ಷಿಕಾಗೋ ಫೆಬ್ರುವರಿ 06: ಹೈದರಾಬಾದ್‌ನ (Hyderabad )ವಿದ್ಯಾರ್ಥಿಯೊಬ್ಬ ಷಿಕಾಗೋದಲ್ಲಿರುವ (Chicago) ತನ್ನ ಮನೆಯ ಬಳಿ ನಾಲ್ವರು ಶಸ್ತ್ರಸಜ್ಜಿತ ದರೋಡೆಕೋರರಿಂದ ಹಲ್ಲೆಗೊಳಗಾಗಿ ಗಾಯಗೊಂಡಿದ್ದಾನೆ. ದರೋಡೆಕೋರರು ತನ್ನ ಮೇಲೆ ಹಲ್ಲೆ ನಡೆಸಿ ಫೋನ್ ಕಿತ್ತುಕೊಂಡಿದ್ದಾರೆ ಎಂದು ವಿದ್ಯಾರ್ಥಿ ಹೇಳಿದ್ದಾನೆ. ಹಲ್ಲೆಯಿಂದಾಗಿ ವಿದ್ಯಾರ್ಥಿ ತೀವ್ರ ಗಾಯಗೊಂಡು ರಕ್ತ ಸುರಿಸುತ್ತಿರುವುದನ್ನು ವಿಡಿಯೊದಲ್ಲಿ ಕಾಣಬಹುದು. ಈ ದಾಳಿಯು ಆತಂಕವನ್ನು ಹುಟ್ಟುಹಾಕಿದೆ, ವಿಶೇಷವಾಗಿ ಈ ವರ್ಷ ಯುನೈಟೆಡ್ ಸ್ಟೇಟ್ಸ್‌ನಲ್ಲಿ ನಾಲ್ವರು ಭಾರತೀಯ ಮೂಲದ ವಿದ್ಯಾರ್ಥಿಗಳು ಸಾವಿಗೀಡಾದ ಹಿನ್ನೆಲೆಯಲ್ಲಿ ಇದು ಬಂದಿದೆ.
ಹೈದರಾಬಾದ್‌ನ ಲಂಗರ್ ಹೌಜ್ ನಿವಾಸಿ ಸೈಯದ್ ಮಜಾಹಿರ್ ಅಲಿ, ಇಂಡಿಯಾನಾ ವೆಸ್ಲಿಯನ್ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಅಮೆರಿಕಕ್ಕೆ ತೆರಳಿದ್ದರು. ಮಂಗಳವಾರ ಮುಂಜಾನೆ (ಸೆಂಟ್ರಲ್ ಸ್ಟ್ಯಾಂಡರ್ಡ್ ಟೈಮ್) ಷಿಕಾಗೋದ ಕ್ಯಾಂಪ್‌ಬೆಲ್ ಅವೆನ್ಯೂನಲ್ಲಿರುವ ಅವರ ಮನೆಯ ಬಳಿ ಅಲಿಯನ್ನು ಅವರ ಮೂವರು ದಾಳಿಕೋರರು ಹಿಂಬಾಲಿಸುತ್ತಿರುವುದನ್ನು ಸಿಸಿಟಿವಿ ದೃಶ್ಯಾವಳಿ ತೋರಿಸುತ್ತದೆ.
#Hyderabad student was attacked and robbed in #Chicago, USA
Syed Mazahir Ali, a resident of Lunger house, Mehdipatnam, #Telangana , pursuing MS in IT from Indiana Wesleyan University in Chicago, was seriously injured in an attack by armed #robbers near his home.@DrSJaishankar pic.twitter.com/zrTKzrAPyN
— Surya Reddy (@jsuryareddy) February 6, 2024
ಹಣೆ, ಮೂಗು ಮತ್ತು ಬಾಯಿಯಲ್ಲಿ ರಕ್ತ ಸುರಿಸುತ್ತಾ ವಿಡಿಯೊ ಮಾಡಿದ ಅಲಿ, “ನಾಲ್ಕು ಜನರು ನನ್ನ ಮೇಲೆ ದಾಳಿ ಮಾಡಿದರು, ನಾನು ನನ್ನ ಕೈಯಲ್ಲಿ ಆಹಾರದ ಪ್ಯಾಕೆಟ್‌ನೊಂದಿಗೆ ಮನೆಗೆ ಮರಳುತ್ತಿದ್ದೆ. ನಾನು ನನ್ನ ಮನೆಯ ಬಳಿ ತಲುಪಬೇಕಾದರೆ ನಾಲ್ಕು ಜನರು ಹಲ್ಲೆ ನಡೆಸಿದರು, ದಯವಿಟ್ಟು ನನಗೆ ಸಹಾಯ ಮಾಡಿ, ದಯವಿಟ್ಟು ನನಗೆ ಸಹಾಯ ಮಾಡಿ ಎಂದು ಅಂಗಲಾಚಿದ್ದಾರೆ.
ಕಳೆದ ವಾರ, ಒಹಾಯೊದ ಲಿಂಡರ್ ಸ್ಕೂಲ್ ಆಫ್ ಬ್ಯುಸಿನೆಸ್‌ನಲ್ಲಿ ವಿದ್ಯಾರ್ಥಿಯಾಗಿದ್ದ 19 ವರ್ಷದ ಶ್ರೇಯಸ್ ರೆಡ್ಡಿ ಬೆನಿಗರ್ ಶವವಾಗಿ ಪತ್ತೆಯಾಗಿದ್ದರು. ಶ್ರೇಯಸ್ ಅವರ ಪೋಷಕರು ಹೈದರಾಬಾದ್‌ನಲ್ಲಿ ವಾಸಿಸುತ್ತಿದ್ದಾರೆ ಆದರೆ ಅವರು ಅಮೆರಿಕನ್ ಪಾಸ್‌ಪೋರ್ಟ್ ಹೊಂದಿದ್ದರು. ಪ್ರಕರಣದಲ್ಲಿ ಅಕ್ರಮ ನಡೆಯುವುದನ್ನು ಅಧಿಕಾರಿಗಳು ತಳ್ಳಿ ಹಾಕಿದ್ದರು.
ಅದೇ ವಾರದ ಆರಂಭದಲ್ಲಿ, ಪರ್ಡ್ಯೂ ವಿಶ್ವವಿದ್ಯಾಲಯದ ವಿದ್ಯಾರ್ಥಿ ನೀಲ್ ಆಚಾರ್ಯ ಶವವಾಗಿ ಪತ್ತೆಯಾಗಿದ್ದರು. ಆಚಾರ್ಯ ಅವರದೇ ಎಂದು ಗುರುತಿಸಲಾದ ಶವವು ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ಪತ್ತೆಯಾಗಿದೆ. ಜನವರಿ 16 ರಂದು ಜಾರ್ಜಿಯಾದ ಲಿಥೋನಿಯಾದಲ್ಲಿ ಹರ್ಯಾಣದ ವಿವೇಕ್ ಸೈನಿ ಅವರನ್ನು ನಿರಾಶ್ರಿತ ವ್ಯಕ್ತಿಯೊಬ್ಬರು ಹೊಡೆದು ಸಾಯಿಸಿದ್ದರು.
ಇದನ್ನೂ ಓದಿ: ಯುಪಿಎ ಸರ್ಕಾರದ ಆರ್ಥಿಕ ದುರುಪಯೋಗದ ಬಗ್ಗೆ ಶ್ವೇತಪತ್ರ ಹೊರಡಿಸಲು ಮೋದಿ ಸರ್ಕಾರ ನಿರ್ಧಾರ: ಮೂಲಗಳು
ಎಂಬಿಎ ವ್ಯಾಸಂಗ ಮಾಡುತ್ತಿದ್ದ ಸೈನಿ, ಮನೆಯಿಲ್ಲದ ವ್ಯಕ್ತಿಯೊಬ್ಬರು ಆಶ್ರಯ ಪಡೆದಿರುವ ಅಂಗಡಿಯಲ್ಲಿ ಅರೆಕಾಲಿಕ ಕೆಲಸ ಮಾಡುತ್ತಿದ್ದರು. 25 ವರ್ಷ ವಯಸ್ಸಿನ ವ್ಯಕ್ತಿ ಜೂಲಿಯನ್ ಫಾಕ್ನರ್ – ಚಿಪ್ಸ್, ನೀರು ಮತ್ತು ಜಾಕೆಟ್ ಅನ್ನು ಕಾಲಕಾಲಕ್ಕೆ ನೀಡಿದ್ದಾನೆ ಎಂದು ವರದಿಯಾಗಿದೆ. ಜನವರಿ 16 ರಂದು, ಅವರು ಫಾಲ್ಕ್ನರ್ಗೆ ಉಚಿತ ಆಹಾರವನ್ನು ನೀಡಲು ನಿರಾಕರಿಸಿದ್ದಕೆಕ ಆ ವ್ಯಕ್ತಿ ಅವರನ್ನು ಹೊಡೆದು ಸಾಯಿಸಿದ್ದಾರೆ.
ಅಕುಲ್ ಧವನ್, ಮತ್ತೊಬ್ಬ ಭಾರತೀಯ ವಿದ್ಯಾರ್ಥಿ ಜನವರಿಯಲ್ಲಿ ಇಲಿನಾಯ್ಸ್ ಅರ್ಬಾನಾ-ಚಾಂಪೇನ್ ವಿಶ್ವವಿದ್ಯಾಲಯದ ಹೊರಗೆ ಶವವಾಗಿ ಪತ್ತೆಯಾಗಿದ್ದರು. 18 ವರ್ಷದ ಯುವಕನ ಮರಣೋತ್ತರ ಪರೀಕ್ಷೆಯ ವರದಿಯು ಹೈಪೋಥರ್ಮಿಯಾದಿಂದ ಸಾವಿಗೀಡಾಗಿದ್ದಾನೆ ಎಂದು ಹೇಳಿತ್ತು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ