ಭಾರತೀಯ ವಾಯು ಪಡೆಯ ಅಪಾಚೆ ಹೆಲಿಕಾಪ್ಟರ್ನ್ನು ಮಧ್ಯಪ್ರದೇಶದ ಭಿಂಡ್ ಜಿಲ್ಲೆಯ ಹಳ್ಳಿಯೊಂದರ ಜಮೀನಿನಲ್ಲಿ ತುರ್ತು ಭೂ ಸ್ಪರ್ಶ ಮಾಡಲಾಗಿದೆ. ತಾಂತ್ರಿಕ ದೋಷದಿಂದಾಗಿ ಹೆಲಿಕಾಪ್ಟರ್ನ್ನು ತುರ್ತು ಭೂಸ್ಪರ್ಶ ಮಾಡಬೇಕಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಧ್ಯಪ್ರದೇಶದ ಭಿಂಡ್ ಜಿಲ್ಲೆಯ ಜಖನೌಲಿ ಗ್ರಾಮದ ಬಳಿಯ ಸಿಂಧ್ ನದಿಯ ಕಂದರಗಳ ಮೈದಾನದಲ್ಲಿ ಅಪಾಚೆ ಯುದ್ಧ ಹೆಲಿಕಾಪ್ಟರ್ ಅನ್ನು ಮುನ್ನೆಚ್ಚರಿಕೆಯಾಗಿ ಲ್ಯಾಂಡಿಂಗ್ ಮಾಡಲಾಗಿದೆ ಎಂದು ಭಾರತೀಯ ವಾಯುಪಡೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಸದ್ಯಕ್ಕೆ, ಹೆಚ್ಚಿನ ವಿವರಗಳಿಗಾಗಿ ಕಾಯಲಾಗುತ್ತಿದೆ.
ಮಾಹಿತಿ ತಿಳಿದ ಕೂಡಲೇ ನಾಯಗಾಂವ್, ಉಮ್ರಿ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಹೆಲಿಕಾಪ್ಟರ್ ಬಳಿ ಯೋಧರು ಬಿಗಿ ಬಂದೋಬಸ್ತ್ ಮಾಡಿದ್ದಾರೆ. ಯಾರನ್ನೂ ಹತ್ತಿರ ಬರಲು ಬಿಡುತ್ತಿಲ್ಲ. ಆದರೂ ಗ್ರಾಮಸ್ಥರು ಅಲ್ಲಿಯೇ ಇದ್ದಾರೆ. ಹೆಲಿಕಾಪ್ಟರ್ ನೋಡಲು ಸುತ್ತಮುತ್ತಲ ಗ್ರಾಮಗಳ ಜನರು ಕೂಡ ಸ್ಥಳಕ್ಕೆ ಆಗಮಿಸುತ್ತಿದ್ದಾರೆ. ಇಬ್ಬರು ಪೈಲಟ್ಗಳು ಸುರಕ್ಷಿತವಾಗಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:44 am, Mon, 29 May 23