ಬ್ರಹ್ಮೋಸ್ ‘ಸರ್​ಫೇಸ್ ಟು ಸರ್​ಫೇಸ್’ ಕ್ಷಿಪಣಿ ಪ್ರಯೋಗ ಯಶಸ್ವಿ

ಬ್ರಹ್ಮೋಸ್ ‘ಸರ್​ಫೇಸ್ ಟು ಸರ್​ಫೇಸ್’ ಕ್ಷಿಪಣಿ ಪ್ರಯೋಗ ಯಶಸ್ವಿ

ದೆಹಲಿ:ಕಾಶ್ಮೀರದ ಗಡಿಯಲ್ಲಿ ದಿನೇ ದಿನೆ ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದೆ. ಪಾಪಿ ಪಾಕಿಸ್ತಾನ ಕಾಲುಕೆರೆದು ಜಗಳ ಮಾಡೋದಕ್ಕೆ ಮುಂದಾಗ್ತಿದೆ. ಈ ಮಧ್ಯೆ ಭಾರತ ಸೇನಾ ಬಲ ಹೆಚ್ಚಿಕೊಳ್ಳುವುದರತ್ತ ಗಮನಹರಿಸುತ್ತಿದ್ದು, ನಿನ್ನೆ ಕೂಡ ಅಂತಹದ್ದೇ ಮಹತ್ವದ ಕಾರ್ಯದಲ್ಲಿ ಹೆಮ್ಮೆಯ ವಾಯುಪಡೆ ಯಶಸ್ವಿಯಾಗಿದೆ. ಈ ಯಶಸ್ಸು ಭೀಮಬಲ ತಂದಿದೆ.

ಭಾರತ ಬಲಿಷ್ಠವಾಗುತ್ತಿದೆ. ತನ್ನ ವಿರುದ್ಧ ಯುದ್ಧಕ್ಕೆ ಕಾದು ನಿಂತಿರುವ ಪಾಪಿ ಪಾಕ್​ಗೆ ಬಿಸಿಮುಟ್ಟಿಸಲು ಸದಾ ಸನ್ನದ್ಧವಾಗಿರುವ ಭಾರತ, ಇದೀಗ ಮತ್ತೊಂದು ಯಶಸ್ಸನ್ನ ಮುಡಿಗೇರಿಸಿಕೊಂಡಿದೆ. ವಿಶ್ವದ ಕೆಲವೇ ಕೆಲವು ಬಲಿಷ್ಠ ರಾಷ್ಟ್ರಗಳ ಬಳಿ ಇರುವ ತಾಕತ್ತು ಭಾರತಕ್ಕೂ ಲಭಿಸಿದೆ. ಅಂದಹಾಗೆ ‘ಸರ್​ಫೇಸ್ ಟು ಸರ್​ಫೇಸ್’ ಮಿಸೈಲ್ ಪರೀಕ್ಷೆ ಯಶಸ್ವಿಯಾಗಿ ನಡೆದಿದೆ.

300 ಕಿ.ಮೀ. ದೂರದಲ್ಲಿದ್ದರೂ ವೈರಿಪಡೆ ಉಡೀಸ್..!
ನಿನ್ನೆ ಬ್ರಹ್ಮೋಸ್​ನ ಮತ್ತೊಂದು ಕ್ಷಿಪಣಿಯನ್ನ ಭಾರತ ಪ್ರಯೋಗ ನಡೆಸಿದೆ. ಪಾಕಿಸ್ತಾನದ ಜೊತೆಗೆ ಚೀನಾಗೂ ಟಾಂಗ್ ಕೊಡಲು ಅಂಡಮಾನ್ ದ್ವೀಪ ಸಮೂಹದಲ್ಲಿ ಈ ಪರೀಕ್ಷೆ ನಡೆದಿದೆ. ‘ಸರ್​ಫೇಸ್ ಟು ಸರ್​ಫೇಸ್’ ಸಾಮರ್ಥ್ಯದ ಹೊಸ ಬ್ರಹ್ಮೋಸ್ ಮಿಸೈಲ್ ವೈರಿ ಪಡೆಯ ಹುಟ್ಟಡಗಿಸಬಹುದು. ಇದರ ವ್ಯಾಪ್ತಿ ಕೂಡ ಗಮನ ಸೆಳೆಯುವಂತಹದ್ದು. ಸುಮಾರು 300 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಅಡಗಿರುವ ವೈರಿಪಡೆಯ ಹೆಡೆಮುರಿ ಕಟ್ಟಿ, ಗೆಲುವಿನ ನಗೆಬೀರುವ ತಾಕತ್ತು ಹೊಸ ಕ್ಷಿಪಣಿಗಿದೆ.

ವೈರಿಗಳ ಮೇಲೆ ದಾಳಿ ನಡೆಸುವುದು ಸುಲಭ..!
ಈ ಕ್ಷಿಪಣಿಯನ್ನ ಲಾಂಚ್ ಮಾಡೋದು ಕೂಡ ತುಂಬಾ ಸುಲಭವಾಗಿದೆ. ರಷ್ಯಾ ಸಹಭಾಗಿತ್ವದಲ್ಲಿ ಬ್ರಹ್ಮೋಸ್ ಕ್ಷಿಪಣಿಯನ್ನ ಭಾರತ ತಯಾರಿಸುತ್ತಿದೆ. ಸಬ್​ಮರೀನ್, ಹಡಗು, ಏರ್​ಕ್ರಾಫ್ಟ್​ಗಳು ಸೇರಿದಂತೆ ನೆಲದ ಮೇಲಿಂದ ಕೂಡ ಈ ಕ್ಷಿಪಣಿಯನ್ನ ಉಡಾಯಿಸೋದು ಸುಲಭ. ಆ ಮೂಲಕ ದೇಶದ ರಕ್ಷಣೆಗೆ ಈ ಕ್ಷಿಪಣಿಗಳು ಮಹತ್ವದ ಕೊಡುಗೆ ನೀಡುವಂತಿವೆ.

Click on your DTH Provider to Add TV9 Kannada