ಧರ್ಮಪತ್ನಿಗೆ ಕೈಕೊಟ್ಟು ಟಿಕ್​ಟಾಕ್​ ಯುವತಿ ಜೊತೆ ಲವ್ವಿಡವ್ವಿ ಶುರುಮಾಡ್ದ!

|

Updated on: Oct 28, 2019 | 7:15 PM

ಹೈದರಾಬಾದ್: ಟಿಕ್​ಟಾಕ್ ಹುಚ್ಚಿನಿಂದ ಅದೆಷ್ಟೋ ಅವಾಂತರಗಳು ಸೃಷ್ಟಿಯಾಗಿವೆ. ಅದೆಷ್ಟೋ ಜನ್ರು ಜೀವ ಕಳೆದುಕೊಂಡಿದ್ದಾರೆ. ಗಂಡನ ಟಿಕ್​ಟಾಕ್ ಗೀಳು ಹೆಂಡ್ತಿಯನ್ನ ಬೀದಿಗೆ ತಂದು ನಿಲ್ಲಿಸಿದೆ. ಜೊತೆಗೆ ಹೆಂಡ್ತಿಗೆ ಕೈಕೊಟ್ಟಿದ್ದ ಆಸಾಮಿಗೆ ಕಂಬಿ ಎಣಿಸೋ ಪರಿಸ್ಥಿತಿಯೂ ಬಂದಿರುವ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ. ಟಿಕ್​ಟಾಕ್​ನಲ್ಲಿ ಶುರುವಾಯ್ತು ಇಬ್ಬರ ಲವ್ವಿಡವ್ವಿ! ಆಂಧ್ರಪ್ರದೇಶದ ವಿಜಯವಾಡದ ಇಬ್ರಾಹಿಂ ಪಟ್ಟಣದ ನಿವಾಸಿ. ವಿಟಿಪಿಎಸ್ ಉದ್ಯೋಗಿಯಾಗಿರೋ ಸತ್ಯರಾಜ್ ಕಳೆದ 10 ವರ್ಷಗಳ ಹಿಂದೆ ಅನುರಾಧ ಎಂಬಾಕೆಯನ್ನ ಮದ್ವೆ ಆಗಿದ್ದ. ಆದ್ರೆ, ಇವ್ರಿಗೆ ಮಕ್ಕಳಾಗಿರಲಿಲ್ಲ. ಕಳೆದ ಏಳೆಂಟು ತಿಂಗಳ […]

ಧರ್ಮಪತ್ನಿಗೆ ಕೈಕೊಟ್ಟು ಟಿಕ್​ಟಾಕ್​ ಯುವತಿ ಜೊತೆ ಲವ್ವಿಡವ್ವಿ ಶುರುಮಾಡ್ದ!
Follow us on

ಹೈದರಾಬಾದ್: ಟಿಕ್​ಟಾಕ್ ಹುಚ್ಚಿನಿಂದ ಅದೆಷ್ಟೋ ಅವಾಂತರಗಳು ಸೃಷ್ಟಿಯಾಗಿವೆ. ಅದೆಷ್ಟೋ ಜನ್ರು ಜೀವ ಕಳೆದುಕೊಂಡಿದ್ದಾರೆ. ಗಂಡನ ಟಿಕ್​ಟಾಕ್ ಗೀಳು ಹೆಂಡ್ತಿಯನ್ನ ಬೀದಿಗೆ ತಂದು ನಿಲ್ಲಿಸಿದೆ. ಜೊತೆಗೆ ಹೆಂಡ್ತಿಗೆ ಕೈಕೊಟ್ಟಿದ್ದ ಆಸಾಮಿಗೆ ಕಂಬಿ ಎಣಿಸೋ ಪರಿಸ್ಥಿತಿಯೂ ಬಂದಿರುವ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.

ಟಿಕ್​ಟಾಕ್​ನಲ್ಲಿ ಶುರುವಾಯ್ತು ಇಬ್ಬರ ಲವ್ವಿಡವ್ವಿ!
ಆಂಧ್ರಪ್ರದೇಶದ ವಿಜಯವಾಡದ ಇಬ್ರಾಹಿಂ ಪಟ್ಟಣದ ನಿವಾಸಿ. ವಿಟಿಪಿಎಸ್ ಉದ್ಯೋಗಿಯಾಗಿರೋ ಸತ್ಯರಾಜ್ ಕಳೆದ 10 ವರ್ಷಗಳ ಹಿಂದೆ ಅನುರಾಧ ಎಂಬಾಕೆಯನ್ನ ಮದ್ವೆ ಆಗಿದ್ದ. ಆದ್ರೆ, ಇವ್ರಿಗೆ ಮಕ್ಕಳಾಗಿರಲಿಲ್ಲ. ಕಳೆದ ಏಳೆಂಟು ತಿಂಗಳ ಹಿಂದೆ ಈತನಿಗೆ ಟಿಕ್​ಟಾಕ್​ನಲ್ಲಿ ಹೈದರಾಬಾದ್​ನ ಹುಡುಗಿ ಪರಿಚಯವಾಗಿದ್ಲು. ಟಿಕ್​ಟಾಕ್ ಮಾಡುತ್ತಲೇ ಇಬ್ಬರ ನಡ್ವೆ ಲವ್ವಿಡವ್ವಿ ಶುರುವಾಗಿದೆ. ಕೊನೆಗೆ ಹೆಂಡ್ತಿಗೆ ಹೇಳದೆ ಕದ್ದುಮುಚ್ಚಿ ತಿರುಪತಿ ದೇವಸ್ಥಾನದಲ್ಲಿ ಮದ್ವೆ ಆಗಿದ್ದಾನೆ.

ಇದನ್ನ ಪ್ರಶ್ನೆ ಮಾಡಿದ ಮೊದಲ ಪತ್ನಿಯನ್ನ ಹತ್ಯೆಗೆ ಸಹ ಯತ್ನಿಸಿದ್ದನಂತೆ. ಹೀಗಾಗಿ, ಇಬ್ರಾಹಿಂಪಟ್ಟಣ ಪೊಲೀಸ್ ಠಾಣೆಯಲ್ಲಿ ಗಂಡನ ವಿರುದ್ಧ ದೂರು ಕೊಟ್ಟಿದ್ದಾಳೆ. ಹೆಂಡ್ತಿ ದೂರು ನೀಡ್ತಿದ್ದಂತೆಯೇ ಸತ್ಯರಾಜ್ ಪೊಲೀಸ್ ಸ್ಟೇಷನ್​ಗೆ ಬಂದಿದ್ದಾನೆ. ಈ ವೇಳೆ ನಮ್ಮ ಅಪ್ಪ-ಅಮ್ಮನನ್ನ ಸರಿಯಾಗಿ ನೋಡಿಕೊಳ್ತಿರಲಿಲ್ಲ. ಅದ್ಕೆ ಎರಡನೇ ಮದ್ವೆ ಆದೆ ಅಂತಾ ಸಬೂಬು ಹೇಳಿದ್ದಾನೆ.

ಆದ್ರೆ ಈಗ ಗಂಡನ ಟಿಕ್​ಟಾಕ್ ಗೀಳು ಪತ್ನಿಯನ್ನ ಬೀದಿಪಾಲು ಮಾಡಿದೆ. ಒಂದೆಡೆ ಮಕ್ಕಳು ಇಲ್ಲ, ಇದೀಗ ಕಟ್ಕೊಂಡ ಗಂಡ ಇನ್ನೊಂದು ಮದ್ವೆಯಾಗಿದ್ದಾನೆ. ಹೀಗಾಗಿ, ಕೇಸ್ ದಾಖಲಿಸಿಕೊಂಡಿರೋ ಪೊಲೀಸ್ ಸತ್ಯರಾಜ್​​ನನ್ನ ಬಂಧಿಸಿ ಜೈಲಿಗೆ ಕಳಿಸಿದ್ದಾರೆ.

Published On - 7:13 pm, Mon, 28 October 19