Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾನು ಬೀಫ್ ತಿನ್ನುತ್ತೇನೆ, ಇದು ಇಲ್ಲಿನ ಜೀವನ ಶೈಲಿ, ಯಾರಿಂದಲೂ ಇದನ್ನು ತಡೆಯಲಾಗಲ್ಲ: ಮೇಘಾಲಯದ ಬಿಜೆಪಿ ಅಧ್ಯಕ್ಷ

ನಾವು ಮೇಘಾಲಯದಲ್ಲಿದ್ದೇವೆ, ಎಲ್ಲರೂ ಬೀಫ್ ತಿನ್ನುತ್ತೇವೆ. ಇಲ್ಲಿ ಯಾವುದೇ ನಿರ್ಬಂಧವಿಲ್ಲ. ಹೌದು, ನಾನು ಕೂಡಾ ಬೀಫ್ ತಿನ್ನುತ್ತೇನೆ. ಯಾವುದೇ ನಿಷೇಧವಿಲ್ಲ. ಮೇಘಾಲಯದ ಜನರ ಜೀವನಶೈಲಿ ಇದು. ಯಾರೂ ಅದನ್ನು ತಡೆಯಲು ಸಾಧ್ಯವಿಲ್ಲ. ಭಾರತದಲ್ಲೂ ಅಂತಹ ಯಾವುದೇ ನಿಯಮಗಳಿಲ್ಲ.

ನಾನು ಬೀಫ್ ತಿನ್ನುತ್ತೇನೆ, ಇದು ಇಲ್ಲಿನ ಜೀವನ ಶೈಲಿ, ಯಾರಿಂದಲೂ ಇದನ್ನು ತಡೆಯಲಾಗಲ್ಲ: ಮೇಘಾಲಯದ ಬಿಜೆಪಿ ಅಧ್ಯಕ್ಷ
ಅರ್ನೆಸ್ಟ್ ಮಾವ್ರಿ
Follow us
ರಶ್ಮಿ ಕಲ್ಲಕಟ್ಟ
|

Updated on:Feb 23, 2023 | 2:34 PM

ಶಿಲ್ಲಾಂಗ್: ಮೇಘಾಲಯದಲ್ಲಿ (Meghalaya) ಬೀಫ್ ತಿನ್ನುವುದಕ್ಕೆ ಯಾವುದೇ ನಿರ್ಬಂಧವಿಲ್ಲ. ನಾನು ಕೂಡ ಬೀಫ್(Beef) ತಿನ್ನುತ್ತೇನೆ ಎಂದು ರಾಜ್ಯದ ಬಿಜೆಪಿ ಮುಖ್ಯಸ್ಥ ಅರ್ನೆಸ್ಟ್ ಮಾವ್ರಿ (Ernest Mawrie) ಹೇಳಿದ್ದಾರೆ. ಎಎನ್ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅರ್ನೆಸ್ಟ್ ಮಾವ್ರಿ, “ಇತರ ರಾಜ್ಯಗಳು ಅಂಗೀಕರಿಸಿದ ನಿರ್ಣಯದ ಬಗ್ಗೆ ನಾನು ಹೇಳಿಕೆ ನೀಡಲು ಸಾಧ್ಯವಿಲ್ಲ. ನಾವು ಮೇಘಾಲಯದಲ್ಲಿದ್ದೇವೆ, ಎಲ್ಲರೂ ಬೀಫ್ ತಿನ್ನುತ್ತೇವೆ. ಇಲ್ಲಿ ಯಾವುದೇ ನಿರ್ಬಂಧವಿಲ್ಲ. ಹೌದು, ನಾನು ಕೂಡಾ ಬೀಫ್ ತಿನ್ನುತ್ತೇನೆ. ಯಾವುದೇ ನಿಷೇಧವಿಲ್ಲ. ಮೇಘಾಲಯದ ಜನರ ಜೀವನಶೈಲಿ ಇದು. ಯಾರೂ ಅದನ್ನು ತಡೆಯಲು ಸಾಧ್ಯವಿಲ್ಲ. ಭಾರತದಲ್ಲೂ ಅಂತಹ ಯಾವುದೇ ನಿಯಮಗಳಿಲ್ಲ. ಕೆಲವು ರಾಜ್ಯಗಳು ಕೆಲವು ಮಸೂದೆ ಅಂಗೀಕರಿಸಿವೆ. ಮೇಘಾಲಯದಲ್ಲಿ, ನಮಗೆ ಕಸಾಯಿಖಾನೆ ಇದೆ, ಪ್ರತಿಯೊಬ್ಬರೂ ಹಸು ಅಥವಾ ಹಂದಿಯನ್ನು ತೆಗೆದುಕೊಂಡು ಬಂದು ಮಾರಾಟ ಮಾಡುತ್ತಾರೆ. ಇದು ಆರೋಗ್ಯಕರವಾಗಿರಬೇಕು, ಅದನ್ನು ತಿನ್ನುವ ಅಭ್ಯಾಸ ಇಲ್ಲಿದೆ.

ಅಸ್ಸಾಂನಂತಹ ಬಿಜೆಪಿ ಅಧಿಕಾರದ ರಾಜ್ಯಗಳಲ್ಲಿ ಜಾನುವಾರುಗಳ ವಧೆ, ಸಾರಿಗೆ ಮತ್ತು ಮಾರಾಟವನ್ನು ನಿಯಂತ್ರಿಸುವ ಮಸೂದೆಯನ್ನು ಅಂಗೀಕರಿಸಿದ ಸಮಯದಲ್ಲಿ ಮತ್ತು ಈಶಾನ್ಯ ಪ್ರದೇಶದ ಬಿಜೆಪಿಯ ಮುಖವಾಗಿರುವ ಅಸ್ಸಾಂ ಮುಖ್ಯಮಂತ್ರಿ ಡಾ.ಹಿಮಂತ ಬಿಸ್ವಾ ಶರ್ಮಾ ಅವರು ಹಿಂದೂ ಜನವಸತಿ ಪ್ರದೇಶಗಳಲ್ಲಿ ಬೀಫ್ ತಿನ್ನುವುದನ್ನು ನಿರ್ಬಂಧಿಸಲು ಜನರಿಗೆ ಮನವಿ ಮಾಡಿದ್ದಾರೆ.

ಬಿಜೆಪಿ ಕ್ರಿಶ್ಚಿಯನ್ ವಿರೋಧಿ ಪಕ್ಷ ಎಂದು ಕೆಲವು ರಾಜಕೀಯ ಪಕ್ಷಗಳು ಮಾಡಿದ ಆರೋಪಗಳನ್ನು ನಿರಾಕರಿಸಿದ ಮೇಘಾಲಯ ಬಿಜೆಪಿ ಮುಖ್ಯಸ್ಥ ಇದು ಕೇವಲ “ರಾಜಕೀಯ ಪ್ರಚಾರ” ಎಂದು ಹೇಳಿದರು.

ಇದನ್ನೂ ಓದಿ: ಕಾಂಗ್ರೆಸ್ ಹಿರಿಯ ನಾಯಕ ಪವನ್ ಖೇರಾರನ್ನು ಇಂಡಿಗೊ ವಿಮಾನದಿಂದ ಇಳಿಸಿದ ಪೊಲೀಸ್

ಈಗ ರಾಷ್ಟ್ರೀಯ ಡೆಮಾಕ್ರಟಿಕ್ ಅಲೈಯನ್ಸ್ (ಎನ್‌ಡಿಎ) ಸರ್ಕಾರದ ಒಂಬತ್ತು ವರ್ಷಗಳು ದೇಶದಲ್ಲಿ ನಡೆಯುತ್ತಿವೆ ಮತ್ತು ಯಾವುದೇ ಚರ್ಚ್ ಮೇಲೆ ದಾಳಿ ನಡೆದಿಲ್ಲ ಅಥವಾ ಗುರಿಯಾಗಿಲ್ಲ. ಬಿಜೆಪಿ ಕ್ರಿಶ್ಚಿಯನ್ ವಿರೋಧಿ ಪಕ್ಷ ಎಂದು ವಿರೋಧ ರಾಜಕೀಯ ಪಕ್ಷದ ಆರೋಪ ಕೇವಲ ಚುನಾವಣಾ ಪ್ರಚಾರವಾಗಿದೆ. ನಾವು ಮೇಘಾಲಯದಲ್ಲಿದ್ದೇವೆ. ಇದು ಕ್ರಿಶ್ಚಿಯನ್ ಪ್ರಾಬಲ್ಯದ ರಾಜ್ಯ, ಮತ್ತು ಎಲ್ಲರೂ ಚರ್ಚ್‌ಗೆ ಹೋಗುತ್ತಾರೆ ಗೋವಾದಲ್ಲಿ ಬಿಜೆಪಿ ಆಡಳಿತವಿದೆ.ಒಂದು ಚರ್ಚ್ ಅನ್ನುಸಹ ಗುರಿಯಾಗಿಸಲಾಗಿಲ್ಲ. ನಾಗಾಲ್ಯಾಂಡ್‌ ಕೂಡಾ ಹಾಗೇ. ಇದು ಕೆಲವು ರಾಜಕೀಯ ಪಕ್ಷಗಳು ವಿಶೇಷವಾಗಿ ಕಾಂಗ್ರೆಸ್, ಟಿಎಂಸಿ ಮತ್ತು ರಾಜ್ಯದ ಕೆಲವು ಮಿತ್ರ ಪಕ್ಷಗಳು ಮಾಡಿದ ರಾಜಕೀಯ ಪ್ರಚಾರವಾಗಿದೆ. ಇದು ನಿಜವಲ್ಲ. ನಾನು ಕ್ರಿಶ್ಚಿಯನ್.ಚರ್ಚ್‌ಗೆ ಹೋಗಬಾರದೆಂದು ಅವರು ಎಂದಿಗೂ ಹೇಳುವುದಿಲ್ಲ “ಎಂದು ಅರ್ನೆಸ್ಟ್ ಮಾವ್ರಿ ಹೇಳಿದ್ದಾರೆ.

ಬಿಜೆಪಿ ಮೇಘಾಲಯದಲ್ಲಿ ಸರ್ಕಾರ ರಚಿಸಲಿದೆ ಎಂದು ಅವರು ಹೇಳಿದರು. ಈ ಬಾರಿ ಮೇಘಾಲಯದ ಜನರು ಬದಲಾವಣೆಯನ್ನು ಬಯಸುತ್ತಾರೆ. ನಮ್ಮ ಸಮೀಕ್ಷೆಯ ಪ್ರಕಾರ, ನಾವು ಮ್ಯಾಜಿಕ್ ಸಂಖ್ಯೆಯನ್ನು ಎರಡು-ಅಂಕೆಗಳಲ್ಲಿ ಪಡೆಯುತ್ತೇವೆ ಮತ್ತು ಸರ್ಕಾರವನ್ನು ರಚಿಸುತ್ತೇವೆ “ಎಂದು ಅರ್ನೆಸ್ಟ್ ಮಾವ್ರಿ ಹೇಳಿದ್ದಾರೆ.

ಮೇಘಾಲಯದಲ್ಲಿ ಫೆಬ್ರವರಿ 27 ರಂದು ಚುನಾವಣೆ ನಡೆಯಲಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:32 pm, Thu, 23 February 23

ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ
ವಿಜಯದಶಮಿಗೆ ಹೊಸ ಪಕ್ಷ ಕಟ್ಟುವ ಸುಳಿವು ನೀಡಿದ ಬಸನಗೌಡ ಪಾಟೀಲ್​ ಯತ್ನಾಳ್​
ವಿಜಯದಶಮಿಗೆ ಹೊಸ ಪಕ್ಷ ಕಟ್ಟುವ ಸುಳಿವು ನೀಡಿದ ಬಸನಗೌಡ ಪಾಟೀಲ್​ ಯತ್ನಾಳ್​
Video: ಒಡಿಶಾದಲ್ಲಿ ಹಳಿ ತಪ್ಪಿದ ಬೆಂಗಳೂರು- ಕಾಮಾಖ್ಯ ಎಕ್ಸ್​ಪ್ರೆಸ್ ರೈಲು
Video: ಒಡಿಶಾದಲ್ಲಿ ಹಳಿ ತಪ್ಪಿದ ಬೆಂಗಳೂರು- ಕಾಮಾಖ್ಯ ಎಕ್ಸ್​ಪ್ರೆಸ್ ರೈಲು
IPL 2025: ಆಶಿಶ್ ನೆಹ್ರಾ ಆಕ್ರೋಶಕ್ಕೆ ಇದುವೇ ಅಸಲಿ ಕಾರಣ
IPL 2025: ಆಶಿಶ್ ನೆಹ್ರಾ ಆಕ್ರೋಶಕ್ಕೆ ಇದುವೇ ಅಸಲಿ ಕಾರಣ
ಹೋಟೆಲ್​ನ ಕೊನೆಯ ಮಹಡಿಯ ಸ್ವಿಮ್ಮಿಂಗ್​ ಪೂಲ್​ನಲ್ಲಿ ಮಲಗಿದ್ದ ಜೋಡಿ
ಹೋಟೆಲ್​ನ ಕೊನೆಯ ಮಹಡಿಯ ಸ್ವಿಮ್ಮಿಂಗ್​ ಪೂಲ್​ನಲ್ಲಿ ಮಲಗಿದ್ದ ಜೋಡಿ
ಪ್ರಧಾನಿಯಾದ ಬಳಿಕ ಮೊದಲ ಬಾರಿಗೆ ಆರ್​ಎಸ್​ಎಸ್​ ಪ್ರಧಾನ ಕಚೇರಿಗೆ ಮೋದಿ ಭೇಟಿ
ಪ್ರಧಾನಿಯಾದ ಬಳಿಕ ಮೊದಲ ಬಾರಿಗೆ ಆರ್​ಎಸ್​ಎಸ್​ ಪ್ರಧಾನ ಕಚೇರಿಗೆ ಮೋದಿ ಭೇಟಿ