ಶ್ರೀರಾಮನಿಗಾಗಿ ಸಿದ್ಧವಾಯ್ತು ನವರತ್ನ ಖಚಿತ ಉಡುಗೆ
[lazy-load-videos-and-sticky-control id=”oat1cOclWhI”] ದೆಹಲಿ: ರಾಮ ಮಂದಿರದ ಶಿಲಾನ್ಯಾಸಕ್ಕೆ ಭರದ ಸಿದ್ಧತೆ ನಡೀತಿದೆ. ಆಯೋಧ್ಯೆಯಲ್ಲಿ ಶ್ರೀರಾಮನಿಗಾಗಿ ವಿಶೇಷ ಉಡುಗೆ ತಯಾರಿಸಲಾಗುತ್ತಿದ್ದು, ವರ್ಣಮಯ ಬಟ್ಟೆ ಸಿದ್ಧ ಮಾಡಲಾಗುತ್ತಿದೆ. ನಾಳೆ ಮಧ್ಯಾಹ್ನ ಮಂದಿರದ ಶಿಲಾನ್ಯಾಸ ನೆರವೇರಲಿದೆ. ಸಮಾರಂಭದ ವೇಳೆ ರಾಮನ ಮೂರ್ತಿಗೆ ನವರತ್ನ ಖಚಿತ ಉಡುಗೆ ತೊಡಿಸಲಾಗುವುದು. ರಾಮ್ ಬಾಬುಲಾಲ್ ಎಂಬ ಸ್ಥಳೀಯ ಟೈಲರ್ ರಾಮನಿಗಾಗಿ ಈ ವಿಶೇಷ ಉಡುಗೆ ತಯಾರಿಸಿದ್ದಾರೆ. ನವರತ್ನಗಳನ್ನ ಒಳಗೊಂಡ ಹಸಿರು ಬಣ್ಣದ ಉಡುಗೆಯನ್ನ ಸಿದ್ಧಪಡಿಸಿ ದೇವಸ್ಥಾನದ ಟ್ರಸ್ಟ್ಗೆ ನೀಡಿದ್ದಾರೆ. ತಲೆಮಾರುಗಳಿಂದ ರಾಮನ ಸೇವೆಯಲ್ಲಿ ತೊಡಗಿರುವ ಬಾಬುಲಾಲ್ […]
[lazy-load-videos-and-sticky-control id=”oat1cOclWhI”]
ದೆಹಲಿ: ರಾಮ ಮಂದಿರದ ಶಿಲಾನ್ಯಾಸಕ್ಕೆ ಭರದ ಸಿದ್ಧತೆ ನಡೀತಿದೆ. ಆಯೋಧ್ಯೆಯಲ್ಲಿ ಶ್ರೀರಾಮನಿಗಾಗಿ ವಿಶೇಷ ಉಡುಗೆ ತಯಾರಿಸಲಾಗುತ್ತಿದ್ದು, ವರ್ಣಮಯ ಬಟ್ಟೆ ಸಿದ್ಧ ಮಾಡಲಾಗುತ್ತಿದೆ.
ನಾಳೆ ಮಧ್ಯಾಹ್ನ ಮಂದಿರದ ಶಿಲಾನ್ಯಾಸ ನೆರವೇರಲಿದೆ. ಸಮಾರಂಭದ ವೇಳೆ ರಾಮನ ಮೂರ್ತಿಗೆ ನವರತ್ನ ಖಚಿತ ಉಡುಗೆ ತೊಡಿಸಲಾಗುವುದು. ರಾಮ್ ಬಾಬುಲಾಲ್ ಎಂಬ ಸ್ಥಳೀಯ ಟೈಲರ್ ರಾಮನಿಗಾಗಿ ಈ ವಿಶೇಷ ಉಡುಗೆ ತಯಾರಿಸಿದ್ದಾರೆ. ನವರತ್ನಗಳನ್ನ ಒಳಗೊಂಡ ಹಸಿರು ಬಣ್ಣದ ಉಡುಗೆಯನ್ನ ಸಿದ್ಧಪಡಿಸಿ ದೇವಸ್ಥಾನದ ಟ್ರಸ್ಟ್ಗೆ ನೀಡಿದ್ದಾರೆ.
ತಲೆಮಾರುಗಳಿಂದ ರಾಮನ ಸೇವೆಯಲ್ಲಿ ತೊಡಗಿರುವ ಬಾಬುಲಾಲ್ ಕುಟುಂಬ ನಾಲ್ಕು ತಲೆಮಾರುಗಳಿಂದ ಬಾಬುಲಾಲ್ ಕುಟುಂಬ ಶ್ರೀರಾಮನ ಸೇವೆಯಲ್ಲಿ ತೊಡಗಿದೆ. ಶ್ರೀರಾಮ ಮೂರ್ತಿಗೆ ಉಡುಗೆ ತಯಾರಿಸುತ್ತಾ ಬಂದಿದ್ದಾರೆ. ಹೀಗಾಗಿ, ನಾಳೆ ಜರುಗಲಿರುವ ಸಮಾರಂಭಕ್ಕೂ ವಿಶೇಷ ಉಡುಗೆಗಳನ್ನ ತಯಾರಿಸಿದ್ದಾರೆ. ಸೂರತ್ನಿಂದ ಬಂದ ವಿಶೇಷ ಬಟ್ಟೆಯಿಂದ ಶ್ರೀರಾಮನ ಮೂರ್ತಿಗೆ ಏಳು ವಿಧದ ಬಣ್ಣದ ಉಡುಗೆಗಳನ್ನ ತಯಾರಿಸಿದ್ದಾರೆ.
ನಾಳೆ, ರಾಮ್ ಲಲ್ಲಾ ಹಸಿರು-ಕೇಸರಿ ಬಣ್ಣದ ಉಡುಗೆಯಲ್ಲಿ ಕಂಗೊಳಿಸಲಿದ್ದಾನೆ. ಜೊತೆಗೆ, ಸೋಮವಾರ ಬಿಳಿ ಬಟ್ಟೆ, ಮಂಗಳವಾರ ಕೆಂಪು, ಬುಧವಾರ ಹಸಿರು, ಗುರುವಾರ ಹಳದಿ, ಶುಕ್ರವಾರ ಬಿಳಿ, ಶನಿವಾರ ನೀಲಿ ಹಾಗೂ ಭಾನುವಾರ ಗುಲಾಬಿ ಬಣ್ಣದ ಉಡುಗೆಯನ್ನು ರಾಮನಿಗೆ ತೊಡಿಸಲಾಗುವುದು.
Published On - 2:20 pm, Tue, 4 August 20