AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಶ್ಮೀರ ಪಂಡಿತರಿಗೆ ಭಯೋತ್ಪಾದರಿಂದ ಮತ್ತೆ ಜೀವ ಬೆದರಿಕೆ, ಹಿಟ್ ಲಿಸ್ಟ್ ಬಿಡುಗಡೆ

ಪಿಎಂ ಪ್ಯಾಕೇಜ್‌ಗಳ ಭಟರು ಎಂದು ಸಹಾನುಭೂತಿ ಹೊಂದಲು ಪ್ರಯತ್ನಿಸುವ ವಲಸಿಗ ಪಂಡಿತರೆಲ್ಲರಿಗೂ ಈ ಪಟ್ಟಿಯು ಕಣ್ಣು ತೆರೆಸುವಂತಿರಬೇಕು ಎಂದು ಟಿಆರ್‌ಎಫ್‌ನ ಬೆದರಿಕೆ ಪತ್ರದಲ್ಲಿ  ಹೇಳಿದೆ.

ಕಾಶ್ಮೀರ ಪಂಡಿತರಿಗೆ ಭಯೋತ್ಪಾದರಿಂದ ಮತ್ತೆ ಜೀವ ಬೆದರಿಕೆ, ಹಿಟ್ ಲಿಸ್ಟ್ ಬಿಡುಗಡೆ
ಪ್ರಾತಿನಿಧಿಕ ಚಿತ್ರ
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on: Dec 18, 2022 | 7:57 PM

Share

ಲಷ್ಕರ್-ಎ-ತೊಯ್ಬಾದ  (Lashkar-e-Taiba)ಭಾರತೀಯ ಉಪಶಾಖೆ ದಿ ರೆಸಿಸ್ಟೆನ್ಸ್ ಫೋರ್ಸ್ (TRF) ಕಾಶ್ಮೀರಿ ಪಂಡಿತರಿಗೆ (Kashmiri Pandits) ಹೊಸ ಬೆದರಿಕೆಯನ್ನು ನೀಡಿದೆ. ಕಾಶ್ಮೀರಿ ಸಮುದಾಯವು ‘ಯಾವಾಗಲೂ ಬಲಿಪಶು ಕಾರ್ಡ್ ಅನ್ನು ಆಡುತ್ತದೆ’ ಎಂದು ಹೇಳಿದ ಉಗ್ರ ಗುಂಪು ಜಮ್ಮು ಮತ್ತು ಕಾಶ್ಮೀರದ ಆರು ಆಡಳಿತ ಅಧಿಕಾರಿಗಳನ್ನು ಹಿಟ್ ಲಿಸ್ಟ್ ನಲ್ಲಿ ಹಾಕಿದ್ದು’ಪಿಎಂ ಪ್ಯಾಕೇಜ್ ಭಟರು’ ಎಂದು ಗುರುತಿಸಿ ಬೆದರಿಕೆಯೊಡ್ಡಿದ್ದಾರೆ. ಪಿಎಂ ಪ್ಯಾಕೇಜ್‌ಗಳ ಭಟರು ಎಂದು ಸಹಾನುಭೂತಿ ಹೊಂದಲು ಪ್ರಯತ್ನಿಸುವ ವಲಸಿಗ ಪಂಡಿತರೆಲ್ಲರಿಗೂ ಈ ಪಟ್ಟಿಯು ಕಣ್ಣು ತೆರೆಸುವಂತಿರಬೇಕು ಎಂದು ಟಿಆರ್‌ಎಫ್‌ನ ಬೆದರಿಕೆ ಪತ್ರದಲ್ಲಿ  ಹೇಳಿದೆ. ತನ್ನ ಪಟ್ಟಿಯಲ್ಲಿ ಹೇಳಿದ ಅಧಿಕಾರಿಗಳ ಇಲಾಖೆಗಳನ್ನು ಪಟ್ಟಿ ಮಾಡಿರುವ ದಿ ರೆಸಿಸ್ಟೆನ್ಸ್ ಫೋರ್ಸ್ ಮುಖ್ಯವಾಗಿ ಶಿಕ್ಷಣ ಇಲಾಖೆಯಲ್ಲಿ ನಿಯೋಜಿತವಾಗಿರುವ ಅಧಿಕಾರಿಗಳನ್ನು 1990ರ ದಶಕಗಲ್ಲಿ ಗುಪ್ತಚರ ಇಲಾಖೆ ದಾಳವಾಗಿ ಬಳಸಿದ್ದು ಈಗ ಅವರು ಸಂಘಿ ಅಜೆಂಡಾವನ್ನು ಪೂರೈಸುತ್ತಾರೆ ಎಂದಿದೆ. “ವಲಸಿಗ ಕಾಶ್ಮೀರ ಪಂಡಿತರ ಪಿಎಂ ಪ್ಯಾಕೇಜ್ ಭಟರ ಸಹಾನುಭೂತಿ ಹೊಂದಲು ಪ್ರಯತ್ನಿಸುವ ಎಲ್ಲರಿಗೂ ಈ ಪಟ್ಟಿಯು ಕಣ್ಣು ತೆರೆಸುವಂತಿರಬೇಕು” ಎಂದು ಪತ್ರದಲ್ಲಿ ಬರೆಯಲಾಗಿದೆ.”ಈ ಪಿಎಂ ಪ್ಯಾಕೇಜ್ ಭಟರು ದೆಹಲಿಗೆ ಸೇವೆ ಸಲ್ಲಿಸಲು ಮತ್ತು ಅವರು ಸೇವೆ ಸಲ್ಲಿಸುವ ಎಲ್ಲಾ ಇಲಾಖೆಗಳನ್ನು ಭಾರತೀಕರಣಗೊಳಿಸಲು ಸಹಿ ಮಾಡಿದ ಒಪ್ಪಂದದ ಪ್ರಕಾರ ತಮ್ಮ ಕೆಲಸವನ್ನು ಮಾಡುತ್ತಿದ್ದಾರೆ. 1990 ರ ದಶಕದ ಆರಂಭದಲ್ಲಿ ಅವರು ಐಬಿಯ ದಾಳಗಳಾಗಿದ್ದರು ಮತ್ತು ಈಗ ಅವರು ಸಂಘಿ ಅಜೆಂಡಾಕ್ಕೆ ಸೇವೆ ಸಲ್ಲಿಸುತ್ತಾರೆ. ಅವರಿಗೆ ಕರ್ತವ್ಯಗಳನ್ನು ನಿಗದಿಪಡಿಸಲಾಗಿದೆ. ಅವರ ಹುದ್ದೆಗಳನ್ನು ಲೆಕ್ಕಿಸದೆ ಅವರಿಗೆ ಕರ್ತವ್ಯಗಳನ್ನು ನಿಗದಿಪಡಿಸಲಾಗಿದೆ. ಈ ಪಟ್ಟಿಯು ಕೆಳ ದರ್ಜೆಯ ಕೆಲಸದಿಂದ ಹಿಡಿದು ಉನ್ನತ ಪ್ರೊಫೈಲ್‌ನ ಕೇರ್‌ಟೇಕರ್‌ ವರಗೆ ನಿಯೋಜಿಸಲಾಗಿದೆ ಎಂದು ಭಯೋತ್ಪಾದಕ ಸಂಘಟನೆಯು ಕಾಶ್ಮೀರಿ ಪಂಡಿತರಿಗೆ ನೀಡಿದ ಬೆದರಿಕೆಯಲ್ಲಿ ಹೇಳಿದೆ.

“ಇದು ಕೇವಲ ಒಂದೇ ಇಲಾಖೆ ಅಲ್ಲ ಆದರೆ ಎಲ್ಲಾ ಇಲಾಖೆಗಳಲ್ಲಿ ಈ ದೆಹಲಿ ಪ್ರಾಯೋಜಿತ ಏಜೆಂಟ್‌ಗಳನ್ನು ನೇಮಕ ಮಾಡಲಾಗುತ್ತದೆ” ಎಂದು ಅದು ಹೇಳಿದೆ.

ಇದನ್ನೂ ಓದಿ: ಹಿಜಾಬ್ ವಿರೋಧಿ ಪ್ರತಿಭಟನೆಗಳನ್ನು ಬೆಂಬಲಿಸಿದ್ದಕ್ಕಾಗಿ ಇರಾನ್​ನ ಖ್ಯಾತ ನಟಿ ತರನೇಹ್ ಅಲಿದೂಸ್ತಿ ಬಂಧನ

“ಪಟ್ಟಿ ತುಂಬಾ ದೊಡ್ಡದಾಗಿದೆ. ಶೀಘ್ರದಲ್ಲೇ ಈ ದೇಶದ್ರೋಹಿಗಳ ರಕ್ತಪಾತವಾಗುತ್ತದೆ. ಇಲ್ಲಿ ನಾವು ಒಂದು ವಿಷಯವನ್ನು ಸ್ಪಷ್ಟಪಡಿಸಲು ಬಯಸುತ್ತೇವೆ1990 ರ ದಶಕದಲ್ಲಿ ವಲಸೆ ಹೋಗದ ಮತ್ತು ಕಣಿವೆಯಲ್ಲಿಯೇ ಉಳಿದುಕೊಂಡಿರುವ ಕಾಶ್ಮೀರಿ ಪಂಡಿತರು ಚಿಂತಿಸಬೇಕಾಗಿಲ್ಲ” ಎಂದು ಟಿಆರ್​​ಎಫ್ ಹೇಳಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ