AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೇಶದ ಹಿತಾಸಕ್ತಿ ರಕ್ಷಣೆಗೆ ವಾಯುಶಕ್ತಿಯೇ ಮುಖ್ಯ ಅಸ್ತ್ರ: ನಿವೃತ್ತಿಯ ಹೊಸ್ತಿಲಲ್ಲಿ ವಾಯುಪಡೆ ಮುಖ್ಯಸ್ಥ ಎ.ಪಿ. ಸಿಂಗ್ ಹೆಮ್ಮೆಯ ಸಂದೇಶ

ನಿವೃತ್ತಿ ಹೊಸ್ತಿಲಲ್ಲಿರುವ ವಾಯುಪಡೆ ಮುಖ್ಯಸ್ಥ ಎ.ಪಿ. ಸಿಂಗ್, ದೇಶದ ಹಿತಾಸಕ್ತಿ ರಕ್ಷಣೆಗೆ ವಾಯುಶಕ್ತಿಯೇ ಅತಿ ಮುಖ್ಯ ಅಸ್ತ್ರ ಎಂದು ಪ್ರತಿಪಾದಿಸಿದರು. ಭಾರತೀಯ ವಾಯುಪಡೆ ಈಗ ಅಸಾಧಾರಣ, ಬಹು-ಡೊಮೇನ್ ಪಡೆಯಾಗಿ ಬೆಳೆದಿದ್ದು, ಯಾವುದೇ ಸವಾಲು ಎದುರಿಸಲು ಸಿದ್ಧವಾಗಿದೆ. 94ನೇ ವಾಯುಪಡೆ ದಿನಾಚರಣೆಯಲ್ಲಿ ಮಾತನಾಡಿದ ಅವರು, ವಾಯುಪಡೆಯ ನಿರಂತರ ಕಾರ್ಯಾಚರಣಾ ಸಾಮರ್ಥ್ಯ ವೃದ್ಧಿ ಹಾಗೂ 'ಆಪರೇಷನ್ ಸಿಂಧೂರ್' ಯಶಸ್ಸನ್ನು ಶ್ಲಾಘಿಸಿದರು.

ದೇಶದ ಹಿತಾಸಕ್ತಿ ರಕ್ಷಣೆಗೆ ವಾಯುಶಕ್ತಿಯೇ ಮುಖ್ಯ ಅಸ್ತ್ರ: ನಿವೃತ್ತಿಯ ಹೊಸ್ತಿಲಲ್ಲಿ ವಾಯುಪಡೆ ಮುಖ್ಯಸ್ಥ ಎ.ಪಿ. ಸಿಂಗ್ ಹೆಮ್ಮೆಯ ಸಂದೇಶ
ಎಪಿ ಸಿಂಗ್ Image Credit source: Defence News
ನಯನಾ ರಾಜೀವ್
|

Updated on: Oct 08, 2026 | 11:07 AM

Share

ಗಾಜಿಯಾಬಾದ್, ಅಕ್ಟೋಬರ್ 08: ಭಾರತೀಯ ವಾಯುಪಡೆ ಈಗ ಅಸಾಧಾರಣ, ಸಮರ್ಥ, ನೆಟ್‌ವರ್ಕ್ ಕೇಂದ್ರಿತ ಮತ್ತು ಬಹು-ಡೊಮೇನ್ ಪಡೆಯಾಗಿ ಬೆಳೆದಿದೆ ಎಂದು ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಎಪಿ ಸಿಂಗ್ ಹೇಳಿದ್ದಾರೆ. ಗಾಜಿಯಾಬಾದ್‌ನ ಹಿಂದನ್ ವಾಯುನೆಲೆಯಲ್ಲಿ ನಡೆದ 94ನೇ ವಾಯುಪಡೆ ದಿನಾಚರಣೆಯಲ್ಲಿ ಮಾತನಾಡಿದ ಅವರು, ದೇಶದ ಭದ್ರತೆಗೆ ಎದುರಾಗುವ ಯಾವುದೇ ಸವಾಲನ್ನು ಎದುರಿಸಲು ಐಎಎಫ್​ ಸಿದ್ಧವಾಗಿದೆ ಎಂದು ಹೇಳಿದರು. ದೇಶದ ಸಾರ್ವಭೌಮತ್ವ ಮತ್ತು ಹಿತಾಸಕ್ತಿಯನ್ನು ರಕ್ಷಿಸುವಲ್ಲಿ ವಾಯುಶಕ್ತಿಯೇ ಪ್ರಾಥಮಿಕ ಅಸ್ತ್ರವಾಗಿದೆ ಎಂಬುದನ್ನು ಪ್ರಸ್ತುತ ಜಾಗತಿಕ ಸಂಘರ್ಷಗಳು ಸಾಬೀತುಪಡಿಸಿವೆ ಎಂದರು. ಇದೇ ವೇಳೆ ಕರ್ತವ್ಯದ ಹಾದಿಯಲ್ಲಿ ಪ್ರಾಣಾರ್ಪಣೆ ಮಾಡಿದ ವಾಯು ಯೋಧರಿಗೆ ಅವರು ಗೌರವ ನಮನ ಸಲ್ಲಿಸಿದರು.

ಕಳೆದ 94 ವರ್ಷಗಳಲ್ಲಿ ಭಾರತೀಯ ವಾಯುಪಡೆ ತನ್ನ ಕಾರ್ಯಾಚರಣಾ ಸಾಮರ್ಥ್ಯವನ್ನು ನಿರಂತರವಾಗಿ ಹೆಚ್ಚಿಸಿಕೊಂಡಿದೆ ಎಂದು ಎಪಿ ಸಿಂಗ್ ಹೇಳಿದರು. ಜಗತ್ತಿನ ವಿವಿಧ ಸಂಘರ್ಷಗಳು ದೇಶದ ಹಿತಾಸಕ್ತಿಗಳನ್ನು ರಕ್ಷಿಸುವಲ್ಲಿ ವಾಯುಶಕ್ತಿಯ ಮಹತ್ವವನ್ನು ಮತ್ತೊಮ್ಮೆ ತೋರಿಸಿವೆ ಎಂದು ಅವರು ಹೇಳಿದರು. ಆಪರೇಷನ್ ಸಿಂಧೂರ್ ಸಂದರ್ಭದಲ್ಲಿ ಐಎಎಫ್​ ತನ್ನ ಕಾರ್ಯಾಚರಣೆಯ ವೇಗ ಮತ್ತು ಸಾಮರ್ಥ್ಯವನ್ನು ಪ್ರದರ್ಶಿಸಿದೆ ಎಂದು ಅವರು ಉಲ್ಲೇಖಿಸಿದರು. ಐಎಎಫ್​ನ ನೆಟ್‌ವರ್ಕ್ ಆಧಾರಿತ ಕಮಾಂಡ್ ಮತ್ತು ಕಂಟ್ರೋಲ್ ವ್ಯವಸ್ಥೆಗಳು ಆಧುನಿಕ ಯುದ್ಧ ಕಾರ್ಯಾಚರಣೆಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.

ಕಾರ್ಯಾಚರಣೆಯ ಸಾಮರ್ಥ್ಯ

ನಮ್ಮ ಸಾಮರ್ಥ್ಯಗಳು ಸರಿಯಾದ ದಿಕ್ಕಿನಲ್ಲಿ ವೃದ್ಧಿಸುತ್ತಿವೆ. ಐಎಎಫ್ ದೇಶದ ನಿರೀಕ್ಷೆಗಳನ್ನು ತಲುಪುವುದು ಮಾತ್ರವಲ್ಲ, ಅವುಗಳನ್ನು ಮೀರಿ ಮುನ್ನಡೆಯಲಿದೆ. ದೇಶದ ಮೇಲೆ ಎದುರಾಗುವ ಯಾವುದೇ ಸವಾಲನ್ನು ಹಿಮ್ಮೆಟ್ಟಿಸಲು ಪಡೆ ಸದಾ ಜಾಗರೂಕವಾಗಿದೆ ಎಂದು ಭರವಸೆ ನೀಡಿದರು.

ಆಪರೇಷನ್ ಸಿಂಧೂರ್ ಯಶಸ್ಸು:

‘ಆಪರೇಷನ್ ಸಿಂಧೂರ್’ ಕಾರ್ಯಾಚರಣೆಯನ್ನು ಉಲ್ಲೇಖಿಸಿದ ಅವರು, ಭಾರತೀಯ ವಾಯುಪಡೆಯ ಯುದ್ಧ ಕಾರ್ಯಾಚರಣೆಯ ವೇಗ ಮತ್ತು ನಿಖರತೆಯನ್ನು ಈ ಕಾರ್ಯಾಚರಣೆ ಜಗತ್ತಿಗೆ ತೋರಿಸಿಕೊಟ್ಟಿದೆ ಎಂದು ಶ್ಲಾಘಿಸಿದರು.

ಮತ್ತಷ್ಟು ಓದಿ:

ಭಾರತೀಯ ವಾಯುಪಡೆಯ ನೂತನ ಮುಖ್ಯಸ್ಥರಾಗಿ ಏರ್ ಮಾರ್ಷಲ್ ಅಶುತೋಷ್ ದೀಕ್ಷಿತ್ ನೇಮಕ

ನಿವೃತ್ತಿಯ ಹೊಸ್ತಿಲಲ್ಲಿ ಭಾವನಾತ್ಮಕ ಮಾತು:

ಅಕ್ಟೋಬರ್ 31 ರಂದು ನಿವೃತ್ತರಾಗಲಿರುವ ಏರ್ ಚೀಫ್ ಮಾರ್ಷಲ್ ಎ.ಪಿ. ಸಿಂಗ್, “ಈ ಮಹಾನ್ ಪಡೆಯ ಮುಖ್ಯಸ್ಥನಾಗಿ ಸೇವೆ ಸಲ್ಲಿಸಿದ್ದು ನನ್ನ ಜೀವನದ ಅತಿದೊಡ್ಡ ಸೌಭಾಗ್ಯ ಮತ್ತು ಅತ್ಯಂತ ಹೆಮ್ಮೆಯ ಕ್ಷಣ” ಎಂದು ಸ್ಮರಿಸಿದರು. ವಾಯುಪಡೆ ಮುಖ್ಯಸ್ಥರು 1960ರ ದಶಕದ ವಿಂಟೇಜ್ ಕಾರಿನಲ್ಲಿ ಸಮಾರಂಭದ ಸ್ಥಳಕ್ಕೆ ಆಗಮಿಸಿದ್ದು, ಆಕಾಶದಲ್ಲಿ ಮೂರು ಹೆಲಿಕಾಪ್ಟರ್‌ಗಳು ‘ಧ್ವಜ’ ರಚನೆಯಲ್ಲಿ ಹಾರಾಟ ನಡೆಸಿ ಗೌರವ ವಂದನೆ ಸಲ್ಲಿಸಿದವು.

ರಫೇಲ್ (Rafale), ಸುಖೋಯ್ ಸು-30 ಎಂಕೆಐ (Su-30 MKI) ಮತ್ತು ಜಾಗ್ವಾರ್ (Jaguar) ಯುದ್ಧ ವಿಮಾನಗಳು ಟಾರ್ಮ್ಯಾಕ್‌ನಲ್ಲಿ ಗಮನ ಸೆಳೆದವು. ಲಘು ಯುದ್ಧ ಹೆಲಿಕಾಪ್ಟರ್ ‘ಎಲ್‌ಸಿಎಚ್ ಪ್ರಚಂಡ್’ (LCH Prachand), ‘ಎಎಲ್‌ಎಚ್ ಧ್ರುವ್’ (ALH Dhruv) ಹೆಲಿಕಾಪ್ಟರ್‌ಗಳು ಹಾಗೂ ಸುಧಾರಿತ ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆಗಳು ಸ್ಥಿರ ಪ್ರದರ್ಶನದಲ್ಲಿ ಅನಾವರಣಗೊಂಡವು. ಈ ಕಾರ್ಯಕ್ರಮದಲ್ಲಿ ಮೂರೂ ಸೇನೆಗಳ ಮುಖ್ಯಸ್ಥರು, ಹಿರಿಯ ಸೇನಾಧಿಕಾರಿಗಳು ಮತ್ತು ನಿವೃತ್ತ ಏರ್ ಚೀಫ್ ಮಾರ್ಷಲ್‌ಗಳು ಭಾಗವಹಿಸಿದ್ದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ನಯನಾ ರಾಜೀವ್
ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
Live: ಕರ್ನಾಟಕದ ಮುಖ್ಯ ಚುನಾವಣಾ ಆಯುಕ್ತರ ಸುದ್ದಿಗೋಷ್ಠಿ ನೇರಪ್ರಸಾರ
Live: ಕರ್ನಾಟಕದ ಮುಖ್ಯ ಚುನಾವಣಾ ಆಯುಕ್ತರ ಸುದ್ದಿಗೋಷ್ಠಿ ನೇರಪ್ರಸಾರ
ಆಸ್ಪತ್ರೆಗೆ ದಾಖಲಾದ ಡಿಸಿಎಂ ಪರಮೇಶ್ವರ್; ಆರೋಗ್ಯ ವಿಚಾರಿಸಿದ ಸಿಎಂ ಡಿಕೆಶಿ
ಆಸ್ಪತ್ರೆಗೆ ದಾಖಲಾದ ಡಿಸಿಎಂ ಪರಮೇಶ್ವರ್; ಆರೋಗ್ಯ ವಿಚಾರಿಸಿದ ಸಿಎಂ ಡಿಕೆಶಿ
ಅರ್ನಾಬ್ ಅಬ್ಬರ: ಕಾಕಿನಾಡಕ್ಕೆ ರೆಡ್​​ ಅಲರ್ಟ್
ಅರ್ನಾಬ್ ಅಬ್ಬರ: ಕಾಕಿನಾಡಕ್ಕೆ ರೆಡ್​​ ಅಲರ್ಟ್
ಬೀದರ್‌ನ 8 ವಿದ್ಯಾರ್ಥಿಗಳಿಗೆ ವಿಮಾನಯಾನದ ಉಡುಗೊರೆ ನೀಡಿದ ಶಿಕ್ಷಕ!
ಬೀದರ್‌ನ 8 ವಿದ್ಯಾರ್ಥಿಗಳಿಗೆ ವಿಮಾನಯಾನದ ಉಡುಗೊರೆ ನೀಡಿದ ಶಿಕ್ಷಕ!
ಪ್ರಮೋದಾದೇವಿ ಆರೋಪಗಳ ಬಗ್ಗೆ ಸಿಎಂ ಡಿಕೆ ಶಿವಕುಮಾರ್​​ ಏನಂದ್ರು?
ಪ್ರಮೋದಾದೇವಿ ಆರೋಪಗಳ ಬಗ್ಗೆ ಸಿಎಂ ಡಿಕೆ ಶಿವಕುಮಾರ್​​ ಏನಂದ್ರು?
ಸ್ಟಿಂಗ್ ಪ್ರಕರಣ: ಸಿಸಿಬಿಗೆ ಇನ್ನೂ ಸಿಕ್ಕಿಲ್ಲ 2 ಮದರ್ ಡಿವೈಸ್, ಮೊಬೈಲ್!
ಸ್ಟಿಂಗ್ ಪ್ರಕರಣ: ಸಿಸಿಬಿಗೆ ಇನ್ನೂ ಸಿಕ್ಕಿಲ್ಲ 2 ಮದರ್ ಡಿವೈಸ್, ಮೊಬೈಲ್!
ಸೌಜನ್ಯ ಪ್ರಕರಣ ಮರು ತನಿಖೆ: 15ಕ್ಕೂ ಹೆಚ್ಚು ಅಧಿಕಾರಿಗಳಿಗೆ SIT ನೋಟಿಸ್
ಸೌಜನ್ಯ ಪ್ರಕರಣ ಮರು ತನಿಖೆ: 15ಕ್ಕೂ ಹೆಚ್ಚು ಅಧಿಕಾರಿಗಳಿಗೆ SIT ನೋಟಿಸ್
ಹಾಸನಾಂಬೆ ಭಕ್ತರಿಗೆ ಗುಡ್‌ನ್ಯೂಸ್‌; ವಿಶೇಷ ರೈಲು, 200ಕ್ಕೂ ಹೆಚ್ಚು ಬಸ್‌!
ಹಾಸನಾಂಬೆ ಭಕ್ತರಿಗೆ ಗುಡ್‌ನ್ಯೂಸ್‌; ವಿಶೇಷ ರೈಲು, 200ಕ್ಕೂ ಹೆಚ್ಚು ಬಸ್‌!
ಕಬ್ಬು ಬೆಳೆಗಾರರ ಸಭೆ ಮುಗಿಸಿ ಸಿಎಂ ಡಿಕೆಶಿ ಹೇಳಿದ್ದೇನು ನೋಡಿ
ಕಬ್ಬು ಬೆಳೆಗಾರರ ಸಭೆ ಮುಗಿಸಿ ಸಿಎಂ ಡಿಕೆಶಿ ಹೇಳಿದ್ದೇನು ನೋಡಿ
ಬಿಗ್ ಬಾಸ್ ಮನೆಯಲ್ಲಿ ಶೆಟ್ಟಿ ಡಾನ್ ಮದುವೆ; ವರನ ಹುಡುಕಾಟ ಶುರು
ಬಿಗ್ ಬಾಸ್ ಮನೆಯಲ್ಲಿ ಶೆಟ್ಟಿ ಡಾನ್ ಮದುವೆ; ವರನ ಹುಡುಕಾಟ ಶುರು