AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯುಪಿಎ ಸರ್ಕಾರದ ಆರ್ಥಿಕ ದುರುಪಯೋಗದ ಬಗ್ಗೆ ಶ್ವೇತಪತ್ರ ಹೊರಡಿಸಲು ಮೋದಿ ಸರ್ಕಾರ ನಿರ್ಧಾರ: ಮೂಲಗಳು

ಯುಪಿಎ ಸರ್ಕಾರದ ಅವಧಿಯಲ್ಲಿ ಆರ್ಥಿಕ ದುರುಪಯೋಗದ ಶ್ವೇತಪತ್ರದ ಮೂಲಕ ಭಾರತದ ಆರ್ಥಿಕ ದುಃಸ್ಥಿತಿ ಮತ್ತು ಆರ್ಥಿಕತೆಯ ಮೇಲೆ ಅದರ ಋಣಾತ್ಮಕ ಪರಿಣಾಮಗಳ ಕುರಿತು ಶ್ವೇತಪತ್ರವು ವಿವರಿಸುತ್ತದೆ. ಆ ಸಮಯದಲ್ಲಿ ತೆಗೆದುಕೊಳ್ಳಬಹುದಾದ ಸಕಾರಾತ್ಮಕ ಕ್ರಮಗಳ ಪರಿಣಾಮದ ಬಗ್ಗೆಯೂ ಇದು ಮಾತನಾಡಲಿದೆ ಎಂದು ಮೂಲಗಳು ತಿಳಿಸಿವೆ.

ಯುಪಿಎ ಸರ್ಕಾರದ ಆರ್ಥಿಕ ದುರುಪಯೋಗದ ಬಗ್ಗೆ ಶ್ವೇತಪತ್ರ ಹೊರಡಿಸಲು ಮೋದಿ ಸರ್ಕಾರ ನಿರ್ಧಾರ: ಮೂಲಗಳು
ನರೇಂದ್ರ ಮೋದಿ
Follow us
ರಶ್ಮಿ ಕಲ್ಲಕಟ್ಟ
|

Updated on: Feb 06, 2024 | 8:36 PM

ದೆಹಲಿ ಫೆಬ್ರುವರಿ 06: ಬಿಜೆಪಿ (BJP)ನೇತೃತ್ವದ ಎನ್‌ಡಿಎ (NDA) ಸರ್ಕಾರವು ಯುಪಿಎ (UPA) ಸರ್ಕಾರದ ಆರ್ಥಿಕ ದುರುಪಯೋಗದ ಕುರಿತು ‘ಶ್ವೇತಪತ್ರ’ (white paper) ಹೊರಡಿಸಲಿದೆ ಎಂದು ಮೂಲಗಳು ಮಂಗಳವಾರ ತಿಳಿಸಿವೆ.ವರದಿಗಳ ಪ್ರಕಾರ, ಸಂಸತ್ತಿನ ಪ್ರಸ್ತುತ ಬಜೆಟ್ ಅಧಿವೇಶನವನ್ನು ಈ ಕಾರಣಕ್ಕಾಗಿ ಒಂದು ದಿನ (ಶನಿವಾರದವರೆಗೆ) ವಿಸ್ತರಿಸಲಾಗುವುದು. ಯುಪಿಎ ಸರ್ಕಾರದ ಅವಧಿಯಲ್ಲಿ ಆರ್ಥಿಕ ದುರುಪಯೋಗದ ಶ್ವೇತಪತ್ರದ ಮೂಲಕ ಭಾರತದ ಆರ್ಥಿಕ ದುಃಸ್ಥಿತಿ ಮತ್ತು ಆರ್ಥಿಕತೆಯ ಮೇಲೆ ಅದರ ಋಣಾತ್ಮಕ ಪರಿಣಾಮಗಳ ಕುರಿತು ಶ್ವೇತಪತ್ರವು ವಿವರಿಸುತ್ತದೆ. ಆ ಸಮಯದಲ್ಲಿ ತೆಗೆದುಕೊಳ್ಳಬಹುದಾದ ಸಕಾರಾತ್ಮಕ ಕ್ರಮಗಳ ಪರಿಣಾಮದ ಬಗ್ಗೆಯೂ ಇದು ಮಾತನಾಡಲಿದೆ ಎಂದು ಮೂಲಗಳು ತಿಳಿಸಿವೆ.

2014 ರ ಮೊದಲು ಆರ್ಥಿಕತೆಯ ದುರುಪಯೋಗದ ಬಗ್ಗೆ ಶ್ವೇತಪತ್ರ

ಸರ್ಕಾರವು 2014 ರ ಮೊದಲು ಆರ್ಥಿಕತೆಯ ದುರುಪಯೋಗದ ಬಗ್ಗೆ ಶ್ವೇತಪತ್ರವನ್ನು ಹೊರತರುತ್ತದೆ. ‘‘ಆ ವರ್ಷಗಳ ದುರಾಡಳಿತದಿಂದ ಪಾಠ ಕಲಿಯುವ ಉದ್ದೇಶದಿಂದ 2014ರ ವರೆಗೆ ನಾವು ಆಗ ಎಲ್ಲಿದ್ದೇವೆ ಮತ್ತು ಈಗ ಎಲ್ಲಿದ್ದೇವೆ ಎಂಬುದನ್ನು ನೋಡುವುದಕ್ಕಾಗಿದೆ ಇದು. ಗುರುವಾರ (ಫೆಬ್ರವರಿ 1) ಮುಂದಿನ ಹಣಕಾಸು ವರ್ಷದ ಮಧ್ಯಂತರ ಬಜೆಟ್ ಅನ್ನು ಮಂಡಿಸುತ್ತಿರುವಾಗ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸದನದಲ್ಲಿ ಶ್ವೇತಪತ್ರ ಹೊರಡಿಸುವುದಾಗಿ ಹೇಳಿದ್ದರು.

2014 ರಲ್ಲಿ ಮೋದಿ ಸರ್ಕಾರ ಅಧಿಕಾರಕ್ಕೆ ಬಂದಾಗ, ಆರ್ಥಿಕತೆಯನ್ನು ಹಂತ ಹಂತವಾಗಿ ಸರಿಪಡಿಸುವ ಮತ್ತು ಆಡಳಿತ ವ್ಯವಸ್ಥೆಗಳನ್ನು ಕ್ರಮಬದ್ಧಗೊಳಿಸುವ ಜವಾಬ್ದಾರಿ ಅಗಾಧವಾಗಿತ್ತು. ಜನರಿಗೆ ಭರವಸೆ ನೀಡುವುದು, ಹೂಡಿಕೆಗಳನ್ನು ಆಕರ್ಷಿಸುವುದು ಮತ್ತು ಹೆಚ್ಚು ಅಗತ್ಯವಿರುವ ಸುಧಾರಣೆಗಳಿಗೆ ಬೆಂಬಲವನ್ನು ನಿರ್ಮಿಸುವುದು ಸಮಯದ ಅಗತ್ಯವಾಗಿದೆ ಎಂದು ಅವರು ಹೇಳಿದರು.

“ದೇಶಮೊದಲು” ಎಂಬ ನಮ್ಮ ಬಲವಾದ ನಂಬಿಕೆಯನ್ನು ಅನುಸರಿಸಿ ಸರ್ಕಾರವು ಅದನ್ನು ಯಶಸ್ವಿಯಾಗಿ ಮಾಡಿದೆ” ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.

ಆ ವರ್ಷಗಳ ಬಿಕ್ಕಟ್ಟನ್ನು ನಿವಾರಿಸಲಾಗಿದೆ. ಸರ್ವತೋಮುಖ ಅಭಿವೃದ್ಧಿಯೊಂದಿಗೆ ಆರ್ಥಿಕತೆಯನ್ನು ಉನ್ನತ ಸುಸ್ಥಿರ ಬೆಳವಣಿಗೆಯ ಹಾದಿಯಲ್ಲಿ ದೃಢವಾಗಿ ಇರಿಸಲಾಗಿದೆ ಎಂದು ಅವರು ಹೇಳಿದರು. “ಜನರ ಆಶೀರ್ವಾದದೊಂದಿಗೆ, ನಮ್ಮ ಸರ್ಕಾರವು 2014 ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿ ಮತ್ತು ಕ್ರಿಯಾತ್ಮಕ ನಾಯಕತ್ವದಲ್ಲಿ ಅಧಿಕಾರ ವಹಿಸಿಕೊಂಡಾಗ, ದೇಶವು ಅಗಾಧ ಸವಾಲುಗಳನ್ನು ಎದುರಿಸುತ್ತಿತ್ತು ಎಂದು ಸಚಿವೆ ಹೇಳಿದ್ದಾರೆ.

ತಮ್ಮ ಆರನೇ ಬಜೆಟ್ ಮಂಡಿಸಿದ ನಿರ್ಮಲಾ ಸೀತಾರಾಮನ್, ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ಅನ್ನು ತನ್ನ ‘ಮಂತ್ರ’ವಾಗಿಟ್ಟುಕೊಂಡು, ಸರ್ಕಾರವು ಆ ಸವಾಲುಗಳನ್ನು ಸರಿಯಾದ ಶ್ರದ್ಧೆಯಿಂದ ಜಯಿಸಿದೆ ಎಂದು ಹೇಳಿದರು. ರಚನಾತ್ಮಕ ಸುಧಾರಣೆಗಳನ್ನು ಕೈಗೊಳ್ಳಲಾಯಿತು, ಜನಪರ ಕಾರ್ಯಕ್ರಮಗಳನ್ನು ರೂಪಿಸಲಾಯಿತು ಮತ್ತು ತ್ವರಿತವಾಗಿ ಕಾರ್ಯಗತಗೊಳಿಸಲಾಯಿತು. ಉದ್ಯೋಗ ಮತ್ತು ಉದ್ಯಮಶೀಲತೆಗೆ ಹೆಚ್ಚಿನ ಅವಕಾಶಗಳಿಗಾಗಿ ಪರಿಸ್ಥಿತಿಗಳನ್ನು ರಚಿಸಲಾಯಿತು.

ಆರ್ಥಿಕತೆಯು ಹೊಸ ಚೈತನ್ಯವನ್ನು ಪಡೆದುಕೊಂಡಿದೆ. ಅಭಿವೃದ್ಧಿಯ ಫಲಗಳು ಜನರನ್ನು ತಲುಪಲು ಪ್ರಾರಂಭಿಸಿದವು. ದೇಶವು ಹೊಸ ಉದ್ದೇಶ ಮತ್ತು ಭರವಸೆಯ ಅರ್ಥವನ್ನು ಪಡೆದುಕೊಂಡಿತು. ಸ್ವಾಭಾವಿಕವಾಗಿ, ಜನರು ದೊಡ್ಡ ಜನಾದೇಶದೊಂದಿಗೆ (2019) ಸರ್ಕಾರವನ್ನು ಆಶೀರ್ವದಿಸಿದರು ಎಂದಿದ್ದಾರೆ ಅವರು.

ಇದನ್ನೂ ಓದಿ: ನಾಯಿಗಳು ಬಿಜೆಪಿಗೆ ಹೇಗೆ ಹಾನಿ ಮಾಡಿವೆ?: ವೈರಲ್ ವಿಡಿಯೊ ಬಗ್ಗೆ ರಾಹುಲ್ ಗಾಂಧಿ ಪ್ರತಿಕ್ರಿಯೆ

“ನಮ್ಮ ಸರ್ಕಾರವು ಅದರ ಅದ್ಭುತ ಕೆಲಸದ ಆಧಾರದ ಮೇಲೆ ಮತ್ತೊಮ್ಮೆ ಜನಾದೇಶದೊಂದಿಗೆ ಜನರಿಂದ ಆಶೀರ್ವದಿಸಲ್ಪಡುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ” ಎಂದು ಸಚಿವರು ಹೇಳಿದರು. ಮುಂದಿನ ಲೋಕಸಭೆಯನ್ನು ಆಯ್ಕೆ ಮಾಡಲು ಸಾರ್ವತ್ರಿಕ ಚುನಾವಣೆಗಳು ಈ ವರ್ಷ ಏಪ್ರಿಲ್-ಮೇ ತಿಂಗಳಲ್ಲಿ ನಡೆಯುವ ಸಾಧ್ಯತೆಯಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸಿಎಂ ಸಿದ್ದರಾಮಯ್ಯ ಯಾವತ್ತೂ ತಾಳ್ಮೆ ಕಳೆದುಕೊಳ್ಳಲ್ಲ: ಸಚಿವ ತಂಗಡಿಗಿ
ಸಿಎಂ ಸಿದ್ದರಾಮಯ್ಯ ಯಾವತ್ತೂ ತಾಳ್ಮೆ ಕಳೆದುಕೊಳ್ಳಲ್ಲ: ಸಚಿವ ತಂಗಡಿಗಿ
ಪಾಕ್ ಪರ ಘೋಷಣೆ ಕೂಗುವವರ ನಿರ್ನಾಮಕ್ಕಾಗಿ ಹೋಮ ಯಜ್ಞ: ಮುತಾಲಿಕ್
ಪಾಕ್ ಪರ ಘೋಷಣೆ ಕೂಗುವವರ ನಿರ್ನಾಮಕ್ಕಾಗಿ ಹೋಮ ಯಜ್ಞ: ಮುತಾಲಿಕ್
ಮಹಿಳೆಯರು ಬಿಜೆಪಿ ಶಾಲು ಹೊದ್ದಿದ್ದರೆ ಭದ್ರತಾ ಲೋಪ ಗೊತ್ತಾಗುತಿತ್ತು: ಸಚಿವ
ಮಹಿಳೆಯರು ಬಿಜೆಪಿ ಶಾಲು ಹೊದ್ದಿದ್ದರೆ ಭದ್ರತಾ ಲೋಪ ಗೊತ್ತಾಗುತಿತ್ತು: ಸಚಿವ
ವ್ಯಾನಿಟಿ ಬ್ಯಾಗ್​ನಲ್ಲಿ ಚೂರಿ ಇರಲಿ: ಕಲ್ಲಡ್ಕ ಪ್ರಭಾಕರ ಭಟ್
ವ್ಯಾನಿಟಿ ಬ್ಯಾಗ್​ನಲ್ಲಿ ಚೂರಿ ಇರಲಿ: ಕಲ್ಲಡ್ಕ ಪ್ರಭಾಕರ ಭಟ್
ಸಿದ್ದರಾಮಯ್ಯ ಏನು ಮಾಡುತ್ತಾರೋ ಎಂಬ ಭಯವಂತೂ ಇದೆ: ನಾಡಗೌಡ
ಸಿದ್ದರಾಮಯ್ಯ ಏನು ಮಾಡುತ್ತಾರೋ ಎಂಬ ಭಯವಂತೂ ಇದೆ: ನಾಡಗೌಡ
ದೆವ್ವದ ಹಾಡಿಗೆ ಭಯಬಿದ್ದ ಸರಿಗಮಪ ಮನೋಜ್; ಇಲ್ಲಿದೆ ಫನ್ನಿ ವಿಡಿಯೋ
ದೆವ್ವದ ಹಾಡಿಗೆ ಭಯಬಿದ್ದ ಸರಿಗಮಪ ಮನೋಜ್; ಇಲ್ಲಿದೆ ಫನ್ನಿ ವಿಡಿಯೋ
ರಾಹುಲ್​ಗೆ ತಿರುಗೇಟು ನೀಡಲು ಪ್ಲ್ಯಾನ್ ರೂಪಿಸಿದ್ದ ವಿರಾಟ್ ಕೊಹ್ಲಿ
ರಾಹುಲ್​ಗೆ ತಿರುಗೇಟು ನೀಡಲು ಪ್ಲ್ಯಾನ್ ರೂಪಿಸಿದ್ದ ವಿರಾಟ್ ಕೊಹ್ಲಿ
14 ವರ್ಷದ ವೈಭವ್​ನ 11 ರಾಕೆಟ್ ಸಿಕ್ಸ್​ಗಳು: ವಿಡಿಯೋ ವೀಕ್ಷಿಸಿ
14 ವರ್ಷದ ವೈಭವ್​ನ 11 ರಾಕೆಟ್ ಸಿಕ್ಸ್​ಗಳು: ವಿಡಿಯೋ ವೀಕ್ಷಿಸಿ
VIDEO: ಅತ್ಯಂತ ಕೆಟ್ಟ ದಾಖಲೆ: ಒಂದೇ ಓವರ್​ನಲ್ಲಿ 30 ರನ್ ಚಚ್ಚಿದ ವೈಭವ್
VIDEO: ಅತ್ಯಂತ ಕೆಟ್ಟ ದಾಖಲೆ: ಒಂದೇ ಓವರ್​ನಲ್ಲಿ 30 ರನ್ ಚಚ್ಚಿದ ವೈಭವ್
ಬೆಂಗಳೂರು ವಿಮಾನ ನಿಲ್ದಾಣ ರಸ್ತೆಯಲ್ಲಿ ಸರಣಿ ಅಪಘಾತ, 4 ಕಾರುಗಳು ಜಖಂ
ಬೆಂಗಳೂರು ವಿಮಾನ ನಿಲ್ದಾಣ ರಸ್ತೆಯಲ್ಲಿ ಸರಣಿ ಅಪಘಾತ, 4 ಕಾರುಗಳು ಜಖಂ