ವಿಕಸಿತ ಭಾರತದ ಗುರಿ ಸಾಕಾರಗೊಳ್ಳುವವರೆಗೂ ವಿಶ್ರಮಿಸುವುದಿಲ್ಲ; 23 ವರ್ಷಗಳ ಪಯಣ ನೆನಪಿಸಿಕೊಂಡ ಪ್ರಧಾನಿ ಮೋದಿ

|

Updated on: Oct 07, 2024 | 10:52 PM

ಸಾರ್ವಜನಿಕ ಕಚೇರಿಯಲ್ಲಿ 23 ವರ್ಷಗಳನ್ನು ಪೂರೈಸಿದ ನರೇಂದ್ರ ಮೋದಿ ಈ ಪಯಣದ ಬಗ್ಗೆ ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ. ಹಾಗೇ, ‘ವಿಕಸಿತ್ ಭಾರತ್’ ಸಾಕಾರಗೊಳ್ಳುವವರೆಗೆ ನಾನು ವಿಶ್ರಮಿಸುವುದಿಲ್ಲ ಎಂದಿದ್ದಾರೆ. ದಣಿವರಿಯಿಲ್ಲದೆ, ಇನ್ನಷ್ಟು ಹುರುಪಿನಿಂದ ಕೆಲಸ ಮಾಡುತ್ತೇನೆ ಮತ್ತು ವಿಶ್ರಾಂತಿ ಪಡೆಯುವುದಿಲ್ಲ ಎಂದು ಭಾರತೀಯರಿಗೆ ಮೋದಿ ಭರವಸೆ ನೀಡಿದ್ದಾರೆ.

ವಿಕಸಿತ ಭಾರತದ ಗುರಿ ಸಾಕಾರಗೊಳ್ಳುವವರೆಗೂ ವಿಶ್ರಮಿಸುವುದಿಲ್ಲ; 23 ವರ್ಷಗಳ ಪಯಣ ನೆನಪಿಸಿಕೊಂಡ ಪ್ರಧಾನಿ ಮೋದಿ
ಪ್ರಧಾನಿ ಮೋದಿ
Follow us on

ನವದೆಹಲಿ: ಸಾರ್ವಜನಿಕ ಸೇವೆಯಲ್ಲಿ 23 ವರ್ಷಗಳನ್ನು ಪೂರೈಸಿದ್ದಕ್ಕಾಗಿ ಅಭಿನಂದನೆ ಸಲ್ಲಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದ ಪ್ರಧಾನಿ ನರೇಂದ್ರ ಮೋದಿ, ಇಷ್ಟು ವರ್ಷಗಳಲ್ಲಿ ನಾನು ಸಾಕಷ್ಟು ಸಾಧಿಸಿದ್ದರೂ ಇನ್ನೂ ಹೆಚ್ಚಿನದನ್ನು ಸಾಧಿಸಬೇಕಾಗಿದೆ. ಅಲ್ಲಿಯವರೆಗೂ ನಾನು ವಿರಮಿಸುವುದಿಲ್ಲ ಎಂದಿದ್ದಾರೆ. ಅಭಿವೃದ್ಧಿ ಹೊಂದಿದ ಭಾರತದ ಸಾಮೂಹಿಕ ಗುರಿ ಸಾಕಾರಗೊಳ್ಳುವವರೆಗೆ ವಿಶ್ರಾಂತಿ ತೆಗೆದುಕೊಳ್ಳುವುದಿಲ್ಲ. ಈ 23 ವರ್ಷಗಳಲ್ಲಿ ಸಾಕಷ್ಟು ಕಲಿತಿದ್ದೇನೆ. ನಾನು ಜನರ ಸೇವೆಯಲ್ಲಿ ಇನ್ನೂ ಹೆಚ್ಚಿನ ಹುರುಪಿನೊಂದಿಗೆ ದಣಿವರಿಯಿಲ್ಲದೆ ಕೆಲಸ ಮಾಡುತ್ತೇನೆ ಎಂದು ನನ್ನ ದೇಶದ ಜನರಿಗೆ ಭರವಸೆ ನೀಡುತ್ತೇನೆ ಎಂದು ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಅಕ್ಟೋಬರ್ 7, 2001ರಂದು ಮೋದಿ ಗುಜರಾತಿನಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿಯಾದರು. ಈ ಬಗ್ಗೆ ನೆನಪಿಸಿಕೊಂಡ ಮೋದಿ, ಒಬ್ಬ ವಿನಮ್ರ ಕಾರ್ಯಕರ್ತನಿಗೆ ಆ ಸ್ಥಾನವನ್ನು ನೀಡಿದ್ದು ತಮ್ಮ ಪಕ್ಷದ ಹಿರಿಮೆ ಎಂದು ಹೇಳಿದರು. ತಾವು ಸಿಎಂ ಆಗಿ ಅಧಿಕಾರ ಸ್ವೀಕರಿಸಿದಾಗ ಗುಜರಾತ್ ರಾಜ್ಯವು ಹಲವಾರು ಸವಾಲುಗಳನ್ನು ಎದುರಿಸುತ್ತಿತ್ತು ಎಂದು ಅವರು ಹೇಳಿದರು.


ಇದನ್ನೂ ಓದಿ: ಅಧಿಕಾರ ಗದ್ದುಗೆಗೇರಿ 23 ವರ್ಷಗಳ ಪೂರೈಸಿದ ಪ್ರಧಾನಿ ನರೇಂದ್ರ ಮೋದಿ

2001ರ ಕಚ್ ಭೂಕಂಪ, ಸೂಪರ್ ಸೈಕ್ಲೋನ್, ಭೀಕರ ಬರಗಾಲ, ಕೋಮುವಾದ ಮತ್ತು ಜಾತೀಯತೆಯಂತಹ ಹಲವು ದಶಕಗಳ ಕಾಂಗ್ರೆಸ್ ದುರಾಡಳಿತದ ಪರಂಪರೆಯಿಂದ ಗುಜರಾತ್ ನಲುಗಿತ್ತು. ಜನ ಶಕ್ತಿಯಿಂದ ನಡೆಸಲ್ಪಡುವ ಮೂಲಕ ನಾವು ಗುಜರಾತ್ ಅನ್ನು ಪುನರ್ ನಿರ್ಮಿಸಿದ್ದೇವೆ. ಕೃಷಿಯಂತಹ ಕ್ಷೇತ್ರಗಳಲ್ಲಿಯೂ ಸಹ ಅದನ್ನು ಪ್ರಗತಿಯ ಹೊಸ ಎತ್ತರಕ್ಕೆ ಮುನ್ನಡೆಸಿದ್ದೇವೆ ಎಂದು ಮೋದಿ ಹೇಳಿದ್ದಾರೆ.


13 ವರ್ಷಗಳ ಕಾಲ ಮುಖ್ಯಮಂತ್ರಿಯಾಗಿದ್ದ ನನ್ನನ್ನು 2014ರಲ್ಲಿ, ಭಾರತದ ಜನರು ಬಿಜೆಪಿಗೆ ದಾಖಲೆಯ ಜನಾದೇಶದೊಂದಿಗೆ ಆಶೀರ್ವದಿಸಿದರು. ನನಗೆ ಪ್ರಧಾನಿಯಾಗಿ ಸೇವೆ ಸಲ್ಲಿಸಲು ಅನುವು ಮಾಡಿಕೊಟ್ಟರು. ಇದು ಐತಿಹಾಸಿಕ ಕ್ಷಣವಾಗಿತ್ತು. ಆ ಬಾರಿ 30 ವರ್ಷಗಳಲ್ಲಿ ಮೊದಲ ಬಾರಿಗೆ ಬಿಜೆಪಿ ಪೂರ್ಣ ಬಹುಮತವನ್ನು ಪಡೆದುಕೊಂಡಿತು ಎಂದು ಮೋದಿ ಹಳೆಯ ದಿನಗಳನ್ನು ನೆನಪಿಸಿಕೊಂಡಿದ್ದಾರೆ.


“ಕಳೆದ ದಶಕದಲ್ಲಿ ನಮ್ಮ ರಾಷ್ಟ್ರವು ಎದುರಿಸುತ್ತಿರುವ ಹಲವಾರು ಸವಾಲುಗಳನ್ನು ಎದುರಿಸಲು ನಾವು ಸಮರ್ಥರಾಗಿದ್ದೇವೆ. 25 ಕೋಟಿಗೂ ಹೆಚ್ಚು ಜನರು ಬಡತನದ ಕಪಿಮುಷ್ಠಿಯಿಂದ ಮುಕ್ತರಾಗಿದ್ದಾರೆ. ಭಾರತವು ಐದನೇ ಅತಿದೊಡ್ಡ ಆರ್ಥಿಕತೆಯಾಗಿದೆ. ಇದು ವಿಶೇಷವಾಗಿ ನಮ್ಮ ಎಂಎಸ್‌ಎಂಇಗಳು, ಸ್ಟಾರ್ಟ್‌ಅಪ್‌ಗಳ ವಲಯ ಮತ್ತು ಹೆಚ್ಚಿನವುಗಳಿಗೆ ಸಹಾಯ ಮಾಡಿದೆ. ನಮ್ಮ ಕಷ್ಟಪಟ್ಟು ದುಡಿಯುವ ರೈತರು, ನಾರಿ ಶಕ್ತಿ, ಯುವ ಶಕ್ತಿ, ಮತ್ತು ಬಡವರು ಹಾಗೂ ಸಮಾಜದ ಕಟ್ಟಕಡೆಯ ವರ್ಗಗಳಿಗೆ ಸಮೃದ್ಧಿಯ ಹೊಸ ಮಾರ್ಗಗಳು ತೆರೆದಿವೆ ಎಂದು ಅವರು ಹೇಳಿದರು.

ಇದನ್ನೂ ಓದಿ: ಜಾರ್ಖಂಡ್‌ ಮಾಜಿ ಸಿಎಂ ಚಂಪೈ ಸೊರೆನ್‌ ಆರೋಗ್ಯ ವಿಚಾರಿಸಿದ ಪ್ರಧಾನಿ ಮೋದಿ

“ಜಗತ್ತು ನಮ್ಮೊಂದಿಗೆ ತೊಡಗಿಸಿಕೊಳ್ಳಲು, ನಮ್ಮ ಜನರಲ್ಲಿ ಹೂಡಿಕೆ ಮಾಡಲು ಮತ್ತು ನಮ್ಮ ಯಶಸ್ಸಿನ ಭಾಗವಾಗಲು ಉತ್ಸುಕವಾಗಿದೆ ಎಂದು ಮೋದಿ ಹೇಳಿದ್ದಾರೆ.


ನರೇಂದ್ರ ಮೋದಿ ಅವರು ಅಕ್ಟೋಬರ್ 7, 2001ರಂದು ಮೊದಲ ಬಾರಿಗೆ ಗುಜರಾತ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. 2014ರಲ್ಲಿ ಪ್ರಧಾನಿಯಾಗುವ ಮೊದಲು 13 ವರ್ಷಗಳ ಕಾಲ ಗುಜರಾತ್ ಮುಖ್ಯಮಂತ್ರಿಯಾಗಿ ಅವರು ಅಧಿಕಾರ ನಿರ್ವಹಿಸಿದ್ದರು. ಅವರು ಈ ಬಾರಿ ಜೂನ್‌ನಲ್ಲಿ ಸತತ ಮೂರನೇ ಅವಧಿಗೆ ಪ್ರಧಾನ ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:15 pm, Mon, 7 October 24