ಟಿಎಂಸಿ ಕಾರ್ಯಕರ್ತರು ನಿಮಗೆ ಹೊಡೆದರೆ ಮರಕ್ಕೆ ಕಟ್ಟಿಹಾಕಿ ಇನ್ನೂ ಬಲವಾಗಿ ತಿರುಗಿ ಹೊಡೆಯಿರಿ: ಬಿಜೆಪಿ ಸಂಸದೆ ಲಾಕೆಟ್ ಚಟರ್ಜಿ

ಟಿಎಂಸಿ ಸರ್ಕಾರ ನಡೆಸುತ್ತಿದೆ. ಬಡವರ ಅನುಕೂಲಕ್ಕಾಗಿ ಕೆಲಸ ಮಾಡುತ್ತಿಲ್ಲ. ಅವರು ತಮ್ಮ ಪ್ರದೇಶದಲ್ಲಿ ಕಾರ್ಯನಿರ್ವಹಿಸದಿದ್ದಕ್ಕಾಗಿ ನಿಮಗೆ ಕಪಾಳಮೋಕ್ಷ ಮಾಡಿದರೆ ಇನ್ನೂ ಬಿಗಿಯಾಗಿ ಅವರಿಗೆ ಬಾರಿಸಿ ಎಂದ ಲಾಕೆಟ್ ಚಟರ್ಜಿ.

ಟಿಎಂಸಿ ಕಾರ್ಯಕರ್ತರು ನಿಮಗೆ ಹೊಡೆದರೆ ಮರಕ್ಕೆ ಕಟ್ಟಿಹಾಕಿ ಇನ್ನೂ ಬಲವಾಗಿ ತಿರುಗಿ ಹೊಡೆಯಿರಿ: ಬಿಜೆಪಿ ಸಂಸದೆ ಲಾಕೆಟ್ ಚಟರ್ಜಿ
ಲಾಕೆಟ್ ಚಟರ್ಜಿImage Credit source: twitter.com/me_locket
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Jan 16, 2023 | 1:57 PM

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ (West Bengal) ಈ ವರ್ಷ ನಡೆಯಲಿರುವ ಪಂಚಾಯತಿ ಚುನಾವಣೆಗೆ ಮುನ್ನ ಆರಂಭಗೊಂಡಿರುವ ಆಡಳಿತಾರೂಢ ಪಕ್ಷದ ನಿರಂತರ ಪ್ರಚಾರ ಕಾರ್ಯಕ್ರಮದ ವೇಳೆ ತೃಣಮೂಲ ಕಾರ್ಯಕರ್ತರು (TMC) ಯಾವುದೇ ನೊಂದ ವ್ಯಕ್ತಿ ಮೇಲೆ ಹಲ್ಲೆ ನಡೆಸಿದರೆ ಪ್ರತೀಕಾರ ತೀರಿಸಿಕೊಳ್ಳುವಂತೆ ಬಿಜೆಪಿ ಸಂಸದೆ ಲಾಕೆಟ್ ಚಟರ್ಜಿ(Locket Chatterjee) ಅವರು ಭಾನುವಾರ ಜನರಿಗೆ ಕರೆ ನೀಡಿ ವಿವಾದ ಸೃಷ್ಟಿಸಿದ್ದಾರೆ. ಉತ್ತರ 24 ಪರಗಣ ಜಿಲ್ಲೆಯ ದತ್ತಪುಕುರ್ ಪ್ರದೇಶದಲ್ಲಿ ಶನಿವಾರ ನಡೆದ ತೃಣಮೂಲ ಕಾಂಗ್ರೆಸ್‌ನ ‘ದೀದಿರ್ ಸುರಕ್ಷಾ ಕವಚ’ ಕಾರ್ಯಕ್ರಮದಲ್ಲಿ ಬಿಜೆಪಿ ನಾಯಕರೊಬ್ಬರ ಮೇಲೆ ಹಲ್ಲೆ ನಡೆದ ಸಂದರ್ಭದಲ್ಲಿ ಹೂಗ್ಲಿ ಸಂಸದರು ಈ ಹೇಳಿಕೆ ನೀಡಿದ್ದಾರೆ.”ಯಾವುದೇ ಟಿಎಂಸಿ ಕಾರ್ಯಕರ್ತರು ನಿಮಗೆ ಕಪಾಳಮೋಕ್ಷ ಮಾಡಿದರೆ, ಅವರು ನಿಮ್ಮ ಸಂಕಟಗಳನ್ನು ಕೇಳಲು ಬಯಸದಿದ್ದರೆ, ಅವರನ್ನು ಮರಕ್ಕೆ ಕಟ್ಟಿಹಾಕಿ ಮತ್ತು ನಾಲ್ಕರಿಂದ ಐದು ಬಾರಿ ಕಪಾಳಮೋಕ್ಷ ಮಾಡಿ ಎಂದು ಹೂಗ್ಲಿ ಜಿಲ್ಲೆಯ ಬಲಗಢ ಪ್ರದೇಶದಲ್ಲಿ ನಡೆದ ಬಿಜೆಪಿ ಸಭೆಯಲ್ಲಿ ಶ್ರೀಮತಿ ಚಟರ್ಜಿ ಹೇಳಿದ್ದಾರೆ.

ಟಿಎಂಸಿ ಸರ್ಕಾರ ನಡೆಸುತ್ತಿದೆ. ಬಡವರ ಅನುಕೂಲಕ್ಕಾಗಿ ಕೆಲಸ ಮಾಡುತ್ತಿಲ್ಲ. ಅವರು ತಮ್ಮ ಪ್ರದೇಶದಲ್ಲಿ ಕಾರ್ಯನಿರ್ವಹಿಸದಿದ್ದಕ್ಕಾಗಿ ನಿಮಗೆ ಕಪಾಳಮೋಕ್ಷ ಮಾಡಿದರೆ ಇನ್ನೂ ಬಿಗಿಯಾಗಿ ಅವರಿಗೆ ಬಾರಿಸಿ ಎಂದು ಅವರು ಹೇಳಿದರು.

ಶ್ರೀಮತಿ ಚಟರ್ಜಿಯವರ ಕಾಮೆಂಟ್‌ಗೆ ಪ್ರತಿಕ್ರಿಯಿಸಿದ ತೃಣಮೂಲ ರಾಜ್ಯಸಭಾ ಸಂಸದ ಶಂತನು ಸೇನ್, “ಲಾಕೆಟ್ ಚಟರ್ಜಿ ಅವರು ಇಂತಹ ಅಭಿರುಚಿಯಿಲ್ಲದ ಕಾಮೆಂಟ್‌ಗಳನ್ನು ಮಾಡುವ ಸಾಧ್ಯತೆಯಿದೆ. ಇದು ನಮ್ಮ ನಾಯಕಿ ಮಮತಾ ಬ್ಯಾನರ್ಜಿ ಅವರು ಕೈಗೊಂಡಿರುವ ಅಭಿವೃದ್ಧಿ ಉಪಕ್ರಮಗಳಿಗೆ ಬಿಜೆಪಿ ಹೆದರುತ್ತಿದೆ ಎಂದು ತೋರಿಸುತ್ತದೆ ಎಂದಿದ್ದಾರೆ.

ಇದನ್ನೂ ಓದಿ: Santro Ravi: ಸ್ಯಾಂಟ್ರೋ ರವಿಗೆ ಆ ಹೆಸರು ಬಂದಿದ್ದು ಹೇಗೆ? ಇಲ್ಲಿದೆ ಮಂಡ್ಯ ಡಿವೈಎಸ್‌ಪಿ ಪುತ್ರನ ಸಂಪೂರ್ಣ ಜಾತಕ

ಶನಿವಾರ ಬಿಜೆಪಿ ದತ್ತಪುಕೂರ್ ಮಂಡಲದ ಅಧ್ಯಕ್ಷ ಸಾಗರ್ ಬಿಸ್ವಾಸ್ ಅವರು ‘ದೀದಿರ್ ಸುರಕ್ಷಾ ಕವಚ’ ಕಾರ್ಯಕ್ರಮದ ವೇಳೆ ಈ ಪ್ರದೇಶದ ರಸ್ತೆಗಳ ದುರವಸ್ಥೆಯ ಬಗ್ಗೆ ದೂರು ನೀಡಲು ಪಂಚಾಯತ್ ಮುಖಂಡರನ್ನು ಸಂಪರ್ಕಿಸಿದಾಗ ಟಿಎಂಸಿ ಕಾರ್ಯಕರ್ತರೊಬ್ಬರು ಕಪಾಳಮೋಕ್ಷ ಮಾಡಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:54 pm, Mon, 16 January 23