ಲಕ್ನೋ: ಪತ್ನಿಯ ಮೇಲೆ ಹಲ್ಲೆ ಹಾಗೂ ಮಾವನ ಮನೆಗೆ ಬಲವಂತವಾಗಿ ನುಗ್ಗಲು ಯತ್ನಿಸಿರುವ ಆರೋಪದಡಿ ಹರಿಯಾಣ ರಾಜ್ಯದ ಗುರುಗ್ರಾಮ್ನಲ್ಲಿ ಪ್ರಾದೇಶಿಕ ಕಾರ್ಮಿಕ ಇಲಾಖೆಯ ಅಧಿಕಾರಿಯಾಗಿರುವ ರಾಜೀವ್ ನಯನ್ನನ್ನು ಪೊಲೀಸರು ಬಂಧಿಸಿದ್ದಾರೆ.
2013 ರ ಬ್ಯಾಚ್ನ IAS ಅಧಿಕಾರಿ ಶೈಲಜಾ ಶರ್ಮಾ ಮೇಲೆ ಪತಿ ರಾಜೀವ್ ನಯನ್ ಹಲ್ಲೆ ಮಾಡಿರುವ ಆರೋಪ ಮತ್ತು ಶನಿವಾರ ತಡರಾತ್ರಿ ಉತ್ತರ ಪ್ರದೇಶದ ಮುಜಫರ್ನಗರದಲ್ಲಿರುವ ತಮ್ಮ ಮಾವನ ಮನೆಗೆ ಬಲವಂತವಾಗಿ ಪ್ರವೇಶಿಸಿರುವ ಆರೋಪದ ಮೇಲೆ ಅರೆಸ್ಟ್ ಆಗಿದ್ದಾರೆ. ಶೈಲಜಾ ಶರ್ಮಾ ಸದ್ಯ ಉತ್ತರ ಪ್ರದೇಶದಲ್ಲಿ ಜಂಟಿ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಶರ್ಮಾ ತನ್ನ ನಾಲ್ಕು ವರ್ಷದ ಮಗಳೊಂದಿಗೆ ಕಳೆದ ಶುಕ್ರವಾರ ತನ್ನ ತವರು ಮನೆಗೆ ಬಂದಿದ್ದರು. ಆಕೆ ನೀಡಿರುವ ದೂರಿನ ಪ್ರಕಾರ, ಪತಿ ರಾಜೀವ್ ನಯನ್ ತನ್ನ ಮಾವನ ಮನೆಗೆ ಬಂದು ಬಾಗಿಲು ತೆರೆಯುವ ಮುನ್ನವೇ ಅದನ್ನ ಮುರಿದು ಹಲ್ಲೆಗೆ ಯತ್ನಿಸಿದ್ದಾರೆ. ಪತ್ನಿಯನ್ನು ರಕ್ಷಿಸಲು ಬಂದ ಆಕೆಯ ಕುಟುಂಬ ಸದಸ್ಯರ ಮೇಲೂ ಹಲ್ಲೆ ನಡೆಸಿದ್ದಾರೆ ಎಂದು ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ.
ಶರ್ಮಾ ನೀಡಿರುವ ದೂರಿನ್ವಯ ಪೊಲೀಸರು ನಯನ್ ವಿರುದ್ಧ ದೂರು ದಾಖಲಿಸಿಕೊಂಡಿದ್ದರು. ನಯನ್ರನ್ನ ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಿ ಇದೀಗ ಜೈಲಿಗೆ ಕಳುಹಿಸಲಾಗಿದೆ.