AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೈದರಾಬಾದ್​ನಲ್ಲಿ ಉದ್ಘಾಟನೆಯಾದ ಎರಡು ತೃತೀಯಲಿಂಗಿಗಳ ಕ್ಲಿನಿಕ್​ಗಳು; ಇಲ್ಲಿನ ಕೆಲಸಗಾರರೆಲ್ಲ ಅದೇ ಸಮುದಾಯಕ್ಕೆ ಸೇರಿದವರೇ !

ಎರಡು ಕ್ಲಿನಿಕ್​ಗಳು ಈಗಾಗಲೇ ಕಾರ್ಯನಿರ್ವಹಣೆ ಶುರು ಮಾಡಿವೆ. ಅದರಲ್ಲಿ ಮೊದಲನೇದು ನಾರಾಯಣಗುಡಾದಲ್ಲಿ ಜನವರಿಗೆ 29ರಂದು ಮತ್ತು ಎರಡನೇಯದು ಜೀಡಿಮೆಟ್ಲಾದಲ್ಲಿ, ಜುಲೈ 11ರಂದು ಉದ್ಘಾಟನೆಯಾಗಿದೆ.

ಹೈದರಾಬಾದ್​ನಲ್ಲಿ ಉದ್ಘಾಟನೆಯಾದ ಎರಡು ತೃತೀಯಲಿಂಗಿಗಳ ಕ್ಲಿನಿಕ್​ಗಳು; ಇಲ್ಲಿನ ಕೆಲಸಗಾರರೆಲ್ಲ ಅದೇ ಸಮುದಾಯಕ್ಕೆ ಸೇರಿದವರೇ !
ತೃತೀಯಲಿಂಗಿಗಳ ಕ್ಲಿನಿಕ್​
TV9 Web
| Edited By: |

Updated on: Jul 29, 2021 | 10:53 AM

Share

ಈಗೀಗ ತೃತೀಯಲಿಂಗಿ (Transgender)ಗಳನ್ನು ಭಾರತದಲ್ಲಿ ಸ್ವಲ್ಪಮಟ್ಟಿಗೆ ಒಪ್ಪಿಕೊಳ್ಳಲಾಗುತ್ತಿದೆ. ಹಾಗಾಗಿ ಒಂದೊಂದೇ ಕ್ಷೇತ್ರದಲ್ಲಿ ಅವರೂ ತಮ್ಮ ಚಾಪು ಮೂಡಿಸುತ್ತಿದ್ದಾರೆ. ಸುದ್ದಿ ನಿರೂಪಣೆ, ಕೊವಿಡ್​ 19 ನಿರ್ವಹಣಾ ಕೇಂದ್ರಕ್ಕೂ ತೃತೀಯಲಿಂಗಿಗಳು ಕಾಲಿಟ್ಟು, ಸಾಧನೆ ಮಾಡಿದ್ದಾರೆ. ಜನರೂ ಕೂಡ ಒಪ್ಪಿಕೊಂಡಿದ್ದಾರೆ. ಹಾಗೇ ಇದೀಗ ಹೈದರಾಬಾದ್(Hyderabad)​ನಲ್ಲಿ ಮೊದಲ ಬಾರಿಗೆ ಎರಡು ತೃತೀಯಲಿಂಗಿಗಳ ಕ್ಲಿನಿಕ್​ಗಳು ಸ್ಥಾಪಿತವಾಗಿವೆ. ವಿವಿಧ ಮೆಟ್ರೋ ನಗರಗಳಲ್ಲಿ ತೃತೀಯಲಿಂಗಿಗಳಿಗೆಂದೇ ಪ್ರತ್ಯೇಕವಾಗಿ ಕ್ಲಿನಿಕ್​ಗಳನ್ನು ತೆರೆಯಬೇಕು ಎಂಬ ಕೇಂದ್ರ ಸರ್ಕಾರದ ಯೋಜನೆಯ ಭಾಗವಾಗಿ ಹೈದರಾಬಾದ್​ನಲ್ಲಿ ಮೊದಲಬಾರಿಗೆ 2 ಕ್ಲಿನಿಕ್​ಗಳನ್ನು ಸ್ಥಾಪಿಸಲಾಗಿದ್ದು. ಉಳಿದ ಮೆಟ್ರೋ ನಗರಗಳಲ್ಲೂ ಶೀಘ್ರವೇ ಕ್ಲಿನಿಕ್​​ಗಳು ನಿರ್ಮಾಣ ಆಗಲಿವೆ.

ತೃತೀಯಲಿಂಗಿಗಳ ಪರ ಹೋರಾಟಗಾರ್ತಿಯಾದ ರಚನಾ ಮುದ್ರಾಬೊಯಿನಾ ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಹೈದರಾಬಾದ್ ನಗರದಲ್ಲಿ ತೃತೀಯಲಿಂಗಿಗಳಲ್ಲಿ ಎಚ್​ಐವಿ ಸೋಂಕು ಹರಡುವ ಪ್ರಮಾಣ ಹೆಚ್ಚಿರುವ ಕಾರಣ, ಇಲ್ಲಿಯೇ ಮೊದಲು ಕ್ಲಿನಿಕ್​ಗಳನ್ನು ತೆರೆಯಲಾಗಿದೆ ಎಂದು ತಿಳಿಸಿದ್ದಾರೆ. ರಾಷ್ಟ್ರೀಯವಾಗಿ ಎಚ್​ಐವಿ ಹರಡುವಿಕೆ ಪ್ರಮಾಣ ಸರಾಸರಿ ಶೇ.3.13ರಷ್ಟಿದ್ದು, ಹೈದರಾಬಾದ್​ನಲ್ಲಿ ಶೇ.6.47ರಷ್ಟಿದೆ. 2030ರ ಹೊತ್ತಿಗೆ ಏಡ್ಸ್​ನ್ನು ಸಂಪೂರ್ಣ ನಿರ್ಮೂಲನೆ ಮಾಡುವ ಮಹದುದ್ದೇಶದಿಂದ ರಾಷ್ಟ್ರೀಯ ಏಡ್ಸ್​ ನಿಯಂತ್ರಣ ಸಂಸ್ಥೆಯೊಂದಿಗೆ ಸಹಭಾಗಿತ್ವವನ್ನೂ ಹೊಂದಿದೆ. ಅದರಡಿಯಲ್ಲಿ ಹೈದರಾಬಾದ್​ನಲ್ಲಿ ಮೊದಲ ಎರಡು ಆಸ್ಪತ್ರೆಗಳು ನಿರ್ಮಾಣವಾಗಿದ್ದು, ಇಲ್ಲಿ ತೃತೀಯ ಲಿಂಗಿಗಳಿಗೆ ಆಂಟಿರೆಟ್ರೋವೈರಲ್ ಥೆರಪಿ (ART) ಚಿಕಿತ್ಸಾ ಸೇವೆಗಳೂ ಲಭ್ಯವಿರುತ್ತದೆ ಎಂದೂ ರಚನಾ ಹೇಳಿದ್ದಾರೆ. ಕೇವಲ ಇಷ್ಟೇ ಅಲ್ಲ, ತೃತೀಯಲಿಂಗಿ ಸಮುದಾಯದ ಒಟ್ಟಾರೆ ಯೋಗಕ್ಷೇಮ, ಸಾಮಾಜಿಕ-ಆರ್ಥಿಕ ಪರಿಸ್ಥಿತಿ ಸುಧಾರಣೆಗೂ ಈ ಕ್ಲಿನಿಕ್​ ಶ್ರಮಿಸಲಿದೆ ಎಂದಿದ್ದಾರೆ.

ಎರಡು ಕ್ಲಿನಿಕ್​ಗಳು ಈಗಾಗಲೇ ಕಾರ್ಯನಿರ್ವಹಣೆ ಶುರು ಮಾಡಿವೆ. ಅದರಲ್ಲಿ ಮೊದಲನೇದು ನಾರಾಯಣಗುಡಾದಲ್ಲಿ ಜನವರಿಗೆ 29ರಂದು ಮತ್ತು ಎರಡನೇಯದು ಜೀಡಿಮೆಟ್ಲಾದಲ್ಲಿ, ಜುಲೈ 11ರಂದು ಉದ್ಘಾಟನೆಯಾಗಿದೆ. ಈ ಕ್ಲಿನಿಕ್​ಗಳಲ್ಲಿ ವೈದ್ಯರು, ಕೌನ್ಸಿಲರ್​​ಗಳು, ಮನಃಶಾಸ್ತ್ರಜ್ಞರೆಲ್ಲ ತೃತೀಯಲಿಂಗಿ ಸಮುದಾಯದವರೇ ಆಗಿದ್ದು, ಹೆಮ್ಮೆಯ ಸಂಗತಿಯೇ ಆಗಿದೆ.

ಇದನ್ನೂ ಓದಿ: ನಿರೀಕ್ಷಿತ ಪ್ರಮಾಣದಲ್ಲಿ ನಡೆಯದ ಲಸಿಕೆ ಅಭಿಯಾನ; ಖಾಸಗಿ ಆಸ್ಪತ್ರೆಗಳ ಶೇ. 25 ರಷ್ಟು ಲಸಿಕೆ ಕೋಟಾ ತಗ್ಗಿಸುವ ಸಾಧ್ಯತೆ

Hyderabad Gets First Two Transgender Clinics

ಬೆಳ್ಳಂಬೆಳಗ್ಗೆ ಭ್ರಷ್ಟರಿಗೆ ಬಿಸಿಮುಟ್ಟಿಸಿದ ಲೋಕಾಯುಕ್ತ: ಹಲವೆಡೆ ದಾಳಿ
ಬೆಳ್ಳಂಬೆಳಗ್ಗೆ ಭ್ರಷ್ಟರಿಗೆ ಬಿಸಿಮುಟ್ಟಿಸಿದ ಲೋಕಾಯುಕ್ತ: ಹಲವೆಡೆ ದಾಳಿ
2 ವರ್ಷ ಹೋಟೆಲ್ ರೂಮ್ ಕೊಟ್ಟಿದ್ದಕ್ಕೆ 3 ಅಡಿಯಷ್ಟು ಕಸ ತುಂಬಿ ಹೋದ ಅತಿಥಿ
2 ವರ್ಷ ಹೋಟೆಲ್ ರೂಮ್ ಕೊಟ್ಟಿದ್ದಕ್ಕೆ 3 ಅಡಿಯಷ್ಟು ಕಸ ತುಂಬಿ ಹೋದ ಅತಿಥಿ
ಫ್ಯಾಮಿಲಿ ವೀಕ್: ರಾಶಿಕಾ ತಾಯಿ ಮಾತಿಗೆ ಸ್ಟನ್ ಆದ ಗಿಲ್ಲಿ
ಫ್ಯಾಮಿಲಿ ವೀಕ್: ರಾಶಿಕಾ ತಾಯಿ ಮಾತಿಗೆ ಸ್ಟನ್ ಆದ ಗಿಲ್ಲಿ
ಉಸಿರಾಟ ಸಮಸ್ಯೆ ಎಂದು ಆಸ್ಪತ್ರೆಗೆ ಬಂದ ರೋಗಿಯ ಮೇಲೆ ವೈದ್ಯನಿಂದ ಹಲ್ಲೆ
ಉಸಿರಾಟ ಸಮಸ್ಯೆ ಎಂದು ಆಸ್ಪತ್ರೆಗೆ ಬಂದ ರೋಗಿಯ ಮೇಲೆ ವೈದ್ಯನಿಂದ ಹಲ್ಲೆ
ರಸ್ತೆ ಅಡ್ಡಗಟ್ಟಿ ಬರ್ತ್‌ಡೇ ಆಚರಣೆ, ಪುಂಡರ ಹಾವಳಿ ವಿಡಿಯೋ ವೈರಲ್
ರಸ್ತೆ ಅಡ್ಡಗಟ್ಟಿ ಬರ್ತ್‌ಡೇ ಆಚರಣೆ, ಪುಂಡರ ಹಾವಳಿ ವಿಡಿಯೋ ವೈರಲ್
ರಜತ್ ಅವರ ಸಂಭಾವನೆ ಎಷ್ಟು? ಓಪನ್ ಆಗಿ ಮಾತನಾಡಿದ ಬುಜ್ಜಿ
ರಜತ್ ಅವರ ಸಂಭಾವನೆ ಎಷ್ಟು? ಓಪನ್ ಆಗಿ ಮಾತನಾಡಿದ ಬುಜ್ಜಿ
ಬೆಂಗಳೂರಲ್ಲಿ ನ್ಯೂ ಇಯರ್ ಸೆಲೆಬ್ರೇಟ್ ಮಾಡ್ತೀರಾ? ಈ ವಿಚಾರಗಳನ್ನು ತಿಳಿದಿರಿ
ಬೆಂಗಳೂರಲ್ಲಿ ನ್ಯೂ ಇಯರ್ ಸೆಲೆಬ್ರೇಟ್ ಮಾಡ್ತೀರಾ? ಈ ವಿಚಾರಗಳನ್ನು ತಿಳಿದಿರಿ
ತಿರುಮಲ ವೆಂಕಟೇಶ್ವರನ ದರ್ಶನಕ್ಕೂ ಮುನ್ನ ಭೂವರಾಹ ಸ್ವಾಮಿ ದರ್ಶನ ಕಡ್ಡಾಯ
ತಿರುಮಲ ವೆಂಕಟೇಶ್ವರನ ದರ್ಶನಕ್ಕೂ ಮುನ್ನ ಭೂವರಾಹ ಸ್ವಾಮಿ ದರ್ಶನ ಕಡ್ಡಾಯ
ಇಂದು ಈ ರಾಶಿಯವರ ವ್ಯವಹಾರಗಳಲ್ಲಿ ಯಶಸ್ಸು ಲಭಿಸಲಿದೆ
ಇಂದು ಈ ರಾಶಿಯವರ ವ್ಯವಹಾರಗಳಲ್ಲಿ ಯಶಸ್ಸು ಲಭಿಸಲಿದೆ
ರೀಲ್ಸ್ ತಂದ ಆಪತ್ತು: ಇನ್ಸ್ಟಾಗ್ರಾಮ್​​​ ಬಳಸುವವರು ಈ ವಿಡಿಯೋನ ಒಮ್ಮೆ ನೋಡಿ
ರೀಲ್ಸ್ ತಂದ ಆಪತ್ತು: ಇನ್ಸ್ಟಾಗ್ರಾಮ್​​​ ಬಳಸುವವರು ಈ ವಿಡಿಯೋನ ಒಮ್ಮೆ ನೋಡಿ