ಪಟ್ಟ ಬಿಟ್ಟುಕೊಟ್ಟ ಬಿಎಸ್ ಯಡಿಯೂರಪ್ಪನವರನ್ನು ಶ್ಲಾಘಿಸಿದ ಅಮಿತ್ ಶಾ; ಬೊಮ್ಮಾಯಿ ಬಗ್ಗೆ ಹೇಳಿದ್ದೇನು?
Amit Shah: ನಿರ್ಗಮಿತ ಮುಖ್ಯಮಂತ್ರಿ ಯಡಿಯೂರಪ್ಪನವರ ಬಗ್ಗೆ ಟ್ವೀಟ್ ಮಾಡಿದ ಅಮಿತ್ ಶಾ, ಬಿಎಸ್. ಯಡಿಯೂರಪ್ಪನವರು ಕರ್ನಾಟಕ ಬಿಜೆಪಿ ಮತ್ತು ಜನರಿಗೆ ಭಕ್ತಿಪೂರ್ವಕವಾಗಿಯೇ ಸೇವೆ ಸಲ್ಲಿಸಿದ್ದಾರೆ ಎಂದು ಹೇಳಿದ್ದಾರೆ.
ಕರ್ನಾಟಕದ ನೂತನ ಮುಖ್ಯಮಂತ್ರಿ (Chief Minister Of Karnataka) ಬಸವರಾಜ ಬೊಮ್ಮಾಯಿ(Basavaraj Bommai)ಗೆ ಗೃಹ ಸಚಿವ ಅಮಿತ್ ಶಾ ಶುಭಕೋರಿದ್ದಾರೆ. ಟ್ವೀಟ್ ಮಾಡಿರುವ ಅವರು, ಇಂದು ಕರ್ನಾಟಕದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಿರುವ ಬಸವರಾಜ ಬೊಮ್ಮಾಯಿಯವರಿಗೆ ಅಭಿನಂದನೆಗಳು. ರಾಜ್ಯದ ಬಡಜನರು ಮತ್ತು ರೈತರ ಕಲ್ಯಾಣಕ್ಕೆ ಆದ್ಯತೆಯೆಂಬ ಬಿಜೆಪಿ ಸಂಕಲ್ಪವನ್ನು, ಬೊಮ್ಮಾಯಿಯವರು ತಮ್ಮ ಬುದ್ಧಿವಂತಿಕೆ, ಅನುಭವದೊಂದಿಗೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಮಾರ್ಗದರ್ಶನದಲ್ಲಿ ಮುಂದುವರಿಸಿಕೊಂಡು ಹೋಗುತ್ತಾರೆ ಎಂಬ ನಂಬಿಕೆಯಿದೆ ಎಂದಿದ್ದಾರೆ.
Congratulations and best wishes to Shri @BSBommai Ji on taking oath as the Chief Minister of Karnataka. I am sure under the guidance of PM @narendramodi Ji he will further boost BJP’s resolve to serve the poor and farmers of the state with his wisdom and experience.
— Amit Shah (@AmitShah) July 28, 2021
ಹಾಗೇ, ನಿರ್ಗಮಿತ ಮುಖ್ಯಮಂತ್ರಿ ಯಡಿಯೂರಪ್ಪನವರ ಬಗ್ಗೆ ಟ್ವೀಟ್ ಮಾಡಿದ ಅಮಿತ್ ಶಾ, ಬಿಎಸ್.ಯಡಿಯೂರಪ್ಪನವರು ಕರ್ನಾಟಕ ಬಿಜೆಪಿ ಮತ್ತು ಜನರಿಗೆ ಭಕ್ತಿಪೂರ್ವಕವಾಗಿಯೇ ಸೇವೆ ಸಲ್ಲಿಸಿದ್ದಾರೆ. ಆ ರಾಜ್ಯದಲ್ಲಿ ಪಕ್ಷವನ್ನು ಬೇರುಮಟ್ಟದಲ್ಲಿ ಬಲಪಡಿಸುವಲ್ಲಿ ಬಿಎಸ್ವೈ ಅವರ ಕಠಿಣ ಶ್ರಮ ಮತ್ತು ಕೊಡುಗೆ ಅಪಾರ. ಇದು ನಿಜಕ್ಕೂ ಎಲ್ಲರಿಗೂ ಸ್ಫೂರ್ತಿಯೂ ಹೌದು. ಪಕ್ಷ ಮತ್ತು ರಾಜ್ಯಸರ್ಕಾರಕ್ಕೆ ಅವರು ಸದಾ ಮಾರ್ಗದರ್ಶನ ನೀಡುತ್ತಾರೆಂದು ನಾನು ನಂಬಿದ್ದೇನೆ ಎಂದು ಹೇಳಿದ್ದಾರೆ.
Shri @BSYBJP Ji has served the party and people of Karnataka with utmost devotion. His contribution and hard work towards strengthening the BJP at the grassroots level in Karnataka is truly inspiring. I am sure he will continue to guide the party and government.
— Amit Shah (@AmitShah) July 28, 2021
ಇಂದು ಪ್ರಧಾನಿ ನರೇಂದ್ರ ಮೋದಿ ಸೇರಿ ಕೇಂದ್ರದ ಹಲವು ನಾಯಕರು ಯಡಿಯೂರಪ್ಪನವರನ್ನು ಶ್ಲಾಘಿಸಿದ್ದು, ನೂತನ ಸಿಎಂ ಬಸವರಾಜ ಬೊಮ್ಮಾಯಿಯವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಟ್ವೀಟ್ ಮೂಲಕ ತಮ್ಮನ್ನು ಹೊಗಳಿದ ಪ್ರಧಾನಿ ಮೋದಿ ಮತ್ತು ಅಮಿತ್ ಶಾರಿಗೆ ಯಡಿಯೂರಪ್ಪ ಟ್ವೀಟ್ ಮೂಲಕವೇ ಕೃತಜ್ಞತೆ ಸಲ್ಲಿಸಿದ್ದಾರೆ.
Thank you for your kind words, Prime Minister @narendramodi Ji. https://t.co/2LQ1Q0u0sq
— B.S. Yediyurappa (@BSYBJP) July 28, 2021
Thank you Shri @AmitShah Ji. https://t.co/KVKwO11lhc
— B.S. Yediyurappa (@BSYBJP) July 28, 2021
ಇದನ್ನೂ ಓದಿ: ಕೇರಳದ ವರ್ಕ್ ಫ್ರಮ್ ಹೋಟೆಲ್ ಪ್ಯಾಕೇಜ್‌ಗಳ ಬಗ್ಗೆ ನೀವೂ ತಿಳಿದುಕೊಳ್ಳಿ