅಹ್ಮದಾಬಾದ್​ನಲ್ಲಿ ವಿಪರೀತ ಮಳೆ, ಪರಿಸ್ಥಿತಿ ಬಗ್ಗೆ ವರದಿ ಪಡೆದ ಪ್ರಧಾನಿ ಮೋದಿ