ಶಾಸಕ ಜಮೀರ್​ಗೆ ಕಾಡ್ತಿದ್ಯಾ ಇ.ಡಿ. ಬಂಧನ ಭೀತಿ? ನನಗೆ ಯಾವುದೇ ನೋಟಿಸ್ ಬಂದಿಲ್ಲ ಎಂದ ಜಮೀರ್ ದೆಹಲಿಗೆ ಹೋಗಿದ್ದೇಕೆ?

| Updated By: ಆಯೇಷಾ ಬಾನು

Updated on: Aug 22, 2021 | 8:51 AM

ಇ.ಡಿ. ದಾಳಿಯ ಬಳಿಕ ವಿಚಾರಣೆಯ ಟೆನ್ಷನ್‌ ನಲ್ಲಿರುವ ಜಮೀರ್ ಅಹ್ಮದ್‌ ದೆಹಲಿಗೆ ದೌಡಾಯಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ‌ಶಿವಕುಮಾರ್ ಸಲಹೆ ಪಡೆದಿರುವ ಜಮೀರ್ ದೆಹಲಿಯಲ್ಲಿ ವಕೀಲರನ್ನು ಭೇಟಿ ಮಾಡುವ ಲೆಕ್ಕಾಚಾರದಲ್ಲಿದ್ದಾರೆ. ವಿಚಾರಣೆಗೆ ಬುಲಾವ್ ಬಂದರೆ ಹೇಗೆ ಎದುರಿಸುವುದು ಎಂಬ ಬಗ್ಗೆ‌ ಸಿದ್ಧತೆ ನಡೆಸುತ್ತಿದ್ದಾರೆ.

ಶಾಸಕ ಜಮೀರ್​ಗೆ ಕಾಡ್ತಿದ್ಯಾ ಇ.ಡಿ. ಬಂಧನ ಭೀತಿ? ನನಗೆ ಯಾವುದೇ ನೋಟಿಸ್ ಬಂದಿಲ್ಲ ಎಂದ ಜಮೀರ್ ದೆಹಲಿಗೆ ಹೋಗಿದ್ದೇಕೆ?
ಶಾಸಕ ಜಮೀರ್ ಅಹ್ಮದ್​ಗೆ ಇ.ಡಿ. ಬುಲಾವ್​; ದೆಹಲಿಗೆ ದೌಡಾಯಿಸಿದ ಕಾಂಗ್ರೆಸ್​ ಶಾಸಕ
Follow us on

ದೆಹಲಿ: ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್(Zameer Ahmed Khan) ಮನೆ ಮೇಲಿನ ಇ.ಡಿ. ರೇಡ್ ಕೇಸ್ ಮತ್ತೊಂದು ಟ್ವಿಸ್ಟ್ ಪಡೆದಿದೆ. ಜಮೀರ್ ಅಹ್ಮದ್ ಖಾನ್ರನ್ನು ದೆಹಲಿಗೆ ಬರುವಂತೆ ಇಡಿ ಬುಲಾವ್ ಕೊಟ್ಟಿದೆ. ಈ ಮೂಲಕ ಜಮೀರ್ ಅಹ್ಮದ್ಗೆ ಅಸಲಿ ಸಂಕಷ್ಟ ಈಗ ಶುರುವಾಗಿದೆ. ಆದ್ರೆ ಈ ಬಗ್ಗೆ ಮಾತನಾಡಿರುವ ಶಾಸಕ ಜಮೀರ್, ಇ.ಡಿ. ವಿಚಾರಣೆಯನ್ನ ನಿರಾಕರಿಸಿದ್ದಾರೆ. ಇ.ಡಿ.ಯಿಂದ ಯಾವುದೇ ನೋಟಿಸ್ ಕೊಟ್ಟಿಲ್ಲ. ಖಾಸಗಿ ಕೆಲಸದ ನಿಮಿತ್ತ ದೆಹಲಿಯಲ್ಲಿದ್ದೇನೆ ಎಂದಿದ್ದಾರೆ.

ಶಾಸಕ ಜಮೀರ್ಗೆ ಕಾಡ್ತಿದ್ಯಾ ಇ.ಡಿ. ಬಂಧನ ಭೀತಿ?
ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ ಖಾನ್ಗೆ ದಿನೇ ದಿನೆ ಇ.ಡಿ. ಕುಣಿಕೆ ಬಿಗಿಯಾಗುತ್ತಿದೆಯಾ ಅನ್ನೋ ಪ್ರಶ್ನೆ ಹೆಚ್ಚಾಗೇ ಕಾಡ್ತಿದೆ. ಎರಡು ದಿನಗಳ‌ ಹಿಂದೆ ಡಿ.ಕೆ.ಶಿವಕುಮಾರ್ ಭೇಟಿಯಾಗಿದ್ದ ಜಮೀರ್, ನಿನ್ನೆ ದಿಢೀರ್ ದೆಹಲಿಗೆ ಆಗಮಿಸಿದ್ದಾರೆ. ಅಕ್ರಮ‌ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ ವಿಚಾರಣೆ ಎದುರಿಸಿರುವ ಡಿ.ಕೆ‌ ಶಿವಕುಮಾರ್ ಜಮೀರ್ ಅಹಮದ್ ಅವರಿಗೆ ಒಂದಷ್ಟು ಟಿಪ್ಸ್ ನೀಡಿದ್ದಾರೆನ್ನಲಾಗಿದೆ.‌ ದೆಹಲಿಯಲ್ಲಿ ಹಿರಿಯ ವಕೀಲರನ್ನು ಭೇಟಿಯಾಗಿ ಸಲಹೆ ಪಡೆಯುವಂತೆ ಜಮೀರ್ ಅಹ್ಮದ್ಗೆ ಡಿ.ಕೆ‌ ಶಿವಕುಮಾರ್ ಸಲಹೆ ನೀಡಿದ್ದಾರಂತೆ.

ಡಿ.ಕೆ ಶಿವಕುಮಾರ್ ಭೇಟಿ ಮಾಡಿ ಒಂದು ರಾತ್ರಿ ಕಳೆಯೋದ್ರೊಳಗೆ ದೆಹಲಿಗೆ ಆಗಮಿಸಿರುವ ಜಮೀರ್ ಅಹ್ಮದ್ ವಕೀಲರನ್ನು ಭೇಟಿಯಾಗುವ ಪ್ರಯತ್ನ ನಡೆಸಿದ್ದಾರೆನ್ನಲಾಗಿದೆ. ಇಂದು ಕೂಡ ಹಿರಿಯ ವಕೀಲರನ್ನು ಭೇಟಿಯಾಗಿ ಇ.ಡಿ. ಕೇಸ್ ವಿಚಾರವಾಗಿ ಮಾತಾಡುವ ಸಾಧ್ಯತೆ ಇದೆ. ಜಮೀರ್‌ ಅಹ್ಮದ್‌ ಕಟ್ಟಿಸಿರುವ ಮನೆಯ ವಿಚಾರಕ್ಕಾಗಿಯೇ ಇ.ಡಿ. ದಾಳಿ ನಡೆಸಿದೆ ಅಂತಾ ಶಾಸಕರು ಹೇಳುತ್ತಿದ್ರೂ ಕೈ ನಾಯಕರೇ ಇದನ್ನು ಪೂರ್ಣವಾಗಿ ಒಪ್ಪಿಕೊಂಡಿಲ್ಲ.

ಇ.ಡಿ. ನೋಟಿಸ್ ಕೊಟ್ಟೇ ಇಲ್ಲ ಎಂದ ಜಮೀರ್ ಅಹ್ಮದ್
ಆದರೆ ಇಡಿ ನೋಟಿಸ್ ಕೊಟ್ಟಿದೆ ಅನ್ನೋ ವಿಚಾರವನ್ನು ಜಮೀರ್‌ ಅಹ್ಮದ್ ನಿರಾಕರಿಸಿದ್ದಾರೆ.‌ ನಿನ್ನೆ ದೆಹಲಿಯಲ್ಲಿ ಮಾತನಾಡಿರುವ ಜಮೀರ್, ನಾನು ದೆಹಲಿಗೆ ಹೊಸದಾಗಿ ಬರುತ್ತಿಲ್ಲ. ಬಂದಿರೋದು ವೈಯಕ್ತಿಕ ಕೆಲಸಕ್ಕಷ್ಟೇ. ಇಡಿ ತನಗೆ ಯಾವುದೇ ನೊಟೀಸ್‌ ಕೊಟ್ಟಿಲ್ಲ, ನೊಟೀಸ್ ಕೊಟ್ಟಿದ್ರೆ ಮಾಧ್ಯಮದವರಿಗೆ ತೋರಿಸಿ ಬರ್ತಿದ್ದೆ ಅಂದ್ರು.

ಜಮೀರ್‌ ಹೀಗೆಲ್ಲಾ ಹೇಳ್ತಿದ್ದರೂ ನಾಳೆ‌ ಇಡಿ ಮುಂದೆ ವಿಚಾರಣೆಗೆ ಹಾಜರಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಮನೆ ನಿರ್ಮಾಣಕ್ಕೆ ಬಂದಿರುವ ದುಡ್ಡು ಸೇರಿದಂತೆ ಜಮೀರ್‌ ನಡೆಸಿದ್ದಾರೆ ಎನ್ನಲಾಗಿರುವ ವಿದೇಶಿ ವ್ಯವಹಾರದ ಬಗ್ಗೆಯೂ ಇಡಿ ಕಣ್ಣಿಟ್ಟಿದೆ. ಬಾಯಿ ಮಾತಿನಲ್ಲಿ ಏನೇ ಉತ್ತರ ಕೊಟ್ಟರೂ ಜಮೀರ್‌ ಸುತ್ತಲು ಇಡಿ ಬಲೆ ಬಿಗಿಯಾಗುತ್ತಿರುವುದು ಮಾತ್ರ ಪಕ್ಕಾ ಆದಂತಿದೆ.

ಇದನ್ನೂ ಓದಿ: ಶಾಸಕ ಜಮೀರ್ ಅಹ್ಮದ್​ಗೆ ಇ.ಡಿ. ಬುಲಾವ್​; ದೆಹಲಿಗೆ ದೌಡಾಯಿಸಿದ ಕಾಂಗ್ರೆಸ್​ ಶಾಸಕ