ಕೇರಳದಲ್ಲಂತೂ ಮಳೆ, ಪ್ರವಾಹದಿಂದಾಗಿ ಪರಿಸ್ಥಿತಿ ಹದಗೆಟ್ಟಿದೆ. ಅಲ್ಲಿನ ಬಹುತೇಕ ಜಿಲ್ಲೆಗಳ ಜನರು ಜೀವ ಕೈಯಲ್ಲಿ ಹಿಡಿದು ಕಾಲಕಳೆಯುವಂತಾಗಿದೆ. ಪ್ರವಾಹ ಮನೆಗಳಿಗೆ ನುಗ್ಗುತ್ತಿದೆ..ಈ ಮಧ್ಯೆ ಮನೆಯೊಂದು ರಭಸವಾದ ನೀರಿನಲ್ಲಿ ಕೊಚ್ಚಿಕೊಂಡು ಹೋದ ಭಯಾನಕ ವಿಡಿಯೋ ವೈರಲ್ ಆಗಿದೆ. ಕೊಟ್ಟಾಯಂನ ಮುಂಡಕಾಯಂ ಎಂಬಲ್ಲಿ ಘಟನೆ ನಡೆದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ನೋಡಿದವರು ನಿಜಕ್ಕೂ ತಮಗೆ ಭಯವಾಗುತ್ತಿದೆ ಎಂದಿದ್ದಾರೆ.
ಭಾರಿಮಳೆಯಿಂದ ಕೆಂಪುಬಣ್ಣಕ್ಕೆ ತಿರುಗಿ, ರಭಸವಾಗಿ ಹರಿಯುತ್ತಿರುವ ನದಿಯೊಂದು ಒಂದು ಮನೆಯನ್ನು ಕೊಚ್ಚಿಕೊಂಡು ಹೋಗಿರುವ ವಿಡಿಯೋ ಇದು. ಅಲ್ಲೆಲ್ಲ ಜನರು ನೋಡುತ್ತ ನಿಂತಿದ್ದಾರೆ. ಅವರ ಕಣ್ಣೆದುರಲ್ಲೇ ಮನೆ ನದಿಗೆ ಉರುಳಿ ಬಿದ್ದು, ಕೊಚ್ಚಿಕೊಂಡು ಹೋಗುತ್ತದೆ. ಅದರ ಗೋಡೆಗಳು ಕುಸಿಯುವುದಿಲ್ಲ. ಬದಲಿಗೆ ಇಡೀ ಮನೆಯೇ ಬುಡಸಮೇತ ಬೀಳುವ ದೃಶ್ಯ ಎಂಥವರಿಗಾದರೂ ಹೆದರಿಕೆ ಹುಟ್ಟಿಸುವಂತಿದೆ.
#WATCH | Kerala: A house got washed away by strong water currents of a river in Kottayam’s Mundakayam yesterday following heavy rainfall. pic.twitter.com/YYBFd9HQSp
— ANI (@ANI) October 18, 2021
ಕೇರಳದಲ್ಲಿ ಐದಾರು ದಿನಗಳಿಂದಲೂ ಮಳೆ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಶನಿವಾರದಿಂದ ಇಲ್ಲಿಯವರೆಗೆ 24 ಜನರು ಮೃತಪಟ್ಟಿದ್ದಾರೆ. 11 ಜಿಲ್ಲೆಗಳಲ್ಲಿ ಹಳದಿ ಅಲರ್ಟ್ ಘೋಷಣೆಯಾಗಿದೆ. ಅದರಲ್ಲಿ 13 ಮೃತದೇಹಗಳು ಪತ್ತೆಯಾಗಿದ್ದು ಕೊಟ್ಟಾಯಂ ಜಿಲ್ಲೆಯಲ್ಲಿ. ಕೊಟ್ಟಾಯಂ ಮತ್ತು ಇಡುಕ್ಕಿಯಲ್ಲಿ ಭಾರಿ ಪ್ರಮಾಣದ ಭೂಕುಸಿತ ಸಂಭವಿಸಿದೆ. ಇನ್ನು ತಿರುವನಂತಪುರಂನಲ್ಲೂ ಒಂದು ಮನೆ ಕುಸಿದುಬಿದ್ದಿದೆ. ಆ ಮನೆಯಲ್ಲಿ ಆರು ಮಂದಿ ಇದ್ದು, ಎಲ್ಲರೂ ಅವಶೇಷಗಳಡಿ ಸಿಲುಕಿದ್ದರು. ಅದೃಷ್ಟವಶಾತ್ ಎಲ್ಲರನ್ನೂ ಪ್ರಾಣಾಪಾಯದಿಂದ ಪಾರುಮಾಡಲಾಗಿದೆ. ಈ ಮನೆಯಲ್ಲಿ 80 ವರ್ಷದ ಮಹಿಳೆ ಲೀಲಾ ಎಂಬುವರು ಅಡುಗೆ ಮನೆ ಸಮೀಪ ಮಲಗಿದ್ದರು. ಮನೆ ಕುಸಿಯುತ್ತಿರುವುದು ಮೊದಲು ಅವರಿಗೇ ಗೊತ್ತಾಗಿದ್ದು. ಇವರ ಕೂಗಾಟ ಕೇಳಿ ಅಕ್ಕಪಕ್ಕದ ಮನೆಯವರೆಲ್ಲ ಬಂದು ಇವರನ್ನೆಲ್ಲ ಕಾಪಾಡಿದ್ದಾರೆ.
ಇದನ್ನೂ ಓದಿ: ಸೂರತ್ನ ಪ್ಯಾಕೇಜಿಂಗ್ ಪ್ಯಾಕ್ಟರಿಯಲ್ಲಿ ಬೆಂಕಿ ಅವಘಡ; ಇಬ್ಬರು ಸಾವು, 125 ಮಂದಿಗೆ ಗಾಯ
Sri Reddy: ‘ಆತ ಸಲಿಂಗಕಾಮಿ, ಅಂಥ ವ್ಯಕ್ತಿ ಜತೆ ಸಮಂತಾ ಸಂಬಂಧ ಬೆಳೆಸಲ್ಲ’; ನಟಿ ಶ್ರೀರೆಡ್ಡಿ ಶಾಕಿಂಗ್ ಹೇಳಿಕೆ