ಹೈದರಾಬಾದ್: ಅತ್ಯಾಚಾರದಿಂದ ತಪ್ಪಿಸಿಕೊಳ್ಳಲು ಚಲಿಸುತ್ತಿದ್ದ ರೈಲಿನಿಂದ ಹಾರಿದ ಯುವತಿ

|

Updated on: Mar 24, 2025 | 12:42 PM

ಅತ್ಯಾಚಾರದಿಂದ ತಪ್ಪಿಸಿಕೊಳ್ಳಲು ಯುವತಿಯೊಬ್ಬಳು ಚಲಿಸುತ್ತಿರುವ ರೈಲಿನಿಂದ ಕೆಳಗೆ ಹಾರಿರುವ ಘಟನೆ ಹೈದರಾಬಾದ್​ನ ಕೊಂಪಲ್ಲಿಯಲ್ಲಿ ನಡೆದಿದೆ. ಇತ್ತೀಚಿನ ದಿನಗಳಲ್ಲಿ ರೈಲುಗಳು ಕೂಡ ಹೆಣ್ಣುಮಕ್ಕಳಿಗೆ ಸುರಕ್ಷಿತವಾಗಿಲ್ಲ ಎನ್ನುವ ಭಾವವನ್ನು ಹುಟ್ಟುಹಾಕುತ್ತಿದೆ. ಮಾರ್ಚ್​ 22ರಂದು ಶನಿವಾರ ರಾತ್ರಿ 8.15 ಸುಮಾರಿಗೆ ಈ ಘಟನೆ ನಡೆದಿದೆ. ಯುವತಿಗೆ ತೀವ್ರ ಗಾಯಗಳಾಗಿದ್ದು, ತೀವ್ರ ರಕ್ತಸ್ರಾವವಾಗಿದೆ.

ಹೈದರಾಬಾದ್:  ಅತ್ಯಾಚಾರದಿಂದ ತಪ್ಪಿಸಿಕೊಳ್ಳಲು ಚಲಿಸುತ್ತಿದ್ದ ರೈಲಿನಿಂದ ಹಾರಿದ ಯುವತಿ
ರೈಲು
Image Credit source: unsplash
Follow us on

ಹೈದರಾಬಾದ್, ಮಾರ್ಚ್​ 24: ಅತ್ಯಾಚಾರದಿಂದ ತಪ್ಪಿಸಿಕೊಳ್ಳಲು ಯುವತಿಯೊಬ್ಬಳು ಚಲಿಸುತ್ತಿರುವ ರೈಲಿನಿಂದ ಕೆಳಗೆ ಹಾರಿರುವ ಘಟನೆ ಹೈದರಾಬಾದ್​ನ ಕೊಂಪಲ್ಲಿಯಲ್ಲಿ ನಡೆದಿದೆ. ಇತ್ತೀಚಿನ ದಿನಗಳಲ್ಲಿ ರೈಲುಗಳು ಕೂಡ ಹೆಣ್ಣುಮಕ್ಕಳಿಗೆ ಸುರಕ್ಷಿತವಾಗಿಲ್ಲ ಎನ್ನುವ ಭಾವವನ್ನು ಹುಟ್ಟುಹಾಕುತ್ತಿದೆ. ಮಾರ್ಚ್​ 22ರಂದು ಶನಿವಾರ ರಾತ್ರಿ 8.15 ಸುಮಾರಿಗೆ ಈ ಘಟನೆ ನಡೆದಿದೆ. ಯುವತಿಗೆ ತೀವ್ರ ಗಾಯಗಳಾಗಿದ್ದು, ಹೆಚ್ಚಿನ ರಕ್ತಸ್ರಾವವಾಗಿದೆ.

ಆಕೆ ಹೈದರಾಬಾದ್‌ನಲ್ಲಿ ಖಾಸಗಿ ಉದ್ಯೋಗಿಯಾಗಿದ್ದು, ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯವರು. ಮಾರ್ಚ್ 22 ರಂದು ಮಧ್ಯಾಹ್ನ 3 ಗಂಟೆಗೆ ತನ್ನ ಮೊಬೈಲ್ ಫೋನ್ ಡಿಸ್ಪ್ಲೇ ಸರಿ ಮಾಡಿಸಲು ಮೆಡ್ಚಲ್‌ನಿಂದ ಸಿಕಂದರಾಬಾದ್‌ಗೆ ಪ್ರಯಾಣಿಸಿದ್ದೆ ಎಂದು ಅವರು ಹೇಳಿದ್ದಾರೆ. ಕೆಲಸ ಮುಗಿಸಿ ಸಿಕಂದರಾಬಾದ್ ರೈಲು ನಿಲ್ದಾಣಕ್ಕೆ ಹೋಗಿ, ಮೆಡ್ಚಲ್‌ಗೆ ಸಾಮಾನ್ಯ ಟಿಕೆಟ್ ಖರೀದಿಸಿ, ಸಂಜೆ 7.15 ಕ್ಕೆ  ಎಂಎಂಟಿಎಸ್ ರೈಲಿನ ಮಹಿಳಾ ಕೋಚ್‌ನಲ್ಲಿ ಹತ್ತಿದ್ದರು.

ಪ್ರಯಾಣದ ಸಮಯದಲ್ಲಿ, ರಾತ್ರಿ 8.15 ರ ಸುಮಾರಿಗೆ, ಅಲ್ವಾಲ್ ರೈಲು ನಿಲ್ದಾಣದಲ್ಲಿ ಇಬ್ಬರು ಮಹಿಳಾ ಪ್ರಯಾಣಿಕರು ರೈಲಿನಿಂದ ಇಳಿದಿದ್ದಾರೆ ಎಂದು ಸಂತ್ರಸ್ತೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸುಮಾರು 25 ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿ ತನ್ನ ಬಳಿಗೆ ಕೆಟ್ಟದಾಗಿ ವರ್ತಿಸಿದ್ದ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ. ಆಕೆಯ ನಿರಾಕರಣೆಯ ಹೊರತಾಗಿಯೂ, ಅವನು ತನ್ನ ಮೇಲೆ ಬಲವಂತವಾಗಿ ದಾಳಿ ಮಾಡಲು ಪ್ರಯತ್ನಿಸಿದ್ದ. ತಪ್ಪಿಸಿಕೊಳ್ಳಲು, ಆಕೆ ಚಲಿಸುವ ರೈಲಿನಿಂದ ಹಾರಿದ ಪರಿಣಾಮ , ತಲೆ, ಗಲ್ಲ, ಬಲಗೈ ಮತ್ತು ಸೊಂಟಕ್ಕೆ ಪೆಟ್ಟುಬಿದ್ದು ತೀವ್ರ ರಕ್ತಸ್ರಾವವಾಗಿದೆ.

ಮತ್ತಷ್ಟು ಓದಿ: ತಮಿಳುನಾಡು: ಗರ್ಭಿಣಿಗೆ ಲೈಂಗಿಕ ಕಿರುಕುಳ, ಚಲಿಸುತ್ತಿದ್ದ ರೈಲಿನಿಂದ ಹೊರಗೆಸೆದ ದುರುಳರು

ಸ್ಥಳೀಯರು ಕೂಡಲೇ ಆ್ಯಂಬ್ಯುಲೆನ್ಸ್‌ಗೆ ಕರೆ ಮಾಡಿದರು, ಮತ್ತು ಆಕೆಯನ್ನು ಚಿಕಿತ್ಸೆಗಾಗಿ ಸಿಕಂದರಾಬಾದ್‌ನ ಗಾಂಧಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಹಲ್ಲೆಕೋರನನ್ನು ಮತ್ತೆ ನೋಡಿದರೆ ಅವನನ್ನು ಗುರುತಿಸಲು ಸಾಧ್ಯವಾಗುತ್ತದೆ ಎಂದು ಸಂತ್ರಸ್ತೆ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ.

ಇದೇ ಮಾದರಿಯ ಪ್ರಕರಣ ಕೇರಳದಲ್ಲಿ ಫೆಬ್ರವರಿ 1, 2011 ರಂದು ನಡೆದಿತ್ತು. ಎರ್ನಾಕುಲಂ-ಶೋರನೂರ್ ರೈಲಿನಲ್ಲಿ 23 ವರ್ಷದ ಸೌಮ್ಯಾಳನ್ನು ಗೋವಿಂದಸಾಮಿ ಅತ್ಯಾಚಾರ ಮಾಡಿ ಕೊಲೆ ಮಾಡಿದ್ದ.

ಅದೇ ರೀತಿ, ಫೆಬ್ರವರಿ 6, 2025 ರಂದು 36 ವರ್ಷದ ಗರ್ಭಿಣಿಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದರು ಅದನ್ನು ವಿರೋಧಿಸಿದಅಗ ಆಕೆಯನ್ನು ಚಲಿಸುವ ರೈಲಿನಿಂದ ಹೊರಗೆ ತಳ್ಳಿದ್ದಳು, ನಂತರ ಆಕೆಗೆ ಗರ್ಭಪಾತವಾಗಿತ್ತು. ಕೆಲವು ತಿಂಗಳುಗಳ ಹಿಂದೆ ಮಹಿಳೆಯರಿಗೆ ಮೀಸಲಿರುವವ ಬೋಗಿಗೆ ಕೆಲವರು ಬಂದು ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯವೆಸಗಿರುವ ಘಟನೆಯೂ ನಡೆದಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ