ಹೆಂಡತಿ ಪ್ರಿಯಕರನೊಂದಿಗೆ ಮಲಗಿದ್ದನ್ನು ಕಂಡು ಹಾಸಿಗೆಯಲ್ಲೇ ಕೊಂದ ಗಂಡ
ಉತ್ತರಪ್ರದೇಶದ ಜಲೌನ್ ಗ್ರಾಮದಲ್ಲಿ ತನ್ನ ಮನೆಯಲ್ಲಿ ಹಾಸಿಗೆಯಲ್ಲಿ ಪ್ರೇಮಿಯೊಂದಿಗೆ ಮಲಗಿದ್ದನ್ನು ಕಂಡು ಆಕೆಯ ಗಂಡ ತನ್ನ ಅವರಿಬ್ಬರನ್ನೂ ಕೊಲೆ ಮಾಡಿದ್ದಾನೆ. ಈಗಾಗಲೇ ವಿಧಿವಿಜ್ಞಾನ ತಂಡವು ಪುರಾವೆಗಳನ್ನು ಸಂಗ್ರಹಿಸಿದೆ ಮತ್ತು ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಕೊಲೆ ಮಾಡಿದ ಕುನ್ವರ್ ಸಿಂಗ್ ನಂತರ ಪೊಲೀಸರಿಗೆ ಶರಣಾಗಿದ್ದು, ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ.
ನವದೆಹಲಿ: ಉತ್ತರ ಪ್ರದೇಶದ ಜಲೌನ್‌ನಲ್ಲಿ ಗುರುವಾರ ರಾತ್ರಿ ಮನೆಯಲ್ಲಿ ಹಾಸಿಗೆಯಲ್ಲಿ ಒಟ್ಟಿಗೆ ಇದ್ದುದನ್ನು ಕಂಡ ಆಕೆಯ ಗಂಡ ತನ್ನ ಪತ್ನಿ ಮತ್ತು ಆಕೆಯ ಪ್ರಿಯಕರನನ್ನು ಕೊಂದಿದ್ದಾನೆ. ವರದಿಗಳ ಪ್ರಕಾರ, ಕುನ್ವರ್ ಸಿಂಗ್ ಕೂಲಿ ಕೆಲಸ ಮಾಡುತ್ತಿದ್ದ. ಆತ ತನ್ನ ಹೆಂಡತಿ ಆರತಿ ಮತ್ತು ಅವರ ಇಬ್ಬರು ಚಿಕ್ಕ ಮಕ್ಕಳೊಂದಿಗೆ ವಾಸಿಸುತ್ತಿದ್ದ. ಕಳೆದ ಕೆಲವು ತಿಂಗಳುಗಳಿಂದ ಕುನ್ವರ್ ತನ್ನ ಹೆಂಡತಿಯ ಚಾರಿತ್ರ್ಯದ ಬಗ್ಗೆ ಅನುಮಾನ ಹೊಂದಿದ್ದನು. ಇದರಿಂದ ಅವರ ನಡುವೆ ಆಗಾಗ ಜಗಳವಾಗುತ್ತಿತ್ತು.
ಆತನ ಹೆಂಡತಿ ಹತ್ತಿರದ ಹಳ್ಳಿಯ ನಿವಾಸಿ ಛವಿನಾಥ್ ಸಿಂಗ್ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು. ಇದರ ಬಗ್ಗೆ ಕುನ್ವರ್ಗೂ ಅನುಮಾನವಿತ್ತು. ತನ್ನ ಊರಿಗೆ ಹೋಗುತ್ತಿದ್ದ ಕುನ್ವರ್ ಸಿಂಗ್ ಮನೆಯಲ್ಲಿ ಇಲ್ಲದಿದ್ದಾಗ ಆತನ ಹೆಂಡತಿ ತನ್ನ ಪ್ರೇಮಿಯೊಂದಿಗೆ ಇರುತ್ತಿದ್ದಳು. ಈ ವಿಚಾರಕ್ಕೆ ಸುಮಾರು ಹತ್ತು ದಿನಗಳ ಮೊದಲು ಕುನ್ವರ್ ಮತ್ತು ಆರತಿ ತೀವ್ರ ವಾಗ್ವಾದ ನಡೆಸಿದ್ದರು. ಈ ಘರ್ಷಣೆಯ ಬಳಿಕ ಆರತಿ ತನ್ನ ಗಂಡನ ವಿರುದ್ಧ ಕೌಟುಂಬಿಕ ದೌರ್ಜನ್ಯದ ದೂರು ದಾಖಲಿಸಿದ್ದಳು. ಕುನ್ವರ್‌ಗಾಗಿ ಪೊಲೀಸರು ಹುಡುಕಾಡುತ್ತಿದ್ದರು. ಬಂಧನದ ಭೀತಿಯಿಂದ ಆತ ಅಧಿಕಾರಿಗಳಿಗೆ ಕಾಣದಂತೆ ತಲೆಮರೆಸಿಕೊಂಡಿದ್ದ.
ಇದನ್ನೂ ಓದಿ: 3 ವರ್ಷದ ಮಗುವಿನ ಮೇಲೆ ಅತ್ಯಾಚಾರ ಮಾಡಿದ್ದಲ್ಲದೆ ಕಾಲುಗಳ ಮುರಿದು ಕೊಂದ ದುಷ್ಟ
ಗುರುವಾರ ತಡರಾತ್ರಿ, ಕುನ್ವರ್ ಸಿಂಗ್ ಸುಳಿವು ನೀಡದೆ ತನ್ನ ಮನೆಗೆ ಬಂದಾಗ ಆರತಿ ಮತ್ತು ಛವಿನಾಥ್ ಬೆಡ್ ರೂಂನಲ್ಲಿ ಒಟ್ಟಿಗೇ ಮಲಗಿದ್ದರು. ಇದರಿಂದ ಸಿಟ್ಟಿಗೆದ್ದ ಆತ ಇಬ್ಬರ ಮೇಲೂ ಕೊಡಲಿಯಿಂದ ಹಲ್ಲೆ ನಡೆಸಿ, ಕೊಂದು ಹಾಕಿದ್ದಾನೆ.
ಈ ಘಟನೆಯ ವೇಳೆ ದಂಪತಿಯ 10 ಮತ್ತು 8 ವರ್ಷದ ಇಬ್ಬರು ಮಕ್ಕಳು ಮನೆಯಲ್ಲಿ ಮಲಗಿದ್ದರು. ಗಲಾಟೆಯಿಂದ ಎಚ್ಚೆತ್ತುಕೊಂಡ ಅವರು ಕಿರುಚಾಡುತ್ತಾ ಹೊರಗೆ ಓಡಿ ಬಂದು ಸಮೀಪದ ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದಾರೆ. ಕುನ್ವರ್ ಸಿಂಗ್ ನಂತರ ಪೊಲೀಸರಿಗೆ ಶರಣಾಗಿದ್ದು, ಅಪರಾಧವನ್ನು ಒಪ್ಪಿಕೊಂಡಿದ್ದಾನೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ