ಇರಾನ್​​ನಲ್ಲಿ ಹಿಜಾಬ್ ಧರಿಸದ ಮಹಿಳೆಗೆ ಸೇವೆ ನೀಡಿದ ಬ್ಯಾಂಕ್ ಮ್ಯಾನೇಜರ್ ವಜಾ

ಜಧಾನಿ ಟೆಹ್ರಾನ್ ಬಳಿಯ ಕೋಮ್ ಪ್ರಾಂತ್ಯದ ಬ್ಯಾಂಕ್ ಮ್ಯಾನೇಜರ್ ಗುರುವಾರ ಹಿಜಾಬ್ ಧರಿಸದ ಮಹಿಳೆಗೆ ಬ್ಯಾಂಕ್ ಸೇವೆಗಳನ್ನು ಒದಗಿಸಿದ್ದಾರೆ. ಹೀಗೆ ಸೇವೆ ಒದಗಿಸಿದ ಬ್ಯಾಂಕ್ ಮ್ಯಾನೇಜರ್​​ನ್ನು ರಾಜ್ಯಪಾಲರ ಆದೇಶದ ಮೇರೆಗೆ ಅವರ ಸ್ಥಾನದಿಂದ ತೆಗೆದುಹಾಕಲಾಯಿತು

ಇರಾನ್​​ನಲ್ಲಿ ಹಿಜಾಬ್ ಧರಿಸದ ಮಹಿಳೆಗೆ ಸೇವೆ ನೀಡಿದ ಬ್ಯಾಂಕ್ ಮ್ಯಾನೇಜರ್ ವಜಾ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Nov 27, 2022 | 7:40 PM

ಟೆಹ್ರಾನ್: ಹಿಜಾಬ್ (Hijab) ಧರಿಸದ ಮಹಿಳೆಗೆ ಬ್ಯಾಂಕ್ ಸೇವೆ ನೀಡಿದ ಇರಾನ್​​ನ (Iran)ಬ್ಯಾಂಕ್ ಮ್ಯಾನೇಜರ್ ಅನ್ನು ವಜಾ ಮಾಡಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ಭಾನುವಾರ ವರದಿ ಮಾಡಿವೆ. ಇರಾನ್​​ನಲ್ಲಿ ಕಡ್ಡಾಯ ಹಿಜಾಬ್ (Hijab) ನಿಯಮ ವಿರುದ್ಧ ಪ್ರತಿಭಟನೆಗಳು ಮಂದುವರಿದಿದೆ. 80 ಮಿಲಿಯನ್‌ಗಿಂತಲೂ ಹೆಚ್ಚು ಜನರಿರುವ ದೇಶದಲ್ಲಿ ಮಹಿಳೆಯರು ತಮ್ಮ ತಲೆ, ಕುತ್ತಿಗೆ ಮತ್ತು ಕೂದಲನ್ನು ಮುಚ್ಚುವ ಅಗತ್ಯವಿದೆ. ಈ ಕಾನೂನನ್ನು ದೇಶದ ನೈತಿಕ ಪೊಲೀಸರು ಜಾರಿಗೊಳಿಸಿದ್ದಾರೆ. ಡ್ರೆಸ್ ಕೋಡ್ ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ 22 ವರ್ಷದ ಮಹ್ಸಾ ಅಮಿನಿ ನೈತಿಕ ಪೊಲೀಸ್ ಕಸ್ಟಡಿಯಲ್ಲಿ ಸೆಪ್ಟೆಂಬರ್ 16ರಂದು ಸಾವಿಗೀಡಾಗಿದ್ದು ಇದು ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಕಾರಣವಾಯಿತು., ಇದನ್ನು ಅಧಿಕಾರಿಗಳು ಗಲಭೆ ಎಂದಿದ್ದಾರೆ. ರಾಜಧಾನಿ ಟೆಹ್ರಾನ್ ಬಳಿಯ ಕೋಮ್ ಪ್ರಾಂತ್ಯದ ಬ್ಯಾಂಕ್ ಮ್ಯಾನೇಜರ್ ಗುರುವಾರ ಹಿಜಾಬ್ ಧರಿಸದ ಮಹಿಳೆಗೆ ಬ್ಯಾಂಕ್ ಸೇವೆಗಳನ್ನು ಒದಗಿಸಿದ್ದಾರೆ. ಹೀಗೆ ಸೇವೆ ಒದಗಿಸಿದ ಬ್ಯಾಂಕ್ ಮ್ಯಾನೇಜರ್​​ನ್ನು ರಾಜ್ಯಪಾಲರ ಆದೇಶದ ಮೇರೆಗೆ ಅವರ ಸ್ಥಾನದಿಂದ ತೆಗೆದುಹಾಕಲಾಯಿತು ಎಂದು ಡೆಪ್ಯೂಟಿ ಗವರ್ನರ್ ಅಹ್ಮದ್ ಹಾಜಿಜಾದೆ ಅವರನ್ನು ಉಲ್ಲೇಖಿಸಿ ಮೆಹರ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಹಿಜಾಬ್ ಧರಿಸದ ಮಹಿಳೆಯ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಟೀಕೆಗಳನ್ನು ಹುಟ್ಟು ಹಾಕಿದೆ ಎಂದು ಮೆಹರ್ ಹೇಳಿದೆ. ಇರಾನ್‌ನಲ್ಲಿ ಹೆಚ್ಚಿನ ಬ್ಯಾಂಕುಗಳು ರಾಜ್ಯನಿಯಂತ್ರಿತವಾಗಿವೆ. ಹಿಜಾಬ್ ಕಾನೂನನ್ನು ಜಾರಿಗೆ ತರುವುದು ಅಂತಹ ಸಂಸ್ಥೆಗಳಲ್ಲಿನ ವ್ಯವಸ್ಥಾಪಕರ ಜವಾಬ್ದಾರಿಯಾಗಿದೆ ಎಂದು ಹಾಜಿಜಾದೆ ಹೇಳಿದರು.

ಡಜನ್‌ಗಟ್ಟಲೆ ಜನರು  ಮುಖ್ಯವಾಗಿ ಪ್ರತಿಭಟನಾಕಾರರು ಭದ್ರತಾ ಪಡೆಗಳ ಸದಸ್ಯರು ಪ್ರತಿಭಟನೆ ವೇಳೆ ಕೊಲ್ಲಲ್ಪಟ್ಟರು. ತನ್ನ ಪಾಶ್ಚಾತ್ಯ “ಶತ್ರುಗಳಿಂದ” ಇದು ನಡೆಯುತ್ತಿದೆ ಎಂದು ಇರಾನ್ ದೂರಿದೆ. ಅಮೆರಿಕ ಬೆಂಬಲಿತ ರಾಜಪ್ರಭುತ್ವವನ್ನು ಉರುಳಿಸಿ ಇಸ್ಲಾಮಿಕ್ ಗಣರಾಜ್ಯವನ್ನು ಸ್ಥಾಪಿಸಿದ 1979 ರ ಕ್ರಾಂತಿಯ ನಾಲ್ಕು ವರ್ಷಗಳ ನಂತರ ಹಿಜಾಬ್ ಕಡ್ಡಾಯವಾಯಿತು.

ನಂತರ ಬದಲಾದ ಉಡುಗೆ ನಿಯಮಗಳ ನಂತರ ಮಹಿಳೆಯರು ಬಿಗಿಯಾದ ಜೀನ್ಸ್ ಮತ್ತು ಸಡಿಲವಾದ, ಬಣ್ಣದ ಹಿಜಾಬ್​​ಗಳನ್ನು ಧರಿಸುವುದು ಸಾಮಾನ್ಯವಾಗಿದೆ. ಆದರೆ ಈ ವರ್ಷದ ಜುಲೈನಲ್ಲಿ, ಅಲ್ಟ್ರಾ-ಕನ್ಸರ್ವೇಟಿವ್ ಅಧ್ಯಕ್ಷ ಇಬ್ರಾಹಿಂ ರೈಸಿ ಹಿಜಾಬ್ ಧರಿಸುವ ಕಾನೂನನ್ನು ಜಾರಿಗೊಳಿಸಲು ಎಲ್ಲಾ ರಾಜ್ಯ ಸಂಸ್ಥೆಗಳಿಗೆ ಕರೆ ನೀಡಿದರು. ಏತನ್ಮಧ್ಯೆ ಅನೇಕ ಮಹಿಳೆಯರು ನಿಯಮಗಳನ್ನು ಇದನ್ನು ಪ್ರತಿಭಟಿಸಿ ಬೀದಿಗಿಳಿದಿದ್ದಾರೆ.

Published On - 7:37 pm, Sun, 27 November 22

ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!
ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ಈ ಬಾರಿ ಬಿಗ್ ಬಾಸ್ ಟ್ರೋಫಿ ಯಾರಿಗೆ? ಭವಿಷ್ಯ ನುಡಿದ ಐಶ್ವರ್ಯಾ
ಈ ಬಾರಿ ಬಿಗ್ ಬಾಸ್ ಟ್ರೋಫಿ ಯಾರಿಗೆ? ಭವಿಷ್ಯ ನುಡಿದ ಐಶ್ವರ್ಯಾ
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ