Video ಡ್ಯಾಂನಲ್ಲಿ ಸಿಲುಕಿದ್ದ ವ್ಯಕ್ತಿಯ ರೋಚಕ ರಕ್ಷಣಾ ಕಾರ್ಯಾಚರಣೆ

| Updated By: ಸಾಧು ಶ್ರೀನಾಥ್​

Updated on: Aug 17, 2020 | 12:42 PM

ರಾಯ್ಪುರ: ನಿನ್ನೆ ಸಾಯಂಕಾಲ ಡ್ಯಾಂ ಬಳಿ ಸಿಲುಕಿದ್ದ ವ್ಯಕ್ತಿಯೋರ್ವನನ್ನ ಭಾರತೀಯ ವಾಯುಪಡೆ ಸಿಬ್ಬಂದಿ ಹೆಲಿಕಾಪ್ಟರ್​ ಮೂಲಕ ರಕ್ಷಿಸಿರುವ ರೋಚಕ ಕಾರ್ಯಾಚರಣೆ ಇಂದು ನಡೆದಿದೆ. ಕಳೆದ ಕೆಲವು ದಿನಗಳಿಂದ ಛತ್ತೀಸ್​ಗಢದಲ್ಲಿ ಭಾರಿ ಮಳೆಯಾಗುತ್ತಿದ್ದ ಹಿನ್ನೆಲೆಯಲ್ಲಿ ರಾಜ್ಯದ ಬಿಲಾಸ್​ಪುರ್​ ನಗರದ ಬಳಿಯಿರುವ ಖುತಾಘಾಟ್​ ಡ್ಯಾಂನ ಗೇಟ್​ಗಳನ್ನು ತೆರೆಯಲಾಗಿದೆ. ಈ ವೇಳೆ ಹೊರಹರಿವು ಹೆಚ್ಚಾಗಿ ಡ್ಯಾಂ ಬಳಿಯಿದ್ದ ವ್ಯಕ್ತಿಯೊಬ್ಬ ನೀರಿನ ಪ್ರಮಾಣ ಏಕಾಏಕಿ ಹೆಚ್ಚಾದ್ದರಿಂದ ಅಲ್ಲೇ ಸಿಲುಕಿಕೊಂಡುಬಿಟ್ಟ. ಸಂತ್ರಸ್ಥನ ಕೂಗು ಕೇಳಿ ಸ್ಥಳಕ್ಕೆ ದೌಡಾಯಿಸಿದ ಸ್ಥಳೀಯರು ಮತ್ತು SDRF ರಕ್ಷಣಾ ತಂಡವು […]

Video ಡ್ಯಾಂನಲ್ಲಿ ಸಿಲುಕಿದ್ದ ವ್ಯಕ್ತಿಯ ರೋಚಕ ರಕ್ಷಣಾ ಕಾರ್ಯಾಚರಣೆ
Follow us on

ರಾಯ್ಪುರ: ನಿನ್ನೆ ಸಾಯಂಕಾಲ ಡ್ಯಾಂ ಬಳಿ ಸಿಲುಕಿದ್ದ ವ್ಯಕ್ತಿಯೋರ್ವನನ್ನ ಭಾರತೀಯ ವಾಯುಪಡೆ ಸಿಬ್ಬಂದಿ ಹೆಲಿಕಾಪ್ಟರ್​ ಮೂಲಕ ರಕ್ಷಿಸಿರುವ ರೋಚಕ ಕಾರ್ಯಾಚರಣೆ ಇಂದು ನಡೆದಿದೆ.

ಕಳೆದ ಕೆಲವು ದಿನಗಳಿಂದ ಛತ್ತೀಸ್​ಗಢದಲ್ಲಿ ಭಾರಿ ಮಳೆಯಾಗುತ್ತಿದ್ದ ಹಿನ್ನೆಲೆಯಲ್ಲಿ ರಾಜ್ಯದ ಬಿಲಾಸ್​ಪುರ್​ ನಗರದ ಬಳಿಯಿರುವ ಖುತಾಘಾಟ್​ ಡ್ಯಾಂನ ಗೇಟ್​ಗಳನ್ನು ತೆರೆಯಲಾಗಿದೆ. ಈ ವೇಳೆ ಹೊರಹರಿವು ಹೆಚ್ಚಾಗಿ ಡ್ಯಾಂ ಬಳಿಯಿದ್ದ ವ್ಯಕ್ತಿಯೊಬ್ಬ ನೀರಿನ ಪ್ರಮಾಣ ಏಕಾಏಕಿ ಹೆಚ್ಚಾದ್ದರಿಂದ ಅಲ್ಲೇ ಸಿಲುಕಿಕೊಂಡುಬಿಟ್ಟ.

ಸಂತ್ರಸ್ಥನ ಕೂಗು ಕೇಳಿ ಸ್ಥಳಕ್ಕೆ ದೌಡಾಯಿಸಿದ ಸ್ಥಳೀಯರು ಮತ್ತು SDRF ರಕ್ಷಣಾ ತಂಡವು ವ್ಯಕ್ತಿಯನ್ನ ರಕ್ಷಿಸಲು ಪ್ರಯತ್ನಿಸಿದ್ದರು. ಆದರೆ, ನೀರಿನ ರಭಸ ಹೆಚ್ಚಾಗಿದ್ದರಿಂದ ವಾಯುಪಡೆಯ ಸಹಾಯಕ್ಕೆ ಮನವಿ ಮಾಡಿದರು. ಮನವಿಗೆ ಕೂಡಲೇ ಸ್ಪಂದಿಸಿದ ವಾಯುಪಡೆಯು ಹೆಲಿಕಾಪ್ಟರ್​ ಮೂಲಕ ರೋಚಕ ರಕ್ಷಣಾ ಕಾರ್ಯಾಚರಣೆ ನಡೆಸಿ ವ್ಯಕ್ತಿಯನ್ನ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.