ದೆಹಲಿ: ಕಾನೂನು ಜಾರಿ ಸಂಸ್ಥೆಗಳು ಯಾವುದೇ ಸ್ಥಳದ ಮೇಲೆ ದಾಳಿ ನಡೆಸಿದಾಗ ಅವರು ಗುಪ್ತಚರ ದಳದ ಮಾಹಿತಿ ಮೇರೆಗೆ ಮಾತ್ರ ಹೋಗುತ್ತಾರೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಶುಕ್ರವಾರ ಹೇಳಿದ್ದಾರೆ. ತಪ್ಪು ವ್ಯಕ್ತಿಯ ಮೇಲೆ ದಾಳಿ ಮಾಡಲಾಗಿದೆ ಎಂದು ಹೇಳುವುದು ಏಜೆನ್ಸಿಯ ವೃತ್ತಿಪರತೆಯ ಮೇಲೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. “ಇದು ಬಿಜೆಪಿಯ (BJP) ಹಣ ಎಂದು ಉತ್ತರ ಪ್ರದೇಶದ (Uttar pradesh) ಮಾಜಿ ಮುಖ್ಯಮಂತ್ರಿಗೆ ಹೇಗೆ ಗೊತ್ತು? ಅವರು ಪಾಲುದಾರರೇ? ಅವರಿಗೆ ಭಯವಾಗುತ್ತಿದೆಯೇ ” ಎಂದು ಜಿಎಸ್‌ಟಿ ಕೌನ್ಸಿಲ್ ಸಭೆಯ ಪತ್ರಿಕಾಗೋಷ್ಠಿಯಲ್ಲಿ ನಿರ್ಮಲಾ ಸೀತಾರಾಮನ್, ಅಖಿಲೇಶ್ ಯಾದವ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸುಮಾರು ಒಂದು ವಾರದಿಂದ ಪೀಯೂಷ್ ಜೈನ್ ಅವರಿಗೆ ಸೇರಿದ ಸ್ಥಳದಲ್ಲಿ ನಡೆದ ದಾಳಿಗಳು ಮತ್ತು ಶುಕ್ರವಾರ ಪುಷ್ಪರಾಜ್ ಜೈನ್ ಮೇಲೆ ನಡೆದ ಎರಡೂ ದಾಳಿಗಳು ನಿರ್ದಿಷ್ಟ ಮಾಹಿತಿಗಳನ್ನು ಆಧರಿಸಿವೆ ಎಂದು ಹೇಳಿದ ಹಣಕಾಸು ಸಚಿವರು, ಅವರು ಬರಿಗೈಯಲ್ಲಿ ಬಂದಿದ್ದಾರೆಯೇ? ಅಂತಹ ವಿಷಯವನ್ನು ರಾಜಕೀಯಗೊಳಿಸುವುದು ಖಂಡನೀಯ ಎಂದಿದ್ದಾರೆ.
ರಾಜ್ಯದಲ್ಲಿ ಚುನಾವಣೆಯ ಹೊತ್ತಲೇ ದಾಳಿ ನಡೆಯುತ್ತಿದ್ದೆ ಎಂದು ಅಖಿಲೇಶ್ ಟೀಕೆಗೆ ಪ್ರತಿಕ್ರಿಯಿಸಿದ ನಿರ್ಮಲಾ ಸೀತಾರಾಮನ್ “ಕಳ್ಳನನ್ನು ಹಿಡಿಯಲು ನಾವು ಮುಹೂರ್ತಕ್ಕಾಗಿ ಕಾಯಬೇಕೇ?” ಗೋಡೆಯ ಎತ್ತರದಷ್ಟೇ ನಗದಿನ ರಾಶಿಯಿತ್ತು ಎಂದಿದ್ದಾರೆ.
#WATCH | Finance Minister Nirmala Sitharaman responds to allegations regarding searches on properties of fragrance businessmen in UP’s Kanpur & Unnao; says, “Raids were conducted at the right places… Is former UP CM Akhilesh Yadav scared & shaken due to these searches?” pic.twitter.com/3TS5GKas9l
— ANI (@ANI) December 31, 2021
ಡಿಸೆಂಬರ್ 26 ರಂದು, ಕನೌಜ್ ಮೂಲದ ಸುಗಂಧ ದ್ರವ್ಯ ಉದ್ಯಮಿ ಪೀಯೂಷ್ ಜೈನ್ ನಿವಾಸದ ಮೇಲೆ ಐಟಿ ದಾಳಿ ನಡೆದಿದ್ದು ಅಪಾರ ಪ್ರಮಾಣದ ನಗದು ವಶಪಡಿಸಲಾಗಿತ್ತು. ನೆಲದಡಿಯ ಬಂಕರ್‌ಗಳಲ್ಲಿ ಹಣವನ್ನು ಬಚ್ಚಿಡಲಾಗಿತ್ತು ಎಂದು ತೆರಿಗೆ ಅಧಿಕಾರಿಗಳ ಜೊತೆಗಿದ್ದ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ₹177 ಕೋಟಿ ಲೆಕ್ಕಕ್ಕೆ ಸಿಗದ ನಗದು ವಶಪಡಿಸಿಕೊಂಡಿರುವುದು ಜಾರಿ ಸಂಸ್ಥೆಯಿಂದ ಇದುವರೆಗಿನ ಅತಿದೊಡ್ಡ ನಗದು ವಶವಾಗಿದೆ ಎಂದು ಹಣಕಾಸು ಸಚಿವಾಲಯ ಹೇಳಿದೆ.
ಪೀಯೂಷ್ ಜೈನ್ ಸಮಾಜವಾದಿ ಪಕ್ಷದೊಂದಿಗೆ ಸಂಪರ್ಕ ಹೊಂದಿದ್ದರಿಂದ ಉತ್ತರ ಪ್ರದೇಶ ಚುನಾವಣೆಗೆ ಮುನ್ನ ಈ ದಾಳಿ ರಾಜಕೀಯ ವಿಷಯವಾಗಿದೆ. ಅದಾಗ್ಯೂ ಈ ನಂಟನ್ನು ಸಮಾಜವಾದಿ ಪಕ್ಷ ನಿರಾಕರಿಸಿತು.ಬಿಜೆಪಿ ತನ್ನ ಸ್ವಂತ ಉದ್ಯಮಿಯ ಮೇಲೆ ತಪ್ಪಾಗಿ ದಾಳಿ ಮಾಡಿದೆ ಎಂದು ಅಖಿಲೇಶ್ ಯಾದವ್ ಹೇಳಿದ್ದಾರೆ. “ತಪ್ಪಾಗಿ ಬಿಜೆಪಿ ತನ್ನದೇ ಉದ್ಯಮಿ ಮೇಲೆ ದಾಳಿ ಮಾಡಿದೆ. ಎಸ್‌ಪಿ ನಾಯಕ ಪುಷ್ಪರಾಜ್ ಜೈನ್ ಬದಲಿಗೆ ಪಿಯೂಷ್ ಜೈನ್ ಮೇಲೆ ರೇಡ್ ಮಾಡಲಾಗಿದೆ” ಎಂದು ಅಖಿಲೇಶ್ ಹೇಳಿದ್ದಾರೆ. ಅಂದಹಾಗೆ, ಪುಷ್ಪರಾಜ್ ಜೈನ್ ಸಮಾಜವಾದಿ ಸುಗಂಧ ದ್ರವ್ಯವನ್ನು ಬಿಡುಗಡೆ ಮಾಡಿದ ಸಮಾಜವಾದಿ ಪಕ್ಷದ ಎಂಎಲ್ಸಿ ಆಗಿದ್ದಾರೆ.
ಉತ್ತರ ಪ್ರದೇಶದ ಕೆಲವು ಸುಗಂಧ ದ್ರವ್ಯ ವ್ಯಾಪಾರಿಗಳ ಮೇಲೆ ಆದಾಯ ತೆರಿಗೆ ಇಲಾಖೆ ಕ್ರಮದ ಭಾಗವಾಗಿ ಶುಕ್ರವಾರ ಪುಷ್ಪರಾಜ್ ಜೈನ್ ಮೇಲೆಯೂ ಐಟಿ ಇಲಾಖೆ ದಾಳಿ ನಡೆಸಲಾಯಿತು. ಕನೌಜ್, ಕಾನ್ಪುರ, ದೆಹಲಿ, ಸೂರತ್, ಮುಂಬೈ ಮತ್ತು ಇತರ ಕೆಲವು ಸ್ಥಳಗಳಲ್ಲಿ 30-40 ಆವರಣದಲ್ಲಿ ಶೋಧ ನಡೆಸಲಾಗಿದೆ.
ಪೀಯೂಶ್ ಜೈನ್ ಮತ್ತು ಪುಷ್ಪರಾಜ್ ಜೈನ್ ಇಬ್ಬರೂ ಕನೌಜ್‌ನ ಒಂದೇ ಪ್ರದೇಶದಲ್ಲಿ ಕೆಲವು ಮೀಟರ್‌ಗಳಷ್ಟು ದೂರದಲ್ಲಿ ತಮ್ಮ ವಸತಿ ಆವರಣವನ್ನು ಹೊಂದಿದ್ದಾರೆ.
“ದಾಳಿಗಳನ್ನು ಮೊದಲೇ ನಿರ್ಧರಿಸಲಾಗಿತ್ತು. ಕಳೆದ ಕೆಲವು ದಿನಗಳಿಂದ ಎಸ್‌ಪಿ ನಾಯಕರ ಮೇಲೆ ದಾಳಿ ಪ್ರಾರಂಭವಾಗಿದೆ ಎಂಬ ಮಾಹಿತಿ ಇಲ್ಲಿಗೆ ಬರುತ್ತಿದೆ. ಕಳೆದ ಎರಡು ವಾರಗಳಿಂದ ಇಲ್ಲಿ ಸಮಾಜವಾದಿ ಮತ್ತು ದೆಹಲಿಯ ಬಿಜೆಪಿ ನಾಯಕರು ಬಂದಾಗಲೆಲ್ಲ ಸಮಾಜವಾದಿಗಳಿಗೆ ಸಂಬಂಧಿಸಿದವರ ಮೇಲೆ ದಾಳಿಗಳು ನಡೆಯುತ್ತಿವೆ. ಉತ್ತರ ಪ್ರದೇಶಕ್ಕೆ ಅವರು ಈ ಏಜೆನ್ಸಿಗಳನ್ನು ಕರೆತರುತ್ತಾರೆ. ಈ ಸಮಯದಲ್ಲಿ, ಅವರು ದಾಳಿ ನಡೆಸಲು ಸೂಚಿಸಲಾಗಿದೆ ಎಂದು ಅಖಿಲೇಶ್ ಶುಕ್ರವಾರ ಹೇಳಿದರು. “ನೆನಪಿಡಿ, ಪಶ್ಚಿಮ ಬಂಗಾಳದಲ್ಲಿ ಚುನಾವಣೆಗಳು ಇದ್ದಾಗ ದೆಹಲಿಯ ಎಲ್ಲಾ ಏಜೆನ್ಸಿಗಳು ಬಂಗಾಳವನ್ನು ತಲುಪಿದ್ದವು. ತಮಿಳುನಾಡಿನಲ್ಲಿ ಸ್ಟಾಲಿನ್‌ಗೆ ಅದು ಸಂಭವಿಸಿದೆ ಮತ್ತು ಬೆಂಗಳೂರಿನಲ್ಲೂ ಅದೇ ನಡೆದಿದೆ” ಎಂದು ಅಖಿಲೇಶ್ ಹೇಳಿದರು.
ಇದನ್ನೂ ಓದಿ: Akhilesh Yadav: ಪುಷ್ಪರಾಜ್ ಜೈನ್ ಮೇಲಿನ ಐಟಿ ದಾಳಿ ಹಿಂದೆ ಬಿಜೆಪಿ ಕೈವಾಡ; ಅಖಿಲೇಶ್ ಯಾದವ್ ಆರೋಪ
ಇದನ್ನೂ ಓದಿ: ಐಟಿ ದಾಳಿ: ಬರೋಬ್ಬರಿ ₹257 ಕೋಟಿ ಜಪ್ತಿ; ಉತ್ತರ ಪ್ರದೇಶದ ಸುಗಂಧ ದ್ರವ್ಯ ಉದ್ಯಮಿ ಪಿಯೂಷ್ ಜೈನ್ ಬಂಧನ