ಹಾಂಗ್‌ಕಾಂಗ್‌ ಮಾದರಿ v/s ಚೀನಾದ ಲಾಕ್‌ಡೌನ್! ಭಾರತಕ್ಕೆ ಯಾವುದು ಮಾದರಿ?

ಹಾಂಗ್‌ಕಾಂಗ್‌ ಮಾದರಿ v/s ಚೀನಾದ ಲಾಕ್‌ಡೌನ್! ಭಾರತಕ್ಕೆ ಯಾವುದು ಮಾದರಿ?

ಬೆಂಗಳೂರು: ಕೊರೊನಾ ಸೋಂಕು ತಡೆಗಟ್ಟಲು ದೇಶಾದ್ಯಂತ ಲಾಕ್​ಡೌನ್ ಜಾರಿಗೊಳಿಸಲಾಗಿದೆ. ಇನ್ನೇನು ಮೂರೇ ದಿನದಲ್ಲಿ ಅಂದ್ರೆ ಮೇ 3ಕ್ಕೆ 2ನೇ ಹಂತದ ಲಾಕ್​ಡೌನ್ ಅಂತ್ಯಗೊಳ್ಳುತ್ತೆ. ಆದ್ರೆ ದೇಶದಲ್ಲಿ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಇಂತಹ ಸಂದಿಗ್ಧ ಸಂದರ್ಭದಲ್ಲಿ ಕೊರೊನಾ ಕ್ರಿಮಿಯನ್ನು ಕಟ್ಟಿಹಾಕಿ ಚೀನಾ ಮಾದರಿ ಲಾಕ್​ಡೌನ್ ಮಾಡುವುದಾ? ಅಥವಾ ಹಾಂಗ್‌ಕಾಂಗ್‌ ಮಾದರಿ ಅನುಸರಿಸುವುದಾ? ಎಂದು ತಜ್ಞರ ವಲಯದಲ್ಲಿ ಚರ್ಚೆಗಳು ನಡೆಯುತ್ತಿವೆ

ಭಾರತಕ್ಕೆ ಯಾವುದು ಮಾದರಿ? ಇಂಗ್ಲೆಂಡ್ ಪತ್ರಿಕೆಯ ಮೂಲಕ ಜಗತ್ತಿಗೆ ಹಾಂಗ್‌ಕಾಂಗ್‌ ಮಾದರಿ ಪರಿಚಯವಾಯಿತು. ಸರ್ಕಾರದ ಆದೇಶಕ್ಕೆ ಅಲ್ಲಿನ ಸಾರ್ವಜನಿಕರೇ ಶಿಸ್ತುಬದ್ಧವಾಗಿ ಸ್ಪಂದಿಸಿದ್ರು. ಸ್ವಯಂಪ್ರೇರಣೆಯಿಂದ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡಿದ್ರು. ಸಾರ್ವಜನಿಕರ ಬೆಂಬಲವೇ ಮಾದರಿ ಯಶಸ್ವಿಯಾಗಲು ಪ್ರಮುಖ ಕಾರಣ. ಹಾಂಗ್‌ಕಾಂಗ್‌ನ ಶೇ. 99 ಜನ ಮಾಸ್ಕ್ ಧರಿಸಿ ಕೆಲಸ ಮಾಡಿದ್ರು. ಶೇ. 88 ಮಂದಿ ಸಾಮಾಜಿಕ ಅಂತರದ ನಿಯಮ ಪಾಲಿಸಿದ್ರು. ಹೀಗಾಗಿ ಕೊರೊನಾ ನಿಯಂತ್ರಣ ಹಾಂಕ್ ಕಾಂಗ್ ನಲ್ಲಿ ಯಶಸ್ವಿಯಾಯ್ತು.

ಪ್ರಸ್ತುತ ಹಾಂಗ್‌ಕಾಂಗ್‌ ಮಾದರಿ ಹೆಚ್ಚು ಚರ್ಚೆಗೆ ಗ್ರಾಸವಾಗಿದೆ. ಭಾರತ ಮಾತ್ರವಲ್ಲದೆ, ಅಮೇರಿಕಾ, ಯುರೋಪ್‌ ರಾಷ್ಟ್ರಗಳು ಹಾಂಕ್ ಕಾಂಗ್ ಮಾದರಿ ಅನುಸರಿಸಲು ಚಿಂತನೆ ನಡೆಸಿವೆ. ಭಾರತ ಲಾಕ್‌ಡೌನ್‌ ಜಾರಿಗೊಳಿಸುವ ಮೂಲಕ ಚೀನಾದ ನಡೆ ಅನುಸರಿಸಿತ್ತು. ಹಾಂಗ್‌ಕಾಂಗ್‌ ಮಾತ್ರ ಲಾಕ್‌ಡೌನ್‌ ಜಾರಿ ಮಾಡಲಿಲ್ಲ. ಆದರೂ ಪರಿಣಾಮಕಾರಿಯಾಗಿ ಕೊರೊನಾ ಕಟ್ಟಿಹಾಕಲಾಯಿತು. ಹಾಂಗ್ ಕಾಂಗ್ ನಲ್ಲಿ 1038 ಸೋಂಕಿತರಿದ್ದು, 4 ಸಾವನ್ನಪ್ಪಿದ್ದಾರೆ. ಆದರೆ ಭಾರತದಲ್ಲಿ ಲಾಕ್‌ಡೌನ್‌ ಜಾರಿ ಮಾಡಿದ್ರೂ ಸೊಂಕಿತರ ಸಂಖ್ಯೆ 30 ಸಾವಿರ ದಾಟಿದೆ. ಸಾವಿನ ಸಂಖ್ಯೆ ಸಾವಿರ ದಾಟಿದೆ ಎಂಬುದು ಗಮನಾರ್ಹ.

Published On - 12:06 pm, Thu, 30 April 20

Click on your DTH Provider to Add TV9 Kannada