ಹಿಜಾಬ್ ವಿರೋಧಿ ಪ್ರತಿಭಟನೆಗಳನ್ನು ಬೆಂಬಲಿಸಿದ್ದಕ್ಕಾಗಿ ಇರಾನ್‌ನ ಖ್ಯಾತ ನಟಿ ತರನೇಹ್ ಅಲಿದೂಸ್ತಿ ಬಂಧನ
ನವೆಂಬರ್‌ನಲ್ಲಿ, ಅಲಿದೂಸ್ತಿ ಇಸ್ಲಾಮಿಕ್ ಹಿಜಾಬ್ ಧರಿಸದೇ Instagram ನಲ್ಲಿ ತಮ್ಮ ಚಿತ್ರವನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಅವರು ಪ್ರತಿಭಟನಾ ಚಳುವಳಿಗೆ ಬೆಂಬಲ ನೀಡಲು "ಮಹಿಳೆ, ಜೀವನ, ಸ್ವಾತಂತ್ರ್ಯ" ಎಂಬ ಫಲಕವನ್ನು ಹಿಡಿದಿದ್ದರು
ಟೆಹರಾನ್: ರಾಷ್ಟ್ರವ್ಯಾಪಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ವ್ಯಕ್ತಿಯೊಬ್ಬನ ಮರಣದಂಡನೆಯನ್ನು ಟೀಕಿಸಿದ ಕೆಲವು ದಿನಗಳ ನಂತರ ಇರಾನ್ (Iran) ಅಲ್ಲಿನ ಖ್ಯಾತ ನಟಿ ತರನೇಹ್ ಅಲಿದೂಸ್ತಿ (Taraneh Alidoosti) ಅವರನ್ನು ಬಂಧಿಸಿದೆ. ಸಿಎನ್ಎನ್ ವರದಿ ಪ್ರಕಾರ, ಹಿಜಾಬ್ ವಿರುದ್ಧ ಪ್ರತಿಭಟನೆ ನಡೆಸಿದ್ದಕ್ಕೆ ಡಿಸೆಂಬರ್ನಲ್ಲಿ ಮರಣದಂಡನೆಗೊಳಗಾಗಿರುವ ಮೊಹ್ಸೆನ್ ಶೇಕರಿಗೆ (Mohsen Shekari)ನೀಡಿದ ಶಿಕ್ಷೆಯನ್ನು ಅಲಿದೂಸ್ತಿ ಖಂಡಿಸಿದ್ದರು. ತರನೇಹ್ ಅಲಿದೂಸ್ತಿ ಅವರು ಆರೋಪಿಸಿದಕ್ಕೆ ಅವರ ಬಳಿ ಸಾಕ್ಷ್ಯಗಳಿಲ್ಲ ಎಂಬ ಕಾರಣಕ್ಕೆ ಬಂಧಿಸಲಾಯಿತು ಎಂದು ಫಾರ್ಸ್ ಸುದ್ದಿ ಸಂಸ್ಥೆಯನ್ನು ಉಲ್ಲೇಖಿಸಿ ಸಿಎನ್ಎನ್ ವರದಿ ಮಾಡಿದೆ. ನವೆಂಬರ್‌ನಲ್ಲಿ, ಅಲಿದೂಸ್ತಿ ಇಸ್ಲಾಮಿಕ್ ಹಿಜಾಬ್ ಧರಿಸದೇ Instagram ನಲ್ಲಿ ತಮ್ಮ ಚಿತ್ರವನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಅವರು ಪ್ರತಿಭಟನಾ ಚಳುವಳಿಗೆ ಬೆಂಬಲ ನೀಡಲು “ಮಹಿಳೆ, ಜೀವನ, ಸ್ವಾತಂತ್ರ್ಯ” ಎಂಬ ಫಲಕವನ್ನು ಹಿಡಿದಿದ್ದರು.ಶೆಕಾರಿಯ ಮರಣದಂಡನೆಯ ನಂತರ, ಮತ್ತೊಂದು ಪೋಸ್ಟ್‌ನಲ್ಲಿ ತರನೇಹ್ ಅಲಿದೂಸ್ತಿ “ನಿಮ್ಮ ಮೌನವು ದಬ್ಬಾಳಿಕೆ ಮತ್ತು ನಿರಂಕುಶಾಧಿಕಾರಿಗಳನ್ನು ಬೆಂಬಲಿಸುತ್ತದೆ. ಈ ರಕ್ತಪಾತವನ್ನು ವೀಕ್ಷಿಸುತ್ತಿರುವ ಮತ್ತು ಕ್ರಮ ತೆಗೆದುಕೊಳ್ಳದ ಪ್ರತಿಯೊಂದು ಅಂತರರಾಷ್ಟ್ರೀಯ ಸಂಸ್ಥೆಯು ಮಾನವೀಯತೆಗೆ ಅವಮಾನವಾಗಿದೆ ಎಂದು ಹೇಳಿದ್ದರು ಎಂದು ಸಿಎನ್‌ಎನ್ ವರದಿ ಮಾಡಿದೆ. ಅಂದಿನಿಂದ, Instagram ನಲ್ಲಿ ಅವರ ಖಾತೆಯನ್ನು ಅಳಿಸಲಾಗಿದೆ. ಅಲಿದೂಸ್ತಿ 2016 ರ ಆಸ್ಕರ್-ವಿಜೇತ ಚಲನಚಿತ್ರ “ದಿ ಸೇಲ್ಸ್‌ಮ್ಯಾನ್” ನಲ್ಲಿ ಕಾಣಿಸಿಕೊಂಡಿದ್ದು, ಹಲವಾರು ಜನಪ್ರಿಯ ಇರಾನಿನ ಟಿವಿ ಕಾರ್ಯಕ್ರಮಗಳಲ್ಲಿ ನಟಿಸಿದ್ದಾರೆ.
ಕೆಲವು ಸೆಲೆಬ್ರಿಟಿಗಳು ಸಾಕ್ಷ್ಯಾಧಾರಗಳಿಲ್ಲದೆ ಹಕ್ಕು ಸಾಧಿಸುತ್ತಾರೆ ಮತ್ತು ಪ್ರಚೋದನೆಗಳನ್ನು ಪ್ರಕಟಿಸುತ್ತಾರೆ ಮತ್ತು ಹೀಗಾಗಿ ಬಂಧಿಸಲಾಗಿದೆ ಎಂದು ಫಾರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿರುವುದಾಗಿ ಸಿಎನ್ಎನ್ ಹೇಳಿದೆ. ಸ್ಥಳೀಯ ಹಕ್ಕುಗಳ ಗುಂಪು ಆಗಿರುವ ಕಮಿಟಿ ಟು ಕೌಂಟರ್ ವೊಯಲೆನ್ಸ್ ಅಗೈನ್ಸ್ಟ್ ವುಮೆನ್ ಇನ್ ಇರಾನಿಯನ್ ಸಿನಿಮಾ, ಯಾವ ಸರ್ಕಾರಿ ಇಲಾಖೆಯು ಅಲಿದೂಸ್ತಿಯನ್ನು ಕಸ್ಟಡಿಗೆ ತೆಗೆದುಕೊಂಡಿದೆ ಎಂಬುದು ಸ್ಪಷ್ಟವಾಗಿಲ್ಲ ಎಂದು ಟ್ವೀಟ್ ನಲ್ಲಿ ಹೇಳಿದೆ.
ಇದನ್ನೂ ಓದಿ: ಈಜಿಪ್ಟ್: ಬಾಕಿಯಿದ್ದ ಹಣ ನೀಡಲು ಮಹಿಳೆ ತಡಮಾಡಿದ್ದಕ್ಕೆ ಕಿರಾಣಿ ಅಂಗಡಿ ಮಾಲೀಕ ಆಕೆಯ 5-ವರ್ಷದ ಮಗಳನ್ನು ಸಾಯಿಸಿದ!
ನವೆಂಬರ್‌ನಲ್ಲಿ ಇರಾನ್ ತೊರೆದಿದ್ದಾರೆ ಎಂಬ ವರದಿಗಳನ್ನು ಅಲಿದೂಸ್ತಿ ನಿರಾಕರಿಸಿದ್ದು ತಾನು ಇರಾನ್‌ನಲ್ಲಿ ವಾಸಿಸಲು ಯೋಚಿಸಿರುವುದಾಗಿ ಹೇಳಿದ್ದರು.ಅದೇ ವೇಳೆ ಕೈದಿಗಳ ಕುಟುಂಬಗಳಿಗೆ ತನ್ನ ಬೆಂಬಲವನ್ನು ನೀಡಿದ್ದರು. ನಾನು ಕೈದಿಗಳು ಮತ್ತು ಹತ್ಯೆಗೀಡಾದವರ ಕುಟುಂಬಗಳ ಪರವಾಗಿ ನಿಲ್ಲುತ್ತೇನೆ ಮತ್ತು ಅವರಿಗೆ ನ್ಯಾಯಕ್ಕಾಗಿ ಒತ್ತಾಯಿಸುತ್ತೇನೆ. ನಾನು ನನ್ನ ಮನೆಗಾಗಿ ಹೋರಾಡುತ್ತೇನೆ ಮತ್ತು ನನ್ನ ಹಕ್ಕುಗಳಿಗಾಗಿ ನಿಲ್ಲಲು ನಾನು ಏನೇ ಬಂದರೂ ಎದುರಿಸುತ್ತೇನೆ ಎಂದಿದ್ದರು ಅಲಿದೂಸ್ತಿ.
ಸುದ್ದಿ ವರದಿಯ ಪ್ರಕಾರ, 22 ವರ್ಷದ ಮಹಿಳೆ ಮಹ್ಸಾ ಅಮಿನಿಯ ಸಾವಿನ ನಂತರ ಭುಗಿಲೆದ್ದ ರಾಷ್ಟ್ರವ್ಯಾಪಿ ಪ್ರತಿಭಟನೆಯ ಸಂದರ್ಭದಲ್ಲಿ ಹಲವಾರು ಇರಾನಿಯನ್ನರಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿದೆ. ಅಮಿನಿಯನ್ನು ಇರಾನ್‌ನ ‘ನೈತಿಕತೆಯ ಪೊಲೀಸರು’ ತನ್ನ ಹಿಜಾಬ್ ಸರಿಯಾಗಿ ಧರಿಸಿಲ್ಲ ಎಂದು ಆರೋಪಿಸಿ ಬಂಧಿಸಿದರು. ನಾರ್ವೆ ಮೂಲದ ಇರಾನ್ ಮಾನವ ಹಕ್ಕುಗಳ ಪ್ರಕಾರ, ಸೆಪ್ಟೆಂಬರ್‌ನಿಂದ 458 ಜನರು ಈ ಗಲಭೆಯಲ್ಲಿ ಸಾವನ್ನಪ್ಪಿದ್ದಾರೆ.
ಇನ್ನಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ