ನಾಯಿಗಳು ಬಿಜೆಪಿಗೆ ಹೇಗೆ ಹಾನಿ ಮಾಡಿವೆ?: ವೈರಲ್ ವಿಡಿಯೊ ಬಗ್ಗೆ ರಾಹುಲ್ ಗಾಂಧಿ ಪ್ರತಿಕ್ರಿಯೆ

ಜಾರ್ಖಂಡ್‌ನಲ್ಲಿ ನಡೆಯುತ್ತಿರುವ ಭಾರತ್ ಜೋಡೋ ನ್ಯಾಯ್ ಯಾತ್ರೆಯಲ್ಲಿ ನಾಯಿಗೆ ಬಿಸ್ಕೆಟ್ ನೀಡಿದ ವೈರಲ್ ವಿಡಿಯೊ ಬಗ್ಗೆ ಪ್ರತಿಕ್ರಿಯಿಸಿದ ರಾಹುಲ್ ಗಾಂಧಿ, ಆ ನಾಯಿ ಹೆದರಿತ್ತು, ನಡುಗುತ್ತಿತ್ತು. ನಾನು ಅದಕ್ಕೆ ತಿನ್ನಿಸಲು ಪ್ರಯತ್ನಿಸಿದಾಗ ಅದು ಹೆದರಿತು. ಹಾಗಾಗಿ ನಾನು ನಾಯಿಯ ಮಾಲೀಕರಿಗೆ ಬಿಸ್ಕೆಟ್‌ಗಳನ್ನು ನೀಡಿದ್ದೇನೆ. ಆಮೇಲೆ ನಾಯಿ ಅವರ  ಕೈಯಿಂದ ಬಿಸ್ಕೆಟ್ ತಿಂದಿತು. ಸಮಸ್ಯೆ ಏನು ಎಂದು ನನಗೆ ಅರ್ಥವಾಗುತ್ತಿಲ್ಲ ಎಂದಿದ್ದಾರೆ.

ನಾಯಿಗಳು ಬಿಜೆಪಿಗೆ ಹೇಗೆ ಹಾನಿ ಮಾಡಿವೆ?: ವೈರಲ್ ವಿಡಿಯೊ ಬಗ್ಗೆ ರಾಹುಲ್ ಗಾಂಧಿ ಪ್ರತಿಕ್ರಿಯೆ
ರಾಹುಲ್ ಗಾಂಧಿ
Follow us
|

Updated on:Feb 06, 2024 | 5:05 PM

ದೆಹಲಿ ಫೆಬ್ರುವರಿ 06: ಜಾರ್ಖಂಡ್‌ನಲ್ಲಿ (Jharkhand) ನಡೆಯುತ್ತಿರುವ ಭಾರತ್ ಜೋಡೋ ನ್ಯಾಯ್ ಯಾತ್ರೆ (Bharat Jodo Nyay Yatra) ವೇಳೆ ನಾಯಿಮರಿಗೆ ಬಿಸ್ಕೆಟ್ ತಿನ್ನಿಸುತ್ತಿರುವ ವಿಡಿಯೊ ವೈರಲ್ ಆಗಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಪ್ರತಿಕ್ರಿಯೆ ನೀಡಿದ್ದಾರೆ. ರಾಹುಲ್ ಗಾಂಧಿ ನಾಯಿಮರಿಯನ್ನು ಮುದ್ದಿಸುತ್ತಿರುವುದು ಮತ್ತು ನಂತರ ಅದಕ್ಕೆ ಬಿಸ್ಕೆಟ್ ತಿನ್ನಿಸುವುದನ್ನು ವಿಡಿಯೊ ತೋರಿಸಿದೆ. ರಾಹುಲ್ ನಾಯಿಮರಿಗೆ ಬಿಸ್ಕೆಟ್ ನೀಡಿದಾಗ ಅದು ತಿನ್ನಲು ನಿರಾಕರಿಸುತ್ತದೆ. ಆಗ ರಾಹುಲ್ ತನ್ನೊಂದಿಗೆ ಮಾತನಾಡುತ್ತಿದ್ದ ವ್ಯಕ್ತಿಯ ಕೈಗೆ ಬಿಸ್ಕೆಟ್‌ಗಳನ್ನು ನೀಡಿದರು. ಈ ವಿಡಿಯೊ ಮೂಲಕ ಕಾಂಗ್ರೆಸ್ ನಾಯಕರನ್ನು ಬಿಜೆಪಿ ಗುರಿಯಾಗಿಸಿದ್ದು, ಅವರು ತಮ್ಮ ಬೆಂಬಲಿಗರನ್ನು ನಾಯಿಗಳಂತೆ ನಡೆಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಅಂದ ಹಾಗೆ ವಿಡಿಯೊದಲ್ಲಿರುವ ವ್ಯಕ್ತಿ ನಿಜವಾಗಿಯೂ ನಾಯಿಯ ಮಾಲೀಕರು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. “ನಾಯಿ ಹೆದರಿತ್ತು, ನಡುಗುತ್ತಿತ್ತು. ನಾನು ಅದಕ್ಕೆ ತಿನ್ನಿಸಲು ಪ್ರಯತ್ನಿಸಿದಾಗ ಅದು ಹೆದರಿತು. ಹಾಗಾಗಿ ನಾನು ನಾಯಿಯ ಮಾಲೀಕರಿಗೆ ಬಿಸ್ಕೆಟ್‌ಗಳನ್ನು ನೀಡಿದ್ದೇನೆ. ಆಮೇಲೆ ನಾಯಿ ಅವರ  ಕೈಯಿಂದ ಬಿಸ್ಕೆಟ್ ತಿಂದಿತು. ಸಮಸ್ಯೆ ಏನು ಎಂದು ನನಗೆ ಅರ್ಥವಾಗುತ್ತಿಲ್ಲ ಎಂದಿದ್ದಾರೆ. ವಿಡಿಯೋದಲ್ಲಿರುವ ವ್ಯಕ್ತಿ ಕಾಂಗ್ರೆಸ್ ಕಾರ್ಯಕರ್ತ ಎಂದು ಹೇಳಿರುವ ಬಿಜೆಪಿ ಆರೋಪದ ಬಗ್ಗೆ ಕೇಳಿದ ಪ್ರಶ್ನೆಗೆ, “ಇಲ್ಲ, ಅವರು ಕಾಂಗ್ರೆಸ್ ಕಾರ್ಯಕರ್ತನಾಗಿರಲಿಲ್ಲ. ಬಿಜೆಪಿಗೆ ನಾಯಿಗಳ ಮೇಲಿನ ವ್ಯಾಮೋಹ ನನಗೆ ಅರ್ಥವಾಗುತ್ತಿಲ್ಲ. ನಾಯಿಗಳು ಅವರಿಗೆ ಹೇಗೆ ಹಾನಿ ಮಾಡಿದೆ? ಎಂದು ಕಾಂಗ್ರೆಸ್ ನಾಯಕ ಪ್ರಶ್ನಿಸಿದ್ದಾರೆ.

ಇದಕ್ಕೂ ಮುನ್ನ ಹಲವು ಬಿಜೆಪಿ ನಾಯಕರು ವೈರಲ್ ವಿಡಿಯೊ ಕುರಿತು ಕಾಂಗ್ರೆಸ್ ಸಂಸದರನ್ನು ಗುರಿಯಾಗಿಸಿಕೊಂಡಿದ್ದರು. ಅವರಲ್ಲಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಕೂಡ ಇದ್ದರು. ಈ ಹಿಂದೆ ಕಾಂಗ್ರೆಸ್‌ನಲ್ಲಿದ್ದ ಶರ್ಮಾ ಇತರ ಹಿರಿಯ ಕಾಂಗ್ರೆಸ್ ನಾಯಕರು ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದ ಘಟನೆಯನ್ನು ಆಗಾಗ್ಗೆ ವಿವರಿಸುತ್ತಾರೆ.

ಗಾಂಧಿಯವರ ಮುದ್ದಿನ ನಾಯಿ ಪಿಡಿ ಪ್ಲೇಟ್‌ನಿಂದ ಬಿಸ್ಕೆಟ್‌ಗಳನ್ನು ತಿನ್ನುತ್ತದೆ. ನಂತರ ಕಾಂಗ್ರೆಸ್ ನಾಯಕರಿಗೆ ಅದೇ ಪ್ಲೇಟ್‌ನಿಂದ ಬಿಸ್ಕೆಟ್ ನೀಡಲಾಯಿತು ಎಂದು ಶರ್ಮಾ ಅನೇಕ ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ. ಈ ಸಂದರ್ಶನಗಳಲ್ಲಿ, ಶರ್ಮಾ ಅವರು ಪಕ್ಷದ ಪ್ರಮುಖ ವಿಷಯಗಳ ಬಗ್ಗೆ ಗಾಂಧಿ ಗಂಭೀರವಾಗಿಲ್ಲ ಎಂಬ ಅವರ ಹೇಳಿಕೆಯನ್ನು ಹೆಚ್ಚಿಸಲು ಆಪಾದಿತ ಘಟನೆಯನ್ನು ಬಳಸಿದ್ದಾರೆ.

ಇದನ್ನೂ  ಓದಿ: ನಾಯಿ ತಿನ್ನಲಿಲ್ಲ ಎಂದು ಅದೇ ಬಿಸ್ಕತ್ತನ್ನು ತನ್ನ ಕಾರ್ಯಕರ್ತನಿಗೆ ಕೊಟ್ಟ ರಾಹುಲ್ ಗಾಂಧಿ, ವಿಡಿಯೋ ವೈರಲ್

ನಾಯಿಮರಿ ವಿಡಿಯೊದಲ್ಲಿ ಅವರನ್ನು ಟ್ಯಾಗ್ ಮಾಡಿದ ‘X’ ಬಳಕೆದಾರರಿಗೆ ಪ್ರತಿಕ್ರಿಯಿಸಿದ ಶರ್ಮಾ. ರಾಹುಲ್ ಗಾಂಧಿ ಮಾತ್ರವಲ್ಲದೆ ಇಡೀ ಕುಟುಂಬಕ್ಕೆ ನನಗೆ ಆ ಬಿಸ್ಕೆಟ್ ತಿನಿಸಲು ಸಾಧ್ಯವಾಗಲಿಲ್ಲ. ನಾನು ಹೆಮ್ಮೆಯ ಅಸ್ಸಾಮಿ ಮತ್ತು ಭಾರತೀಯ, ನಾನು ತಿನ್ನಲು ನಿರಾಕರಿಸಿದ್ದೇನೆ ಮತ್ತು ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದೇನೆ” ಎಂದು ಅವರು ಹೇಳಿದರು. ಮತ್ತೋರ್ವ ಬಿಜೆಪಿ ನಾಯಕ ಅಮಿತ್ ಮಾಳವಿಯಾ, “ರಾಜಕುಮಾರ ಪಕ್ಷದ ಕಾರ್ಯಕರ್ತರನ್ನು ನಾಯಿಗಳಂತೆ ನಡೆಸಿಕೊಂಡಾಗ ಪಕ್ಷವು ಅಳಿದುಹೋಗುವುದು ಸಹಜ” ಎಂದು ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:05 pm, Tue, 6 February 24

ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು