ಬೆಂಗಳೂರು: ಮುಂದಿನ ವರ್ಷ ದೇಶದಲ್ಲಿ ಮೊದಲ ಹೈಡ್ರೋಜನ್ ರೈಲು (hydrogen train) ಸಂಚರಿಸಲಿದೆ. ಇನ್ನು ಬುಲೆಟ್ ರೈಲು ಬೋಗಿಗಳ ನಿರ್ಮಾಣ ವೇಗಗತಿಯಲ್ಲಿ ಸಾಗುತ್ತಿದ್ದು, ಶೀಘ್ರವೇ ಮುಂಬೈ-ಅಹ್ಮದಾಬಾದ್ ನಡುವೆ ಮೊದಲ ಬುಲೆಟ್ ರೈಲು (bullet train) ಸಂಚಾರ ಮಾಡಲಿದೆ ಕೇಂದ್ರ ರೈಲ್ವೇ ಮತ್ತು ಐಟಿ ಇಲಾಖೆ ಸಚಿವ ಅಶ್ವಿನ್ ವೈಷ್ಣವ್(ashwini vaishnaw) ಹೇಳಿದರು.
ಇದನ್ನೂ ಓದಿ: ಗ್ರಾ.ಪಂ. ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರ ಗೌರವಧನ ಹೆಚ್ಚಳ: ರಾಜ್ಯ ಸರ್ಕಾರ ಆದೇಶ
ಇಂದು (ಡಿಸೆಂಬರ್ 18) ಬೆಂಗಳೂರಿನ ವಸಂತನಗರದ ಖಾಸಗಿ ಹೋಟೆಲ್ನಲ್ಲಿ ನಡೆದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅಶ್ವಿನ್ ವೈಷ್ಣವ್, ಬುಲೆಟ್ ರೈಲು ಬೋಗಿಗಳ ನಿರ್ಮಾಣ ವೇಗಗತಿಯಲ್ಲಿ ಸಾಗುತ್ತಿದೆ. ಇದುವರೆಗೆ 116 ಕಿ.ಮೀ ವರೆಗೆ ಬುಲೆಟ್ ಹಳಿ ನಿರ್ಮಾಣವಾಗಿದ್ದು, ಶೀಘ್ರವೇ ಮುಂಬೈ-ಅಹ್ಮದಾಬಾದ್ ನಡುವೆ ಮೊದಲ ಬುಲೆಟ್ ರೈಲು ಸಂಚಾರ ಮಾಡಲಿದೆ. ಬುಲೆಟ್ ರೈಲಿನ ವೇಗ ಗಂಟೆಗೆ 320 ಕಿ.ಮೀ. ಇರಲಿದೆ ಎಂದು ತಿಳಿಸಿದರು.
ವಂದೇ ಭಾರತ್ ಸದ್ಯ ತಿಂಗಳಿಗೆ ಮೂರು ರೈಲು ಬೋಗಿಗಳ ನಿರ್ಮಾಣ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಆರು ಬೋಗಿಗಳ ನಿರ್ಮಾಣ ಮಾಡುವ ಗುರಿ ಹೊಂದಲಾಗಿದ್ದು, 28% ವರೆಗೆ ರೈಲ್ವೇ ವಲಯ ತನ್ನ ಮಾರುಕಟ್ಟೆ ಪಾಲು ಪಡೆಯಲಿದೆ ಎಂದು ಹೇಳಿದ ಅಶ್ವಿನ್ ವೈಷ್ಣವ್ ಅವರು, 2023ರ ಡಿಸೆಂಬರ್ ಒಳಗೆ ದೇಶದಲ್ಲಿ ಮೊದಲ ಹೈಡ್ರೋಜನ್ ರೈಲು ಸಂಚರಿಸಲಿದೆ ಎಂದರು.
ಆನ್ಲೈನ್ ಗೇಮ್ಗಳ ಜಾಹೀರಾತು ನಿರ್ಬಂಧಕ್ಕೆ ಒತ್ತಾಯ ಕೇಳಿಬರುತ್ತಿರುವ ಬಗ್ಗೆ ಮಾತನಾಡಿದ ಅಶ್ವಿನಿ ವೈಷ್ಣವ್, ಎಲ್ಲಾ ರಾಜ್ಯಗಳೂ ಆನ್ಲೈನ್ ಗೇಮ್ ನಿರ್ಬಂಧಕ್ಕೆ ಆಸಕ್ತಿ ತೋರಿವೆ. ಆನ್ಲೈನ್ ಗೇಮ್ ನಿರ್ಬಂಧ ಬಗ್ಗೆ ಕೇಂದ್ರ ಮಟ್ಟದಲ್ಲೂ ಚರ್ಚೆ ಆಗುತ್ತಿದೆ. ಹೊಸ ಕಾನೂನು ಜಾರಿ ಮಾಡುವ ನಿಟ್ಟಿನಲ್ಲಿ ಚರ್ಚೆ ನಡೆಯುತ್ತಿದ್ದು, ಈ ಬಗ್ಗೆ ಸದ್ಯದಲ್ಲೇ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.
ಇನ್ನು ಇದರ ಜೊತೆ ಪ್ರಮುಖವಾಗಿ ಕರ್ನಾಟಕದ 43 ರೈಲ್ವೇ ನಿಲ್ದಾಣಗಳನ್ನು ಮೇಲ್ದರ್ಜೆಗೆ ಏರಿಸವುದಾಗಿ ಹೇಳಿದರು. ಈ 43 ರೈಲ್ವೇ ನಿಲ್ದಾಣಗಳಲ್ಲಿ ಯಶವಂತಪುರ ಮತ್ತು ಕಂಟೋನ್ಮೆಂಟ್ ರೈಲ್ವೆ ನಿಲ್ದಾಣ ಒಳಗೊಂಡಿವೆ.
ಬೆಂಗಳೂರು ಮಹಾನಗರಕ್ಕೆ ಹೊರ ವರ್ತೂಲ ರೈಲು ಟೆಂಡರ್ ಎಲ್ ಆ್ಯಂಡ್ ಟಿ ಕಂಪನಿ ತೆಗೆದುಕೊಂಡಿದ್ದು, ಅಧಿಕೃತವಾಗಿ ಸರ್ಕಾರದಿಂದ ಹಸ್ತಾಂತರ ಮಾಡಲಾಗುವುದು ಎಂದು ತಿಳಿಸಿದರು.
ಮುಂದಿನ ದೀಪಾವಳಿ ವೇಳೆಗೆ ದೇಶದ ಎಲ್ಲಾ ಪ್ರಮುಖ ನಗರಗಳಲ್ಲಿ 5ಜಿ ಸೇವೆ ಲಭ್ಯವಾಗಲಿದೆ ಎಂದರು.
ಮಹತ್ವಾಕಾಂಕ್ಷೆಯ ತಲಚೇರಿ – ವಯನಾಡ್-ಮೈಸೂರು ರೈಲ್ವೇ ಯೋಜನೆಗೆ ಕೇಂದ್ರ ರೈಲ್ವೇ ಸಚಿವ ಅಶ್ವಿನ ವೈಷ್ಣವ್ ಒಪ್ಪಿಗೆ ಸೂಚಿಸಿಲ್ಲ. ಇನ್ನು ಇದೇ ವೇಳೆ ಡಿಜಿಟಲ್ ಇಂಡಿಯಾ ಬಿಲ್ ಶ್ರೀಘ್ರದಲ್ಲಿ ಜಾರಿಗೆ ತರುವುದಾಗಿ ಹೇಳಿದರು.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 6:11 pm, Sun, 18 December 22