ಚೀನಾ ವಿರುದ್ಧ ದೆಹಲಿಯ 3 ಸಾವಿರ ಹೋಟೆಲ್ಸ್​ ತೆಗೆದುಕೊಂಡ ನಿರ್ಧಾರ ಏನು ಗೊತ್ತಾ?

|

Updated on: Jun 25, 2020 | 7:45 PM

ದೆಹಲಿ: ಭಾರತ ಮತ್ತು ಚೀನಾ ನಡುವೆ ಗಡಿಯಲ್ಲಿ ಸಂಘರ್ಷದ ಕಾವು ಇನ್ನೂ ಆರಿಲ್ಲ. ಯಾವಾಗ ಭಾರತದ 20 ಸೈನಿಕರ ಸಾವಿಗೆ ಚೀನಾ ಕಾರಣವಾಯಿತೋ, ಭಾರತದಾದ್ಯಂತ ಚೀನಾ ವಿರುದ್ಧ ಆಕ್ರೋಶ ಭುಗಿಲೆದ್ದಿದೆ. ಭಾರತದ ಸೈನಿಕರು ಗಡಿಯಲ್ಲಿ ಹುತಾತ್ಮರಾಗುತ್ತಿದ್ದಂತೆ ಚೀನಾದ ವಸ್ತುಗಳನ್ನ ಬಹಿಷ್ಕರಿಸಿ ಎನ್ನುವ ಕೂಗು ದೇಶಾದ್ಯಂತ ಎದ್ದಿದೆ. ಈ ಮೂಲಕ ದುರುಳ ಚೀನಾಕ್ಕೆ ತಕ್ಕ ಪಾಠ ಕಲಿಸಿ ಅನ್ನೋ ಕೂಗು ಕೇಳಿಬರುತ್ತಿದೆ. ಈ ಕೂಗಿಗೆ ದೆಹಲಿಯ ಹೋಟೆಲ್‌ ಮತ್ತು ರೆಸ್ಟೋರೆಂಟ್‌ಗಳ ಸಂಘ ಧ್ವನಿಗೂಡಿಸಿದೆ. ಸುಮಾರು 3,000ಕ್ಕೂ ಹೆಚ್ಚು ಹೋಟೆಲ್​‌ […]

ಚೀನಾ ವಿರುದ್ಧ ದೆಹಲಿಯ 3 ಸಾವಿರ ಹೋಟೆಲ್ಸ್​ ತೆಗೆದುಕೊಂಡ ನಿರ್ಧಾರ ಏನು ಗೊತ್ತಾ?
Follow us on

ದೆಹಲಿ: ಭಾರತ ಮತ್ತು ಚೀನಾ ನಡುವೆ ಗಡಿಯಲ್ಲಿ ಸಂಘರ್ಷದ ಕಾವು ಇನ್ನೂ ಆರಿಲ್ಲ. ಯಾವಾಗ ಭಾರತದ 20 ಸೈನಿಕರ ಸಾವಿಗೆ ಚೀನಾ ಕಾರಣವಾಯಿತೋ, ಭಾರತದಾದ್ಯಂತ ಚೀನಾ ವಿರುದ್ಧ ಆಕ್ರೋಶ ಭುಗಿಲೆದ್ದಿದೆ. ಭಾರತದ ಸೈನಿಕರು ಗಡಿಯಲ್ಲಿ ಹುತಾತ್ಮರಾಗುತ್ತಿದ್ದಂತೆ ಚೀನಾದ ವಸ್ತುಗಳನ್ನ ಬಹಿಷ್ಕರಿಸಿ ಎನ್ನುವ ಕೂಗು ದೇಶಾದ್ಯಂತ ಎದ್ದಿದೆ. ಈ ಮೂಲಕ ದುರುಳ ಚೀನಾಕ್ಕೆ ತಕ್ಕ ಪಾಠ ಕಲಿಸಿ ಅನ್ನೋ ಕೂಗು ಕೇಳಿಬರುತ್ತಿದೆ.

ಈ ಕೂಗಿಗೆ ದೆಹಲಿಯ ಹೋಟೆಲ್‌ ಮತ್ತು ರೆಸ್ಟೋರೆಂಟ್‌ಗಳ ಸಂಘ ಧ್ವನಿಗೂಡಿಸಿದೆ. ಸುಮಾರು 3,000ಕ್ಕೂ ಹೆಚ್ಚು ಹೋಟೆಲ್​‌ ಮತ್ತು ರೆಸ್ಟೋರೆಂಟ್‌ಗಳನ್ನ ಹೊಂದಿರುವ ಈ ಸಂಘ, ದೆಹಲಿಯಲ್ಲಿನ ತನ್ನ ಯಾವುದೇ ಹೋಟೆಲ್​‌ಗಳಲ್ಲಿ ಚೀನಿಯರಿಗೆ ಮತ್ತು ಚೀನಾದೊಡನೆ ನಂಟು ಹೊಂದಿದವರಿಗೆ ರೂಂ ನೀಡದಿರಲು ನಿರ್ಧರಿಸಿದೆ. ಅಷ್ಟೇ ಅಲ್ಲ, ರೆಸ್ಟೋರೆಂಟ್‌ಗಳಲ್ಲಿ ಅತಿಥಿ ಸತ್ಕಾರಕ್ಕೂ ನೋ ಎಂದಿದೆ. ಇದರ ಜೊತೆಗೆ ತಮ್ಮ ಹೋಟೆಲ್‌ ಮತ್ತು ರೆಸ್ಟೋರೆಂಟ್‌ಗಳಲ್ಲಿ ಯಾವುದೇ ಚೀನಿ ನಿರ್ಮಿತ ವಸ್ತುಗಳನ್ನ ಬಳಸದಿರಲು ತೀರ್ಮಾನಿದೆ.

ಇಂಥ ಕ್ರಮಗಳ ಮೂಲಕ ದೇಶದ ಯೋಧರ ಸಾವಿಗೆ ಕಾರಣರಾದವರ ವಿರುದ್ಧದ ಹೋರಾಟಕ್ಕೆ ಹೋಟೆಲ್​ಗಳ ಸಂಘ ಕೈ ಜೋಡಿಸಿದೆ. ಇದು ಕೇವಲ ದೆಹಲಿಯಲ್ಲಿ ಮಾತ್ರಾವಾ ಅಥವಾ ಈ ಟ್ರೆಂಡ್‌ ದೇಶದ ಇತರೆಡೆಯೂ ಮುಂದುವರಿಯುತ್ತಾ ಅನ್ನೋದನ್ನ ಕಾದು ನೋಡಬೇಕಿದೆ.

Published On - 7:28 pm, Thu, 25 June 20