ಕೊರೊನಾದಿಂದ ಸಾವು? ಅಂತ್ಯಕ್ರಿಯೆ ಮಾಡಲು ವರದಿಗಾಗಿ ಕಾದುಕುಳಿತ ಸಂಬಂಧಿಕರು!

ಕೊರೊನಾದಿಂದ ಸಾವು? ಅಂತ್ಯಕ್ರಿಯೆ ಮಾಡಲು ವರದಿಗಾಗಿ ಕಾದುಕುಳಿತ ಸಂಬಂಧಿಕರು!

ಆಂಧ್ರಪ್ರದೇಶ: ಚಿತ್ತೂರು‌ ಜಿಲ್ಲೆಯ ರಾಮಸಮುದ್ರಂ ಗ್ರಾಮದಲ್ಲಿ ದಾರುಣ ಘಟನೆಯೊಂದು ಜರುಗಿದೆ. ಲಾಕ್‌ಡೌನ್‌ ನಿಂದಾಗಿ ವಾಹನ ಸೌಕರ್ಯಗಳಿಲ್ಲದ‌ ಕಾರಣ ಬೆಂಗಳೂರಿನಿಂದ‌ ಚಿತ್ತೂರವರೆಗೆ ನಡೆದುಕೊಂಡು ಬಂದ ಹರಿಪ್ರಸಾದ ಎಂಬ 28 ವರ್ಷದ ಯುವಕ ಅನಾರೋಗ್ಯಕ್ಕೀಡಾಗಿ, ಸಾವಿಗೀಡಾಗಿದ್ದಾನೆ.

ಈತ ಕೊರೊನಾದಿಂದಾಗಿ ಸಾವನ್ನಪ್ಪಿರಬಹುದೆಂದು ಆತನ ಬಳಿ ಯಾರೂ ಸುಳಿದಿಲ್ಲ. ಇದರಿಂದಾಗಿ 24 ಗಂಟೆಗಳ‌ ಕಾಲ ಚಿತ್ತೂರು ಜಿಲ್ಲೆಯ ರಾಮಸಮುದ್ರಂ ಗ್ರಾಮದ ಹೊರಗಿನ ಜಮೀನಿನಲ್ಲಿ‌ ಯುವಕನ ಶವ ಅನಾಥವಾಗಿತ್ತು. ಇದೇ ಕಾರಣಕ್ಕಾಗಿ ಮೃತನ ಕುಟುಂಬಸ್ಥರು ಸಹ ಶವದ ಬಳಿ ಸುಳಿದಿಲ್ಲ. ಇದರಿಂದಾಗಿ ಅಧಿಕಾರಿಗಳು ಶವದಿಂದ ಸ್ಯಾಂಪಲ್  ಸಂಗ್ರಹಿಸಿದ್ದಾರೆ.

ಅದರ ವರದಿ ನೆಗೆಟಿವ್  ಆಗಿದೆ ಎಂಬುದು ಗೊತ್ತಾಗಿದೆ. ಈ ವರದಿ ಬರುವವರೆಗೂ ಕಂದಾಯ ಸಿಬ್ಬಂದಿ ಶವಕ್ಕೆ ಕಾವಲು ಕಾಯ್ದಿದ್ದಾರೆ. ನೆಗಟಿವ್ ವರದಿ ಬಂದ ನಂತರ ಕುಟುಂಬಸ್ಥರು ಯುವಕನ ಶವ ಪಡೆದು ಅಂತ್ಯಕ್ರಿಯೆ ನಡೆಸಿದ್ದಾರೆ.   ಘಟನೆ ಚಿತ್ತೂರ ಜಿಲ್ಲಾ ಜರುಗಿದೆ.

Click on your DTH Provider to Add TV9 Kannada