Brazil Twin School Shooting: ಬ್ರೆಜಿಲ್ನ 2 ಶಾಲೆಗಳ ಮೇಲೆ ಗುಂಡಿನ ದಾಳಿ, 4 ಮಂದಿ ಸಾವು, 11ಕ್ಕೂ ಅಧಿಕ ಮಂದಿಗೆ ಗಾಯ
ಬ್ರೆಜಿಲ್ನ ಎರಡು ಶಾಲೆಗಳ ಮೇಲೆ ನಡೆದ ಗುಂಡಿನ ದಾಳಿಯಲ್ಲಿ 4 ಮಂದಿ ಮೃತಪಟ್ಟಿದ್ದಾರೆ ಎನ್ನುವ ವಿಷಯ ಬೆಳಕಿಗೆ ಬಂದಿದೆ. ನಾಜಿ ಚಿಹ್ನೆ ಧರಿಸಿದ್ದ 16 ವರ್ಷದ ಶೂಟರ್ ನಡೆಸಿದ ದಾಳಿಯಲ್ಲಿ ಶಿಕ್ಷಕಿಯೊಬ್ಬರು ಗಾಯಗೊಂಡು ಸಾವನ್ನಪ್ಪಿದ್ದಾರೆ.
ಬ್ರೆಜಿಲ್ನ ಎರಡು ಶಾಲೆಗಳ ಮೇಲೆ ನಡೆದ ಗುಂಡಿನ ದಾಳಿಯಲ್ಲಿ 4 ಮಂದಿ ಮೃತಪಟ್ಟಿದ್ದಾರೆ ಎನ್ನುವ ವಿಷಯ ಬೆಳಕಿಗೆ ಬಂದಿದೆ. ನಾಜಿ ಚಿಹ್ನೆ ಧರಿಸಿದ್ದ 16 ವರ್ಷದ ಶೂಟರ್ ನಡೆಸಿದ ದಾಳಿಯಲ್ಲಿ ಶಿಕ್ಷಕಿಯೊಬ್ಬರು ಗಾಯಗೊಂಡು ಸಾವನ್ನಪ್ಪಿದ್ದಾರೆ. ಎಸ್ಪಿರಿಟೊ ಸ್ಯಾಂಟೊ ರಾಜ್ಯದ ಅರಾಕ್ರೂಜ್ ನಗರದಲ್ಲಿ ಘಟನೆ ನಡೆದಿದೆ, ದಾಳಿಯಲ್ಲಿ ಮೂವರು ಶಿಕ್ಷಕರು ಒಬ್ಬ ವಿದ್ಯಾರ್ಥಿ ಸೇರಿದಂತೆ 10 ಮಂದಿ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಬ್ರೆಜಿಲ್‌ನಿಂದ ಎರಡು ಶಾಲೆಯಲ್ಲಿ ಗುಂಡಿನ ದಾಳಿ ನಡೆದಿರುವುದು ಬೆಳಕಿಗೆ ಬಂದಿದೆ. ಶಾಲೆಯಲ್ಲಿ ಗುಂಡಿನ ದಾಳಿಗೆ 4ಮಂದಿ ಸಾವನ್ನಪ್ಪಿದ್ದಾರೆ. ಸ್ಥಳೀಯ ಮಾಧ್ಯಮಗಳೊಂದಿಗೆ ಮಾತನಾಡಿದ ಅಧಿಕಾರಿಗಳು, ಬುಲೆಟ್ ಪ್ರೂಫ್ ವೆಸ್ಟ್ ಧರಿಸಿದ ಶೂಟರ್ ಆಗ್ನೇಯ ಬ್ರೆಜಿಲ್‌ನಲ್ಲಿ ಎರಡು ಶಾಲೆಗಳಿಗೆ ನುಗ್ಗಿ ಇಬ್ಬರು ಶಿಕ್ಷಕರು ಮತ್ತು ಇಬ್ಬರು ವಿದ್ಯಾರ್ಥಿಗಳನ್ನು ಕೊಂದಿದ್ದು 11 ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದಿದ್ದಾರೆ.
ಎಸ್ಪಿರಿಟೊ ಸ್ಯಾಂಟೋ ರಾಜ್ಯದ ಸಣ್ಣ ಪಟ್ಟಣವಾದ ಅರಾಕ್ರೂಜ್‌ನಲ್ಲಿ ಒಂದೇ ರಸ್ತೆಯಲ್ಲಿರುವ ಪ್ರಾಥಮಿಕ ಮತ್ತು ಮಧ್ಯಮ ಶಾಲಾ ವಿದ್ಯಾರ್ಥಿಗಳು ಮತ್ತು ಖಾಸಗಿ ಶಾಲೆಯೊಂದರಲ್ಲಿ ಗುಂಡಿನ ದಾಳಿ ನಡೆದಿದೆ ಎಂದು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಅಧಿಕಾರಿಗಳು ಶೋಧದ ನಂತರ ಶಂಕಿತ ಶೂಟರ್ ಅನ್ನು ಬಂಧಿಸಿದ್ದಾರೆ ಎಂದು ರಾಜ್ಯ ಗವರ್ನರ್ ರೆನಾಟೊ ಕಾಸಾಗ್ರಾಂಡೆ ಹೇಳಿದ್ದಾರೆ.
ಈ ಕುರಿತು ನಾವು ತನಿಖೆಯನ್ನು ಮುಂದುವರಿಸುತ್ತೇವೆ ಮತ್ತು ಶೀಘ್ರದಲ್ಲೇ ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸುತ್ತೇವೆ ಎಂದು ರಾಜ್ಯಪಾಲರು ಟ್ವೀಟ್ ಮಾಡಿದ್ದಾರೆ. ದಾಳಿಕೋರನು ಬುಲೆಟ್ ಪ್ರೂಫ್ ವೆಸ್ಟ್ ಧರಿಸಿ ಸೆಮಿಯಾಟೊಮ್ಯಾಟಿಕ್ ಪಿಸ್ತೂಲ್ ಬಳಸಿ ದಾಳಿ ನಡೆಸುವುದನ್ನು ಭದ್ರತಾ ಕ್ಯಾಮರಾ ದೃಶ್ಯಾವಳಿಗಳು ತೋರಿಸಿವೆ ಎಂದು ಎಸ್ಪಿರಿಟೊ ಸ್ಯಾಂಟೊ ಸಾರ್ವಜನಿಕ ಭದ್ರತಾ ಕಾರ್ಯದರ್ಶಿ ಮಾರ್ಸಿಯೊ ಸೆಲಾಂಟೆ ಸೆಕ್ರೆಟರಿಯೇಟ್‌ನಲ್ಲಿ ವೀಡಿಯೊವನ್ನು ಬಿಡುಗಡೆ ಮಾಡಿದರು.
ಘಟನೆಯಲ್ಲಿ 11 ಜನರು ಗಾಯಗೊಂಡಿದ್ದಾರೆ ಎಂದು ಸೆಲಾಂಟೆ ಹೇಳಿದರು, ಶೂಟರ್ ಸಾರ್ವಜನಿಕ ಶಾಲೆಯ ಬೀಗವನ್ನು ಮುರಿದ ನಂತರ ಶಿಕ್ಷಕರ ಕೋಣೆಗೆ ಪ್ರವೇಶಿಸಿದ್ದನ್ನು ಗಮನಿಸಬಹುದು. ದಾಳಿಕೋರನು ಬುಲೆಟ್ ಪ್ರೂಫ್ ವೆಸ್ಟ್ ಧರಿಸಿ ಸೆಮಿಯಾಟೊಮ್ಯಾಟಿಕ್ ಪಿಸ್ತೂಲ್ ಬಳಸಿ ದಾಳಿ ನಡೆಸುವುದನ್ನು ಭದ್ರತಾ ಕ್ಯಾಮರಾ ದೃಶ್ಯಾವಳಿಗಳು ತೋರಿಸಿವೆ ಎಂದು ಎಸ್ಪಿರಿಟೊ ಸ್ಯಾಂಟೊ ಸಾರ್ವಜನಿಕ ಭದ್ರತಾ ಕಾರ್ಯದರ್ಶಿ ಮಾರ್ಸಿಯೊ ಸೆಲಾಂಟೆ ಸೆಕ್ರೆಟರಿಯೇಟ್‌ನಲ್ಲಿ ವೀಡಿಯೊವನ್ನು ಬಿಡುಗಡೆ ಮಾಡಿದರು.
ಘಟನೆಯಲ್ಲಿ 11 ಜನರು ಗಾಯಗೊಂಡಿದ್ದಾರೆ ಎಂದು ಸೆಲಾಂಟೆ ಹೇಳಿದರು, ಪಬ್ಲಿಕ್ ಸ್ಕೂಲ್‌ನ ಬೀಗವನ್ನು ಮುರಿದ ನಂತರ ಶೂಟರ್ ಶಿಕ್ಷಕರ ಲಾಂಜ್‌ಗೆ ಪ್ರವೇಶಿಸಿದ್ದನ್ನು ವಿಡಿಯೋದಲ್ಲಿ ಗಮನಿಸಬಹುದು.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:31 am, Sun, 27 November 22