ಚಂಡೀಗಢ: ಹಿಟ್ ಅಂಡ್ ರನ್ (Hit and Run Case) ಪ್ರಕರಣ ಸಂಬಂಧಸಿದಂತೆ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ. ಚಂಡೀಗಢದಲ್ಲಿ ನಡೆದ ಆಘಾತಕಾರಿ ಹಿಟ್ ಅಂಡ್ ರನ್ ಪ್ರಕರಣ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. 25 ವರ್ಷದ ಯುವತಿಯೊಬ್ಬಳು ತನ್ನ ಮನೆಯ ಬಳಿ ಬೀದಿ ನಾಯಿಗೆ ಆಹಾರ ನೀಡುತ್ತಿದ್ದಾಗ ಕಾರೊಂದು ಬಂದು ಡಿಕ್ಕಿ ಹೊಡೆದಿದೆ, ಕಾರು ನಿಲ್ಲಿಸದೇ ವೇಗವಾಗಿ ಹೋಗಿದ್ದಾನೆ. ಗಾಯಗೊಂಡಿರುವ ಯುವತಿ ತೇಜಶ್ವಿತಾ ಎಂದು ಗುರುತಿಸಲಾಗಿದೆ. ಅವರ ತಲೆಗೆ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಆಕೆಯ ಕುಟುಂಬದವರು ಆಕೆ ಚೆನ್ನಾಗಿದ್ದಾಳೆ. ನಮ್ಮಲ್ಲಿ ಮಾತನಾಡುತ್ತಿದ್ದಾಳೆ ಎಂದು ಹೇಳಿದ್ದಾರೆ.
ಕುಟುಂಬದವರ ಪ್ರಕಾರ, ಶನಿವಾರ ರಾತ್ರಿ ತೇಜಶ್ವಿತಾ ಮತ್ತು ಆಕೆಯ ತಾಯಿ ಮಂಜಿದರ್ ಕೌರ್ ಫುಟ್‌ಪಾತ್‌ನಲ್ಲಿ ಬೀದಿ ನಾಯಿಗಳಿಗೆ ಆಹಾರ ನೀಡುತ್ತಿದ್ದಾಗ ಈ ಘಟನೆ ನಡೆದಿದೆ. ಸಿಸಿಟಿವಿ ದೃಶ್ಯಾವಳಿಯಲ್ಲಿ ತೇಜಶ್ವಿತಾ ನಾಯಿಗೆ ಆಹಾರ ನೀಡುತ್ತಿರುವುದನ್ನು ಕಾಣಬಹುದು. ಮಹೀಂದ್ರ ಥಾರ್ SUV ಕಾರು ರಸ್ತೆಯಲ್ಲಿ ಬದಿಗೆ ಬರುತ್ತಿರುವುದನ್ನು ಈ ವಿಡಿಯೋದಲ್ಲಿ ಕಾಣಬಹುದು. ಎಸ್‌ಯುವಿ ಯು-ಟರ್ನ್ ಕಾರು ಯುವತಿಗೆ ಹೊಡೆದು ಹೋಗಿದೆ, ತೇಜಶ್ವಿತಾ ಅಲ್ಲಿಯೇ ನರಳುವುದು ಕೂಡ ವಿಡಿಯೊದಲ್ಲಿ ರೆಕಾರ್ಡ್ ಆಗಿದೆ.
ತೇಜಶ್ವಿತಾ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡು ತಾಯಿ ಗಾಬರಿಗೊಂಡಿದ್ದಾರೆ. ಯಾರೂ ಸಹಾಯಕ್ಕೆ ಬಂದಿಲ್ಲ ಎಂದು ತೇಜಶ್ವಿತಾ ತಾಯಿ ಹೇಳಿದ್ದಾರೆ. ನಂತರ ಮನೆಗೆ ಮತ್ತು ಪೊಲೀಸ್ರಿಗೆ ಕರೆ ಮಾಡಿದ್ದಾರೆ. ತೇಜಶ್ವಿತಾ ಅವರ ತಂದೆ ಓಜಸ್ವಿ ಕೌಶಲ್ ಅವರು ನಾಗರಿಕ ಸೇವಾ ಪ್ರವೇಶ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಾರೆ ಎಂದು ಹೇಳಿದರು. ಬೀದಿನಾಯಿಗಳಿಗೆ ಆಹಾರ ನೀಡಲು ಪ್ರತಿನಿತ್ಯ ತನ್ನ ತಾಯಿಯೊಂದಿಗೆ ಹೋಗುತ್ತಿದ್ದಳು ಎಂದು ಅವರು ಹೇಳಿದರು.
ಇದನ್ನು ಓದಿ:ಅಬ್ಬಬ್ಬಾ! ಮೈ ಝುಂ ಎನ್ನುತ್ತೆ ನೆಲಮಂಗಲದಲ್ಲಿ ನಡೆದ ಈ ಭೀಕರ ಅಪಘಾತದ ದೃಶ್ಯಾವಳಿ
ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ವಾಹನ ಹಾಗೂ ಚಾಲಕನಿಗಾಗಿ ಶೋಧ ನಡೆಸುತ್ತಿದ್ದಾರೆ. ಈ ಹಿಂದೆಯು ಇಂತಹ ಘಟನೆಗಳು ನಡೆದಿದೆ. ಇದೀಗ ಇಂತಹ ಘಟನೆಗಳು ಹೆಚ್ಚಾಗಿದೆ. ಇವುಗಳಲ್ಲಿ ಪ್ರಮುಖವಾದುದೆಂದರೆ ದೆಹಲಿಯ ಕಾರ್ ಭಯಾನಕ ಪ್ರಕರಣ, ಇದರಲ್ಲಿ 20 ವರ್ಷದ ಯುವತಿಯೊಬ್ಬಳನ್ನು ಕಾರಿನ ಕೆಳಗೆ ಕಾಲು ಸಿಲುಕಿಕೊಂಡು ರಸ್ತೆಯಲ್ಲಿ ಎಳೆದುಕೊಂಡು ಹೋಗಿ ಸಾವನ್ನಪ್ಪಿದಳು.
This girl was crushed by a fast moving SUV in Chandigarh #Chandigargh pic.twitter.com/2mgpjCVnRX
— Vidit Sharma ?? (@TheViditsharma) January 16, 2023
ಮತ್ತೊಂದು ದುರಂತ ಘಟನೆಯಲ್ಲಿ, ನಿನ್ನೆ ಗುರುಗ್ರಾಮ್-ಫರಿದಾಬಾದ್ ರಸ್ತೆಯಲ್ಲಿ ವೇಗವಾಗಿ ಬಂದ ಪೊಲೀಸ್ ವ್ಯಾನ್ ಕಾರಿಗೆ ಡಿಕ್ಕಿ ಹೊಡೆದಿದೆ. ಆರು ವರ್ಷದ ಬಾಲಕಿ ಸಾವನ್ನಪ್ಪಿದ್ದು, ಕುಟುಂಬದ ಐವರು ಗಾಯಗೊಂಡಿದ್ದಾರೆ. ಈ ಘಟನೆಯಲ್ಲಿ ಆಘಾತಕಾರಿ ಸಂಗತಿಯೆಂದರೆ, ಪೊಲೀಸರು ಮಗುವನ್ನು ಆಸ್ಪತ್ರೆಗೆ ಸಾಗಿಸುವ ಬದಲಿಗೆ ಸ್ಥಳದಿಂದ ಪರಾರಿಯಾಗಿದ್ದಾರೆ.
ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:00 pm, Mon, 16 January 23