AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಮ ಮಂದಿರ ಭೂಮಿ ಪೂಜೆ ಸಮಾರಂಭ: ಅಯೋಧ್ಯೆಯಲ್ಲಿ ಸಾಗಿದೆ ಭರ್ಜರಿ ತಯಾರಿ!

ಅಯೋಧ್ಯೆಯಲ್ಲಿ ಸಂಭ್ರಮ ಮೇಳೈಸಿದೆ. ಅಂತಿಮ ಹಂತದ ಸಿದ್ಧತೆಗಳು ಭರದಿಂದ ಸಾಗುತ್ತಿವೆ. ನಾಳೆ ಭೂಮಿ ಪೂಜೆ ಕಾರ್ಯಕ್ರಮ ಜರುಗಲಿದ್ದು, ಇದಕ್ಕಾಗಿ ಸಕಲ ತಯಾರಿಗಳು ಕೂಡ ನಡೀತಿದೆ. ಅಯೋಧ್ಯೆಯ ಹಾದಿ ಬೀದಿಗಳು ವರ್ಣಮಯವಾಗಿ ಕಂಗೊಳಿಸುತ್ತಿದೆ. ಅಯೋಧ್ಯೆಯಲ್ಲಿ ಮೊಳಗೋ ರಾಮನಾಮ ಜಪ ಇಡೀ ದೇಶಾದ್ಯಂತ ಪ್ರತಿಧ್ವನಿಸುತ್ತಿದೆ. ಈ ಸಂಭ್ರಮಕ್ಕೆ ಎಣೆಯಿಲ್ಲ. ಈ ಸಡಗರ, ಉತ್ಸವಕ್ಕೆ ಸಾಟಿಯೇ ಇಲ್ಲ ಎನ್ನುವಂತೆ ಅಯೋಧ್ಯೆ ಫಳ ಫಳ ಅಂತಾ ಹೊಳೆಯುತ್ತಿದೆ. ಕೋಟಿ ಕೋಟಿ ಭಕ್ತರು ಹಾಗೂ ರಾಮನ ಅನುಯಾಯಿಗಳು ನಾಳೆಗಾಗಿ ಕಾತುರದಿಂದ ಎದುರು ನೋಡ್ತಿದ್ದಾರೆ. ರಾಮ […]

ರಾಮ ಮಂದಿರ ಭೂಮಿ ಪೂಜೆ ಸಮಾರಂಭ: ಅಯೋಧ್ಯೆಯಲ್ಲಿ ಸಾಗಿದೆ ಭರ್ಜರಿ ತಯಾರಿ!
ಆಯೇಷಾ ಬಾನು
| Updated By: KUSHAL V|

Updated on: Aug 04, 2020 | 1:41 PM

Share

ಅಯೋಧ್ಯೆಯಲ್ಲಿ ಸಂಭ್ರಮ ಮೇಳೈಸಿದೆ. ಅಂತಿಮ ಹಂತದ ಸಿದ್ಧತೆಗಳು ಭರದಿಂದ ಸಾಗುತ್ತಿವೆ. ನಾಳೆ ಭೂಮಿ ಪೂಜೆ ಕಾರ್ಯಕ್ರಮ ಜರುಗಲಿದ್ದು, ಇದಕ್ಕಾಗಿ ಸಕಲ ತಯಾರಿಗಳು ಕೂಡ ನಡೀತಿದೆ. ಅಯೋಧ್ಯೆಯ ಹಾದಿ ಬೀದಿಗಳು ವರ್ಣಮಯವಾಗಿ ಕಂಗೊಳಿಸುತ್ತಿದೆ.

ಅಯೋಧ್ಯೆಯಲ್ಲಿ ಮೊಳಗೋ ರಾಮನಾಮ ಜಪ ಇಡೀ ದೇಶಾದ್ಯಂತ ಪ್ರತಿಧ್ವನಿಸುತ್ತಿದೆ. ಈ ಸಂಭ್ರಮಕ್ಕೆ ಎಣೆಯಿಲ್ಲ. ಈ ಸಡಗರ, ಉತ್ಸವಕ್ಕೆ ಸಾಟಿಯೇ ಇಲ್ಲ ಎನ್ನುವಂತೆ ಅಯೋಧ್ಯೆ ಫಳ ಫಳ ಅಂತಾ ಹೊಳೆಯುತ್ತಿದೆ. ಕೋಟಿ ಕೋಟಿ ಭಕ್ತರು ಹಾಗೂ ರಾಮನ ಅನುಯಾಯಿಗಳು ನಾಳೆಗಾಗಿ ಕಾತುರದಿಂದ ಎದುರು ನೋಡ್ತಿದ್ದಾರೆ.

ರಾಮ ಮಂದಿರ ಶಿಲಾನ್ಯಾಸಕ್ಕೆ ಅಂತಿಮ ಹಂತದ ಸಿದ್ಧತೆ! ಹೌದು.. ರಾಮ ಮಂದಿರ ಭೂಮಿ ಪೂಜೆಗೆ ಒಂದೇ ದಿನ ಬಾಕಿ ಉಳಿದಿದ್ದು, ಇಡೀ ಅಯೋಧ್ಯೆ ತ್ರೇತಾಯುಗದ ಚರಿತ್ರೆಯನ್ನ ನೆನಪಿಸುವಂತೆ ರೆಡಿಯಾಗ್ತಿದೆ. ನಾಳೆ ಪ್ರಧಾನಿ ಮೋದಿ, ರಾಮ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಲಿದ್ದಾರೆ. ಹೀಗಾಗಿ, ನಿನ್ನೆ ಖುದ್ದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ಅಯೋಧ್ಯೆಗೆ ಆಗಮಿಸಿ, ಅಂತಿಮ ಹಂತದ ಸಿದ್ಧತೆಗಳನ್ನ ಪರಿಶೀಲನೆ ಮಾಡಿದ್ರು. ಅಷ್ಟೇ ಅಲ್ಲ ರಾಮಮಂದಿರ ಟ್ರಸ್ಟ್‌ನ ಪ್ರಮುಖರ ಜೊತೆ ಸಭೆ ನಡೆಸಿದ್ರು.

ಹನುಮಾನ್ ಗಡಿ ದೇವಾಲಯ ಕಂಪ್ಲೀಟ್ ಸ್ಯಾನಿಟೈಸ್! ಅಯೋಧ್ಯೆಯನ್ನ ಕಾವಲುಗಾರನಂತೆ ಕಾಪಾಡ್ತಿರೋ ಹನುಮಾನ್ ಗಡಿ ಅರ್ಥಾತ್‌ ಆಂಜನೇಯನ ದೇವಸ್ಥಾನಕ್ಕೆ ತನ್ನದೇ ಆದ ಐತಿಹ್ಯವಿದೆ. ಪ್ರಧಾನಿ ಮೋದಿ ನಾಳೆ ಮೊದಲು ಇದೇ ದೇವಾಲಯಕ್ಕೆ ಭೇಟಿ ನೀಡಿ ಬಳಿಕ ರಾಮ ಮಂದಿರದ ಶಿಲಾನ್ಯಾಸ ನೆರವೇರಿಸಲಿದ್ದಾರೆ. ಹೀಗಾಗಿ, ಮುಂಜಾಗ್ರತಾ ಕ್ರಮವಾಗಿ ದೇವಾಲಯವನ್ನ ಕಂಪ್ಲೀಟ್‌ ಸ್ಯಾನಿಟೈಸ್​‌ ಮಾಡಲಾಗಿದೆ.

ಪ್ರಧಾನಿ ಮೋದಿ ತೆರಳುವ ಮಾರ್ಗ ಉದ್ದಕೂ ಸ್ಯಾನಿಟೈಸ್‌ ಒಂದ್ಕಡೆ ಶಿಲಾನ್ಯಾಸಕ್ಕೆ ಅಂತಿಮ ಹಂತದ ಸಿದ್ಧತೆ ನಡೀತಿದ್ರೆ, ಅಯೋಧ್ಯೆಯಲ್ಲಿ ಸ್ವಚ್ಛತೆ ವಿಚಾರದಲ್ಲೂ ಸಾಕಷ್ಟು ಮುನ್ನೆಚ್ಚರಿಕೆ ತೆಗೆದುಕೊಳ್ಳಲಾಗ್ತಿದೆ. ನಾಳೆ ಪ್ರಧಾನಿ ಮೋದಿ ತೆರಳುವ ಮಾರ್ಗವನ್ನ ಸ್ಯಾನಿಟೈಸ್​‌ ಮಾಡಲಾಯ್ತು. ಅಷ್ಟೇ ಅಲ್ಲ ಪ್ರಧಾನಿಯ ಭದ್ರತಾ ದಳವಾದ ಎಸ್‌ಪಿಜಿ ತಂಡವು ಕೂಡ ಈಗಾಗ್ಲೇ ಸ್ಥಳ ಪರಿಶೀಲನೆ ನಡೆಸುತ್ತಿದೆ.

ಕರ್ನಾಟಕದಲ್ಲಿ ಸಂಭ್ರಮ, ಮೆರವಣಿಗೆಗೆ ಬ್ರೇಕ್ ನಾಳೆ ರಾಮಮಂದಿರಕ್ಕೆ ಶಂಕುಸ್ಥಾಪನೆ ನಡೀತಿರೋ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಸಂಭ್ರಮಾಚರಣೆ ಹಾಗೂ ಮೆರವಣಿಗೆ ಮಾಡುವಂತಿಲ್ಲ ಅಂತಾ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಆದೇಶ ಹೊರಡಿಸಿದ್ದಾರೆ. ಈ ಬಗ್ಗೆ ಎಲ್ಲಾ ಜಿಲ್ಲೆಯ ಎಸ್‌ಪಿಗಳ ಜೊತೆಗೆ ವಿಡಿಯೋ ಕಾನ್ಫರೆನ್ಸ್ ಸಹ ನಡೆಸಿದ್ರು.

ಒಟ್ನಲ್ಲಿ, ರಾಮ ಮಂದಿರ ನಿರ್ಮಾಣಕ್ಕೆ ನಾಳೆ ಶಿಲಾನ್ಯಾಸ ನೆರವೇರುತ್ತಿದ್ದು, ಇದಕ್ಕಾಗಿ ಎಲ್ಲಾ ಸಿದ್ಧತೆಗಳೂ ನಡೀತಿದೆ. ಅಯೋಧ್ಯೆಯಲ್ಲಿ ಸಂಪೂರ್ಣ ಚಿತ್ರಣವೇ ಬದಲಾಗಿದ್ದು, ರಾಮಜನ್ಮಭೂಮಿ ಫಳಫಳ ಹೊಳೆಯುತ್ತಿದೆ.